Home ಕ್ರೈಂ ನ್ಯೂಸ್ ಬಾವಿ ಪತಿ ಪ್ರಪಾತಕ್ಕೆ ತಳ್ಳಿ ಚಾಟ್‌ಜಿಪಿಟಿಯಲ್ಲಿ ದುಃಖಿಸುವುದು ಹೇಗೆಂದು ಹುಡುಕಿದ ಕಿರಾತಕಿ: ಗೂಗಲ್‌ನಲ್ಲಿ ಪೋಲಿಸರಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕಿದ್ದ ಸಿಯಾ ಗೋಯಲ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬಾವಿ ಪತಿ ಪ್ರಪಾತಕ್ಕೆ ತಳ್ಳಿ ಚಾಟ್‌ಜಿಪಿಟಿಯಲ್ಲಿ ದುಃಖಿಸುವುದು ಹೇಗೆಂದು ಹುಡುಕಿದ ಕಿರಾತಕಿ: ಗೂಗಲ್‌ನಲ್ಲಿ ಪೋಲಿಸರಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕಿದ್ದ ಸಿಯಾ ಗೋಯಲ್!

Share
ಸಿಯಾ ಗೋಯಲ್
Share

ಮಹಾರಾಷ್ಟ್ರ (ಪುಣೆ): ಪ್ರಪಾತಕ್ಕೆ ತಳ್ಳಿ ಭಾವಿ ಪತಿಯನ್ನು ಕೊಲೆ ಮಾಡಿದ ಬಳಿಕ, ಪೋಲಿಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ದುಃಖ ವ್ಯಕ್ತಪಡಿಸುವುದು ಹೇಗೆ ಎಂದು ‘ಚಾಟ್‌ಜಿಪಿಟಿ’ (ChatGPT) ಯಲ್ಲಿ ಹುಡುಕಾಟ ನಡೆಸಿದ್ದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ 5,053 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿಯನ್ನು  ಸಲ್ಲಿಸಿದ್ದಾರೆ.

ಘಟನೆಯ ಹಿನ್ನೆಲೆ:

ಲೋಹಗಢ ಕೋಟೆಯಲ್ಲಿ ಜೂನ್ 18, 2026 ರಂದು ಕೇತನ್ ಅಗರ್ವಾಲ್ ಎಂಬ ಯುವಕ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ. ಆರಂಭದಲ್ಲಿ ಇದು ಆಕಸ್ಮಿಕವಾಗಿ ನಡೆದ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಪೋಲಿಸರ ತೀವ್ರ ತನಿಖೆಯ ನಂತರ, ಇದು ಆತನ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಮತ್ತು ಸತಿಯೊಬ್ಬ ಸೇರಿ ನಡೆಸಿದ ಸುಸಜ್ಜಿತ ಕೊಲೆ ಎಂಬುದು ಸಾಬೀತಾಗಿದೆ.

ಚಾಟ್‌ಜಿಪಿಟಿ ಮತ್ತು ಗೂಗಲ್ ತನಿಖೆಯಲ್ಲಿ ಸಿಕ್ಕ ಡಿಜಿಟಲ್ ಪುರಾವೆಗಳು:

ಪೋಲಿಸರ ಚಾರ್ಜ್‌ಶೀಟ್‌‌ ಪ್ರಕಾರ, ಸಿಯಾ ಗೋಯಲ್ ಹಾಗೂ ಸಹಚರರು ಕೊಲೆಗೂ ಮುನ್ನ ಹಾಗೂ ಕೊಲೆಯ ನಂತರ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಗೂಗಲ್‌ ಅನ್ನು ವ್ಯಾಪಕವಾಗಿ ಬಳಸಿಕೊಂಡಿದ್ದರು:

ಭಾವನಾತ್ಮಕ ನಾಟಕ: ಕೇತನ್‌ನನ್ನು ಹತ್ಯೆ ಮಾಡುವ ಮುನ್ನ ಆತನ ತಾಯಿಗೆ ಭಾವನಾತ್ಮಕ ಕ್ಷಮಾಪಣಾ ಪತ್ರ ಬರೆಯಲು ಸಿಯಾ ಚಾಟ್‌ಜಿಪಿಟಿ ನೆರವು ಪಡೆದಿದ್ದಳು.

ಸುಳ್ಳು ದುಃಖ ಪ್ರದರ್ಶನ: ಕೊಲೆಯ ನಂತರ ಪೋಲಿಸರು ಹಾಗೂ ಸಂಬಂಧಿಕರ ಮುಂದೆ ದುಃಖದ ನಟನೆ ಹೇಗೆ ಮಾಡಬೇಕು ಎಂಬುದನ್ನೂ ಚಾಟ್‌ಜಿಪಿಟಿಯಲ್ಲಿ ಹುಡುಕಿದ್ದಳು.

ಪೋಲಿಸರಿಂದ ತಪ್ಪಿಸಿಕೊಳ್ಳುವ ಸಂಚು: ಡಿಲೀಟ್ ಮಾಡಿದ ವಾಟ್ಸಾಪ್ ಮೆಸೇಜ್‌ಗಳನ್ನು ಪೋಲಿಸರು ರಿಕವರಿ ಮಾಡಲು ಸಾಧ್ಯವೇ? ಮಾಧ್ಯಮಗಳಲ್ಲಿ ಈ ಪ್ರಕರಣದ ವರದಿ ಹೇಗೆ ಬರುತ್ತಿದೆ? ಎಂದು ಆಕೆ ಗೂಗಲ್‌ನಲ್ಲಿ ನಿರಂತರವಾಗಿ ಸರ್ಚ್ ಮಾಡಿದ್ದಳು.

ಕ್ರೈಂ ಸಿನಿಮಾಗಳ ಪ್ರಭಾವ: ಕೊಲೆಗೆ ಸಂಚು ರೂಪಿಸುವ ಮುನ್ನ ಆರೋಪಿಗಳು ಬದ್ಲಾ (Badla), ಚೋರ್ ನಿಕಲ್ ಕೇ ಭಾಗಾ, ಇತ್ತೇಫಾಕ್ ಸೇರಿದಂತೆ ಹಲವು ಸಸ್ಪೆನ್ಸ್ ಕ್ರೈಮ್ ಸಿನಿಮಾಗಳನ್ನು ವೀಕ್ಷಿಸಿ ಅಧ್ಯಯನ ನಡೆಸಿದ್ದರು.

ಪೂರ್ವಯೋಜಿತ ಕೊಲೆ ಯತ್ನ:

ಘಟನೆ ನಡೆಯುವುದಕ್ಕೂ ಮುನ್ನ ಮೇ 31 ರಂದು ಸಿಯಾ, ಕೇತನ್‌ನನ್ನು ಅದೇ ಕೋಟೆಗೆ ಕರೆದೊಯ್ದು ಆತನಿಗೆ ಅರಿವಿಲ್ಲದಂತೆ ಆತನ ಹಿಂಭಾಗದ ಕೋನಗಳಿಂದ ಫೋಟೋಗಳನ್ನು ತೆಗೆದುಕೊಂಡಿದ್ದಳು. ಜೂನ್ 14 ರಂದು (ಕೊಲೆಗೆ 4 ದಿನಗಳ ಮುನ್ನ) ಆತನನ್ನು ಪ್ರಪಾತಕ್ಕೆ ತಳ್ಳಲು ಮೊದಲ ಯತ್ನ ನಡೆಸಿ ವಿಫಲವಾಗಿದ್ದಳು. ಅಂತಿಮವಾಗಿ ಜೂನ್ 18 ರಂದು ಕೇತನ್‌ನನ್ನು ತಳ್ಳಿ ಕೊಲೆ ಮಾಡಲಾಗಿದೆ.

ಪೋಲಿಸರು ಸೈಬರ್ ಫೊರೆನ್ಸಿಕ್ ತನಿಖೆಯ ಮೂಲಕ ಡಿಲೀಟ್ ಮಾಡಲಾಗಿದ್ದ 11 ವಾಟ್ಸಾಪ್ ಚಾಟ್‌ಗಳು, 9,200 ವಿಡಿಯೋಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles