ವರುಣಾ: ನಾನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದೇನೆ. ಗೆಲುವನ್ನೂ ಕಂಡಿದ್ದೇನೆ, ಸೋಲನ್ನೂ ಕಂಡಿದ್ದೇನೆ. ಎಂಟು ಬಾರಿ ಚುನಾವಣೆಯಲ್ಲಿ ಗೆಲ್ಲುವ ಅವಕಾಶವನ್ನು ಜನರು ನನಗೆ ನೀಡಿದ್ದಾರೆ. ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಈ ಎಲ್ಲ ಸ್ಥಾನಮಾನಗಳಿಗಿಂತ ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸವೇ ನನಗೆ ದೊಡ್ಡದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರುಣಾ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಇನ್ನೂ ಒಂದೂವರೆ ವರ್ಷ, ಅಂದರೆ 2028ರವರೆಗೆ ವರುಣಾ ಕ್ಷೇತ್ರದ ಶಾಸಕನಾಗಿ ನಿಮ್ಮೊಂದಿಗೆ ಇರಲಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ; ಶಾಸಕನಾಗಿರಲಿ, ಇಲ್ಲದಿರಲಿ, ವರುಣಾ ಜನರ ಸೇವೆಯಿಂದ ನಾನು ಎಂದಿಗೂ ಹಿಂದೆ ಸರಿಯುವುದಿಲ್ಲ
ಎಂದು ತಿಳಿಸಿದರು.
ಯತೀಂದ್ರ ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಮುಂದುವರಿದು ಈಗ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚಿವರೂ ಆಗಿದ್ದಾರೆ. ನನಗೆ ನೀಡಿದಂತೆ ಅವರಿಗೂ ನಿಮ್ಮ ಮಾರ್ಗದರ್ಶನ, ಪ್ರೀತಿ, ಅಭಿಮಾನ ಮತ್ತು ಆಶೀರ್ವಾದ ಇರಲಿ ಎಂದರು.
ವರುಣಾ ಕ್ಷೇತ್ರದ ಜನರನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ರಾಜಕೀಯ ಬದುಕಿಗೆ ಶಕ್ತಿ ತುಂಬಿದ ನಿಮ್ಮ ಋಣವನ್ನು ಜನಸೇವೆಯ ಮೂಲಕವೇ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ಪಕ್ಷದ ಬದ್ಧತೆಗಳನ್ನು ಅವರು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ವರುಣಾ ಕ್ಷೇತ್ರದ ನಾಲ್ಕು ಅವಧಿಗಳಲ್ಲಿ ಸುಮಾರು ₹5,034 ಕೋಟಿ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂಬ ತೃಪ್ತಿ ನನಗಿದೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ನನ್ನ ಬದ್ಧತೆ ಮುಂದುವರಿಯಲಿದೆ ಎಂದರು.
- Dasanur Development Works
- DK Shivakumar CM
- Karnataka Guarantee Schemes
- Karnataka Politics Updates.
- Siddaramaiah
- Siddaramaiah News
- Siddaramaiah Varuna Speech
- Varuna constituency
- Varuna News Kannada
- Yathindra Siddaramaiah
- ಕರ್ನಾಟಕ ಬರ ಪರಿಸ್ಥಿತಿ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಸರ್ಕಾರ
- ಗ್ಯಾರಂಟಿ ಯೋಜನೆಗಳು
- ಡಿ. ಕೆ. ಶಿವಕುಮಾರ್
- ದಾಸನೂರು ಅಭಿವೃದ್ಧಿ ಕಾಮಗಾರಿ
- ಯತೀಂದ್ರ ಸಿದ್ದರಾಮಯ್ಯ
- ವರುಣಾ ಕ್ಷೇತ್ರ
- ವರುಣಾ ಸುದ್ದಿ
- ಸಿದ್ದರಾಮಯ್ಯ





Leave a comment