ಬೆಂಗಳೂರು: ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿಗೆ ಮನೆ ಮಕ್ಕಳು ಏನು ಮಾಡುತ್ತಾರೆ ಎಂಬುದೇ ಗೊತ್ತಿಲ್ಲ, ಇನ್ನು ಸಿದ್ಧಾರ್ಥ್ ವಿಹಾರ ಟ್ರಸ್ಟ್ ನಲ್ಲಿ ನಡೆಯುವುದು ಗೊತ್ತಾಗುತ್ತಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಾರ್ಮ್ 7 ಅವರ ನಾಯಕರ ಹೆಸರಿನಲ್ಲಿ ಹೋಗಿದೆ. ಯಾಕೆ ನಿಮ್ಮ ಲೆಟರ್ ಹೆಡ್ ನಲ್ಲಿ ಸಾವಿರಾರು ಫಾರಂಗಳನ್ನು ವಿತ್ ಡ್ರಾ ಮಾಡಲು ಕೊಟ್ಟಿದ್ದೀರಾ, ಇದರ ಬಗ್ಗೆ ರಾಜ್ಯಪಾಲರು, ಚುನಾವಣಾ ಆಯೋಗಕ್ಕೆ ಸ್ಪಷ್ಟೀಕರಣ ನೀಡಲಿ ಎಂದು ಹೇಳಿದ್ದಾರೆ.
“ಫಾರ್ಮ್ 7 ಅರ್ಜಿಗಳನ್ನು ವಿತ್ಡ್ರಾ ಮಾಡಲು ತಮ್ಮ ನಾಯಕರ ಲೆಟರ್ ಹೆಡ್ನಲ್ಲಿ ಸಾವಿರಾರು ಫಾರಂಗಳನ್ನು ನೀಡಿದ್ದಾರೆ. ಇದರ ಬಗ್ಗೆ ರಾಜ್ಯಪಾಲರಿಗೆ ಹಾಗೂ ಚುನಾವಣಾ ಆಯೋಗಕ್ಕೆ ಮೊದಲು ಸ್ಪಷ್ಟೀಕರಣ ನೀಡಲಿ” ಎಂದು ಸವಾಲೆಸೆದಿದ್ದಾರೆ.
ಮೋಸದಿಂದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದರೆ ದೂರು ನೀಡುವುದು ಮತದಾರರ ಹಕ್ಕಾಗಿದೆ. ಈ ಅರ್ಜಿಗಳು ಎಲ್ಲಿಂದ ಪ್ರಿಂಟ್ ಆಗಿ ಬರುತ್ತಿವೆ? ತಮ್ಮ ಸ್ವಂತ ಮನೆ ಮಕ್ಕಳ ವಿಷಯವೇ ಗೊತ್ತಿಲ್ಲದ ಕುಮಾರಸ್ವಾಮಿಗೆ ಚುನಾವಣಾ ಆಯೋಗದಲ್ಲಿ ಏನಾಗುತ್ತಿದೆ ಎಂಬುದು ತಿಳಿದಿದೆಯಾ ಎಂದು ಅವರು ವ್ಯಂಗ್ಯವಾಡಿದರು.
ಫಾರಂ 7 ನೀಡುವುದು ಹಕ್ಕಾದರೂ ಮೋಸದಿಂದ ಮತದಾನದಿಂದ ಪಟ್ಟಿಯಿಂದ ಹೊರಗಿಟ್ಟರೆ ಮತದಾರರು ದೂರು ಕೊಡುವುದು ತಪ್ಪಾ? ಎಲ್ಲಿಂದ ಪ್ರಿಂಟ್ ಬರುತ್ತಿದೆ? ಮನೆ ಮಕ್ಕಳ ಬಗ್ಗೆ ಗೊತ್ತಿಲ್ಲ. ಚುನಾವಣಾ ಆಯೋಗದಲ್ಲಿ ಏನಾಗುತ್ತದೆ ಎಂಬುದು ಅವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ನವರು ಹೇಳಿಕೊಟ್ಟ ಹಾಗೆ ಹೇಳಲು ಬಂದರೆ ನಾವು ಸುಮ್ಮನಿರಲ್ಲ, ಸರಿಯಾಗಿಯೇ ಉತ್ತರ ಕೊಡುತ್ತೇವೆ. ಮೊದಲು ನಿಮ್ಮ ಗೌರವ ಉಳಿಸಿಕೊಳ್ಳಿ. ಯಾರದ್ದೋ ಮಾತು ಕೇಳಿ ಆರೋಪ ಮಾಡಿದರೆ ನಾವೂ ತಕ್ಕ ಉತ್ತರ ಕೊಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.





Leave a comment