Home ದಾವಣಗೆರೆ KEA ನೇಮಕಾತಿ 2026: ನಗರ ಸ್ಥಳೀಯ ಸಂಸ್ಥೆಗಳಲ್ಲಿ 210 ನೀರು ಸರಬರಾಜು ಆಪರೇಟರ್, ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

KEA ನೇಮಕಾತಿ 2026: ನಗರ ಸ್ಥಳೀಯ ಸಂಸ್ಥೆಗಳಲ್ಲಿ 210 ನೀರು ಸರಬರಾಜು ಆಪರೇಟರ್, ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share
KEA
Share

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಗರಾಡಳಿತ ನಿರ್ದೇಶನಾಲಯದ ಅಡಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ನೀರು ಸರಬರಾಜು ಆಪರೇಟರ್, ಸಹಾಯಕ ನೀರು ಸರಬರಾಜು ಆಪರೇಟರ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಒಟ್ಟು 210 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

ನೀರು ಸರಬರಾಜು ಆಪರೇಟರ್: 80 ಹುದ್ದೆಗಳು

ಸಹಾಯಕ ನೀರು ಸರಬರಾಜು ಆಪರೇಟರ್: 122 ಹುದ್ದೆಗಳು

ಎಲೆಕ್ಟ್ರಿಷಿಯನ್ ಗ್ರೇಡ್-1: 03 ಹುದ್ದೆಗಳು

ಎಲೆಕ್ಟ್ರಿಷಿಯನ್ ಗ್ರೇಡ್-2: 05 ಹುದ್ದೆಗಳು

ಒಟ್ಟು ಹುದ್ದೆಗಳು: 210

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಹಾಗೂ ಸಂಬಂಧಿತ ಟ್ರೇಡ್‌ನಲ್ಲಿ ITI (ಎಲೆಕ್ಟ್ರಿಕಲ್ / ಫಿಟ್ಟರ್) ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:

ನೀರು ಸರಬರಾಜು ಆಪರೇಟರ್ / ಎಲೆಕ್ಟ್ರಿಷಿಯನ್ ಗ್ರೇಡ್-1: ರೂ. 37,500 – ರೂ. 76,100/- (ಪ್ರತಿ ತಿಂಗಳು)

ಸಹಾಯಕ ನೀರು ಸರಬರಾಜು ಆಪರೇಟರ್ / ಎಲೆಕ್ಟ್ರಿಷಿಯನ್ ಗ್ರೇಡ್-2: ರೂ. 34,100 – ರೂ. 67,600/- (ಪ್ರತಿ ತಿಂಗಳು)

ವಯೋಮಿತಿ:

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು: 40 ವರ್ಷ

ವಯೋಸಡಿಲಿಕೆ:

ಪ್ರವರ್ಗ 2A, 2B, 3A, 3B: 3 ವರ್ಷಗಳು (43 ವರ್ಷಗಳವರೆಗೆ)

SC / ST / ಪ್ರವರ್ಗ-1: 5 ವರ್ಷಗಳು (45 ವರ್ಷಗಳವರೆಗೆ)

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ ಮತ್ತು ಪ್ರವರ್ಗ 2A/2B/3A/3B: ರೂ. 750/-

SC / ST / ಪ್ರವರ್ಗ-1 / ಮಾಜಿ ಸೈನಿಕರು / ತೃತೀಯ ಲಿಂಗಿಗಳು: ರೂ. 500/-

ವಿಶೇಷ ಪ್ರೋತ್ಸಾಹಕ ಅಭ್ಯರ್ಥಿಗಳು / ವಿಕಲಚೇತನರು: ರೂ. 250/-

ಪಾವತಿ ವಿಧಾನ: ಆನ್‌ಲೈನ್ ಮೂಲಕ

ಆಯ್ಕೆ ಪ್ರಕ್ರಿಯೆ:

ಕೆಇಎ (KEA) ನಡೆಸುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (ಪತ್ರಿಕೆ-1: ಕನ್ನಡ ಭಾಷಾ ಪರೀಕ್ಷೆ ಮತ್ತು ಪತ್ರಿಕೆ-2)

ದಾಖಲಾತಿ ಪರಿಶೀಲನೆ

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 16-09-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-10-2026 (ವಿಸ್ತರಿಸಲಾಗಿದೆ)

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08-10-2026 (ವಿಸ್ತರಿಸಲಾಗಿದೆ)

ಸ್ಪರ್ಧಾತ್ಮಕ ಪರೀಕ್ಷೆ: ನವೆಂಬರ್ 2026

Official Website: cetonline.karnataka.gov.in

Share

Leave a comment

Leave a Reply

Your email address will not be published. Required fields are marked *

Related Articles