ಮುಂಬೈ: ಕಚ್ಚಾ ಬಾದಾಮ್’ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿದ್ದ 26 ವರ್ಷದ ಇನ್‌ಫ್ಲುಯೆನ್ಸರ್ ಅಂಜಲಿ ಅರೋರಾ, ಇತ್ತೀಚೆಗೆ ಸಾಲು ಸಾಲು ವಿವಾದಗಳು ಹಾಗೂ ಹಿನ್ನಡೆಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಕಂಟೆಂಟ್ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಈ ನಟಿ, ಇತ್ತೀಚೆಗೆ ಬೆಳ್ಳಿಪರದೆಗೂ ಕಾಲಿಟ್ಟು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
ಅಂಜಲಿ ಅವರ ವೈಯಕ್ತಿಕ ಜೀವನವೂ ವಿವಾದಗಳಿಂದ ಹೊರತಾಗಿಲ್ಲ. ಅವರ ಗೆಳೆಯ ಆಕಾಶ್ ಸಂಸನ್‌ವಾಲ್ ತಮ್ಮ ಕಾರಿನಲ್ಲಿ ನಕಲಿ ‘ಮಾಜಿ ಸಂಸದ’ (Ex-MP) ಪಾಸ್ ಅಳವಡಿಸಿಕೊಂಡು ತಿರುಗಾಡುತ್ತಿದ್ದ ಆರೋಪದ ಮೇಲೆ ಮೀರತ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಅಂಜಲಿ ಅವರಿಗೆ ತೀವ್ರ ಮುಜುಗರ ತಂದಿಟ್ಟಿದ್ದಲ್ಲದೆ, ಅವರ ಸಾರ್ವಜನಿಕ ಇಮೇಜ್‌ಗೂ ಭಾರಿ ಹಿನ್ನಡೆ ಉಂಟುಮಾಡಿತ್ತು.
ಮತ್ತೊಂದೆಡೆ, ಸೋಶಿಯಲ್ ಮೀಡಿಯಾ ಜನಪ್ರಿಯತೆಯ ಆಧಾರದ ಮೇಲೆ ಅವರಿಗೆ ‘ಶ್ರೀ ರಾಮಾಯಣ್’ ಸಿನಿಮಾದಲ್ಲಿ ಮಾತಾ ಸೀತೆಯ ಪವಿತ್ರ ಪಾತ್ರ ನಿರ್ವಹಿಸುವ ಬೃಹತ್ ಅವಕಾಶ ಒಲಿದುಬಂದಿತ್ತು. ಬೋಲ್ಡ್ ಇಮೇಜ್ ಹೊಂದಿದ್ದ ನಟಿಗೆ ಸೀತೆ ಪಾತ್ರ ನೀಡಿದ್ದಕ್ಕೆ ಆರಂಭದಲ್ಲಿ ಸಾರ್ವಜನಿಕವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಆದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು. ಮೊದಲ ದಿನವೇ ಕೇವಲ ₹10 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಕಂಡು, ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿ ಹೀನಾಯ ಸೋಲು ಕಂಡಿತು.
ಸಿನಿಮಾ ಸೋಲು ಹಾಗೂ ವೈಯಕ್ತಿಕ ಹಿನ್ನಡೆಗಳಿಂದ ಧೃತಿಗೆಡದ ಅಂಜಲಿ ಅರೋರಾ, ಮತ್ತೆ ತಮ್ಮ ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ. ಸಿನಿಮಾ ಹಿನ್ನಡೆಯಿಂದ ಹೊರಬಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಎಂದಿನ ಕೆಲಸ-ಕಾರ್ಯಗಳು, ಫೋಟೋಶೂಟ್ ಹಾಗೂ ರೀಲ್ಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಏನೇ ವಿವಾದಗಳು ಎದುರಾದರೂ ಕಂಟೆಂಟ್ ಕ್ರಿಯೇಟರ್ ಆಗಿ ತಮ್ಮ ಹಾದಿಯಲ್ಲಿ ಮುನ್ನಡೆಯಲು ಅವರು ನಿರ್ಧರಿಸಿದ್ದಾರೆ.
- Akash Sansanwal
- Anjali Arora
- Anjali Arora Boyfriend Arrest
- Anjali Arora Sita Role
- Box Office Collection
- Kacha Badam Girl
- Kannada News
- Shri Ramayan Movie
- Social Media Influencer
- Viral Reels
- ಅಂಜಲಿ ಅರೋರಾ
- ಆಕಾಶ್ ಸಂಸನ್‌ವಾಲ್
- ಇನ್‌ಫ್ಲುಯೆನ್ಸರ್
- ಕಚ್ಚಾ ಬಾದಾಮ್
- ಬಾಕ್ಸ್ ಆಫೀಸ್ ಸೋಲು
- ವೈರಲ್ ವೀಡಿಯೋ
- ಶ್ರೀ ರಾಮಾಯಣ್ ಸಿನಿಮಾ
- ಸೀತೆ ಪಾತ್ರ
- ಸೋಶಿಯಲ್ ಮೀಡಿಯಾ





Leave a comment