Home ಕ್ರೈಂ ನ್ಯೂಸ್ ರಕ್ತಸಿಕ್ತ ಸ್ಥಿತಿಯಲ್ಲೂ ವಿಮಾನ ಪತನ ತಡೆದ ಭಾರತೀಯ ಹೀರೋ: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಕ್ತಸಿಕ್ತ ಸ್ಥಿತಿಯಲ್ಲೂ ವಿಮಾನ ಪತನ ತಡೆದ ಭಾರತೀಯ ಹೀರೋ: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್!

Share
ವಿಮಾನ
Share

ದುಬೈ/ಟೆಲ್ ಅವಿವ್: ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌‌ಗೆ ಹೊರಟಿದ್ದ ಫ್ಲೈದುಬೈ (FZ 1073) ವಿಮಾನದಲ್ಲಿ ಮಧ್ಯ ಆಕಾಶದಲ್ಲೇ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಓಮನ್ ಮೂಲದ ಸಹ-ಪೈಲಟ್ ವಿಮಾನವನ್ನು ಪತನಗೊಳಿಸುವ ದುರುದ್ದೇಶದಿಂದ ಕಾಕ್‌‌ಪಿಟ್ ಒಳಗಡೆಯೇ ಧಾಂದಲೆ ನಡೆಸಿದ್ದಾನೆ.

ವಿಮಾನದ ಪ್ರಧಾನ ನಾಯಕ, ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಮೇಲೆ ಸಹ-ಪೈಲಟ್ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಸಹ-ಪೈಲಟ್‌ನೊಂದಿಗೆ ಜೀವದ ಹಂಗು ತೊರೆದು ಹೋರಾಡಿದ್ದಾರೆ.

ಸಾಹಸ ಮತ್ತು ತುರ್ತು ಲ್ಯಾಂಡಿಂಗ್:

17,000 ಅಡಿ ಕುಸಿತ: ಸಂಘರ್ಷದ ಸಮಯದಲ್ಲಿ ವಿಮಾನವು ಕೆಲವೇ ನಿಮಿಷಗಳಲ್ಲಿ 17,000ಕ್ಕೂ ಹೆಚ್ಚು ಅಡಿ ಕೆಳಕ್ಕೆ ಕುಸಿದು ಆತಂಕ ಸೃಷ್ಟಿಸಿತ್ತು.

ಸಮಯಪ್ರಜ್ಞೆ: ಗಾಯಗೊಂಡ ಸ್ಥಿತಿಯಲ್ಲೇ ಕ್ಯಾಪ್ಟನ್ ಸ್ಮಿತ್ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದರು. ಕಿರುಚಾಟ ಕೇಳಿ ತಕ್ಷಣವೇ ಧಾವಿಸಿದ ಕ್ಯಾಬಿನ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಪ್ರವೇಶಿಸಿ ದಾಳಿಕೋರ ಸಹ-ಪೈಲಟ್‌ನನ್ನು ಕಟ್ಟಿಹಾಕಿದರು.

ಸುರಕ್ಷಿತ ಲ್ಯಾಂಡಿಂಗ್: ತಕ್ಷಣವೇ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ (Tabuk) ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ವಿಮಾನದಲ್ಲಿದ್ದ 27 ಮಕ್ಕಳು ಸೇರಿದಂತೆ ಒಟ್ಟು 180 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಸೌದಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದಾಳಿಕೋರನನ್ನು ಸೌದಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಪ್ಟನ್ ಸ್ಮಿತ್ ಅವರ ಅಸಾಧಾರಣ ಶೌರ್ಯವನ್ನು ಕೊಂಡಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles