Home ಕ್ರೈಂ ನ್ಯೂಸ್ ಆಸ್ತಿ ಆಸೆಗೆ ಹೆತ್ತ ತಾಯಿಯನ್ನೇ ಕೊಂದ ಮಗಳು ಬಂಧನ: 1,200  ಸಿಸಿಟಿವಿ ಜಾಲಾಡಿ ‘ಸಾಧು’ ವೇಷದಲ್ಲಿದ್ದ ಪ್ರಿಯಕರನ ಹಿಡಿದ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಸ್ತಿ ಆಸೆಗೆ ಹೆತ್ತ ತಾಯಿಯನ್ನೇ ಕೊಂದ ಮಗಳು ಬಂಧನ: 1,200  ಸಿಸಿಟಿವಿ ಜಾಲಾಡಿ ‘ಸಾಧು’ ವೇಷದಲ್ಲಿದ್ದ ಪ್ರಿಯಕರನ ಹಿಡಿದ ಪೊಲೀಸರು!

Share
ಆಸ್ತಿ
Share

ಡೆಹ್ರಾಡೂನ್: ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ, ಮಗಳೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಉತ್ತರಾಖಂಡದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯ್‌ವಾಲಾದ ಮೋತಿಚೂರ್ ಪ್ರದೇಶದ ನಿವಾಸಿ ಗಜಾನಿ ದೇವಿ (65) ಕೊಲೆಯಾದ ದುರ್ದೈವಿ. ಸೆಪ್ಟೆಂಬರ್ 21 ರಿಂದ ನಾಪತ್ತೆಯಾಗಿದ್ದ ಇವರ ಮನೆಯ ಬೀಗ ಮುರಿದು ಒಳಪ್ರವೇಶಿಸಿದಾಗ, ಬಾತ್‌ರೂಂನಲ್ಲಿ ಅವರ ಶವ ಪತ್ತೆಯಾಗಿತ್ತು.

1,200 ಸಿಸಿಟಿವಿ ಪರಿಶೀಲನೆ:

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಸಿಗ್ನಲ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಿದರು. ಗಜಾನಿ ದೇವಿ ಮತ್ತು ಆಕೆಯ ಪುತ್ರಿ ಶಿಲ್ಪಾ ಥಾಪಾ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಜಗಳ ನಡೆಯುತ್ತಿತ್ತು. ಘಟನೆ ನಡೆದ ದಿನ ಶಿಲ್ಪಾಳ ಪ್ರಿಯಕರ ಶಿವನಾರಾಯಣ್ ಪಾಂಡೆ ಮನೆಯ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡಿದ್ದು ಹಾಗೂ ಆ ಬಳಿಕ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು.

ಸುಮಾರು 1,200 ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದ ಪೊಲೀಸರು, ಹರಿದ್ವಾರದ ಆಶ್ರಮವೊಂದರಲ್ಲಿ ಸಾಧುವಿನ ವೇಷದಲ್ಲಿದ್ದ ಶಿವನಾರಾಯಣ್‌ನನ್ನು ಸೆಪ್ಟೆಂಬರ್ 25 ರಂದು ಬಂಧಿಸಿದರು. ಆತ ನೀಡಿದ ಸುಳಿವು ಆಧರಿಸಿ ಹತ್ಯೆಗೆ ಸಂಚು ರೂಪಿಸಿದ್ದ ಮಗಳು ಶಿಲ್ಪಾ ಥಾಪಾಳನ್ನು ಸೆಪ್ಟೆಂಬರ್ 26 ರಂದು ಬಂಧಿಸಲಾಗಿದೆ.

ಆಸ್ತಿ ಮಾರಾಟಕ್ಕೆ ವಿರೋಧ:

ತಾಯಿ ತನಗೆ ಆಸ್ತಿಯಲ್ಲಿ ಪಾಲು ನೀಡದೆ ಭೂಮಿ ಮಾರಾಟ ಮಾಡಲು ಮುಂದಾಗಿದ್ದರಿಂದ, ಆಕೆಯನ್ನು ಮುಗಿಸಲು ಶಿಲ್ಪಾ ಸಂಚು ರೂಪಿಸಿದ್ದಳು. ಯೋಜನೆಯಂತೆ ಸೆಪ್ಟೆಂಬರ್ 21 ರಂದು ಮನೆಗೆ ತೆರಳಿದ ಶಿವನಾರಾಯಣ್, ವೃದ್ಧೆಯನ್ನು ಕೊಲೆ ಮಾಡಿ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದ ಎಂಬುದು ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬಿದ್ದಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles