ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅವರ ನಡುವಿನ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಯಾವತ್ತೂ ಕಡಿಮೆಯಾಗಿಲ್ಲ. ಇಬ್ಬರೂ ಹಲವು ಬಾರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೇರವಾಗಿ ಮಾತನಾಡದಿದ್ದರೂ, ಅವರ ನಡುವಿನ ಆತ್ಮೀಯತೆಯ ಕುರಿತು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಇದೀಗ ವಿಜಯ್ ದೇವರಕೊಂಡ ಅವರ ಮಾತೊಂದು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. “ರಶ್ಮಿಕಾ ಪ್ರತಿದಿನ 10-15 ಸಲ ‘ಐ ಲವ್ ಯೂ’ ಅಂತ ಹೇಳ್ತಾರೆ” ಎನ್ನುವ ರೀತಿಯ ಹೇಳಿಕೆಯೊಂದು ಅಭಿಮಾನಿಗಳ ಗಮನ ಸೆಳೆದಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಮಾತ್ರವಲ್ಲದೆ ನೆಟ್ಟಿಗರೂ ಸಹ “ಇಷ್ಟು ಪ್ರೀತಿ ಎಲ್ಲಿಂದ?”, “ವಿಜಯ್-ರಶ್ಮಿಕಾ ಜೋಡಿ ಯಾವಾಗಲೂ ಸ್ಪೆಷಲ್” ಎಂದು ಕಮೆಂಟ್ ಬಾಕ್ಸ್ನಲ್ಲಿ ಹಾರ್ಟ್ ಎಮೋಜಿಗಳೊಂದಿಗೆ ಶುಭ ಹಾರೈಸುತ್ತಿದ್ದಾರೆ.
ಸಿನಿಮಾ ಪರದೆಯಲ್ಲಿ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರಗಳ ಮೂಲಕ ರೊಮ್ಯಾಂಟಿಕ್ ಮೋಡಿ ಮಾಡಿದ್ದ ಈ ಹಿಟ್ ಜೋಡಿ, ನಿಜ ಜೀವನದಲ್ಲೂ ಒಟ್ಟಿಗಿದ್ದಾರಾ ಎಂಬ ಪ್ರಶ್ನೆ ಕಳೆದ ಹಲವು ವರ್ಷಗಳಿಂದ ಗಾಂಧಿನಗರ ಹಾಗೂ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಂದು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಪ್ರೇಮವನ್ನು ಜಗತ್ತಿಗೆ ತೋರಿಸುವುದಕ್ಕಿಂತ, ಪ್ರತಿದಿನ ಒಬ್ಬರಿಗೊಬ್ಬರು ಹಂಚಿಕೊಳ್ಳುವ ‘ಐ ಲವ್ ಯೂ’ಗಳೇ ಹೆಚ್ಚು ವಿಶೇಷ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು!
- Cinema News Kannada
- Rashmika Mandanna
- Rashmika Mandanna dating news
- Rashmika Vijay love story
- Rashmika Vijay relationship
- Tollywood Updates
- Vijay Deverakonda
- Vijay Deverakonda I love you statement
- Vijay Deverakonda interview
- ಗೀತ ಗೋವಿಂದಂ ಜೋಡಿ
- ಟಾಲಿವುಡ್ ಗಾಸಿಪ್
- ರಶ್ಮಿಕಾ ಮಂದಣ್ಣ
- ರಶ್ಮಿಕಾ ಮಂದಣ್ಣ ಡೇಟಿಂಗ್
- ರಶ್ಮಿಕಾ ವಿಜಯ್ ಲವ್
- ವಿಜಯ್ ದೇವರಕೊಂಡ
- ವಿಜಯ್ ದೇವರಕೊಂಡ ಹೇಳಿಕೆ
- ಸಿನಿಮಾ ಸುದ್ದಿ





Leave a comment