Home ದಾವಣಗೆರೆ ನುಗ್ತೀನಿ, ಹೊಡೀತಿನಿ, ಬಡೀತಿನಿ, ಕಡೀತಿನಿ ಎಂಬುದು ಇಲ್ಲಿ ನಡೆಯಲ್ಲ, ಪೊಲೀಸ್ ಠಾಣೆಗೆ ನುಗ್ಗಿ ನೋಡಿ: ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ನುಗ್ತೀನಿ, ಹೊಡೀತಿನಿ, ಬಡೀತಿನಿ, ಕಡೀತಿನಿ ಎಂಬುದು ಇಲ್ಲಿ ನಡೆಯಲ್ಲ, ಪೊಲೀಸ್ ಠಾಣೆಗೆ ನುಗ್ಗಿ ನೋಡಿ: ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ತೀವಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನುಗ್ಗಿದರೆ ಏನು ಮಾಡಬೇಕೆಂಬುದು ಗೊತ್ತು, ಇವೆಲ್ಲಾ ಕರ್ನಾಟಕದಲ್ಲಿ ನಡೆಯಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನುಗ್ಗಿದರೆ ಕರ್ನಾಟಕದ ಗೃಹ ಸಚಿವರು ಏನ್ ಮಾಡ್ತಾರೆ ಎಂಬುದು ಅವರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ನುಗ್ಗುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ಧ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ ಅವರು, “ಒಂದು ವೇಳೆ ಪೊಲೀಸ್ ಠಾಣೆಗೆ ನುಗ್ಗಿದರೆ ಏನು ಕ್ರಮ ಕೈಗೊಳ್ಳಬೇಕು ಎನ್ನುವುದು ನಮಗೂ ಗೊತ್ತಿದೆ. ಇಂತಹ ಗಂಡಸ್ತನದ ಹೇಳಿಕೆಗಳು ಅಥವಾ ಬೆದರಿಕೆಗಳನ್ನು ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ, ಕರ್ನಾಟಕದಲ್ಲಿ ಅಲ್ಲ” ಎಂದು ಗರಂ ಆಗಿ ತಿರುಗೇಟು ನೀಡಿದರು.

ತಮ್ಮ ಮಾತನ್ನು ಮುಂದುವರಿಸಿದ ಸಚಿವರು, “ಕರ್ನಾಟಕದಲ್ಲಿ ಯಾರದೇ ಬೆದರಿಕೆಗೆ ಜಾಗವಿಲ್ಲ. ಇಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ಆಡಳಿತ ನಡೆಯುತ್ತದೆ” ಎಂದು ಸ್ಪಷ್ಟಪಡಿಸಿದರು.

ನುಗ್ತೀನಿ, ಹೊಡೀತಿನಿ, ಬಡೀತಿನಿ, ಕಡೀತಿನಿ ಎಂಬುದು ಇಲ್ಲಿ ನಡೆಯಲ್ಲ. ಉತ್ತರ ಪ್ರದೇಶದಲ್ಲಿ ಇವೆಲ್ಲವನ್ನೂ ಇಟ್ಟುಕೊಳ್ಳಿ. ಕರ್ನಾಟಕದಲ್ಲಿ ಬೇಡ ಎಂದು ಗರಂ ಆಗಿಯೇ ಹೇಳಿದರು.

ಕರ್ನಾಟಕದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನದಂತೆ ಕೆಲಸ ಮಾಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles