Home ದಾವಣಗೆರೆ “ಸುಳ್ಳು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ”:ಅಕ್ರಮ ಪ್ಲಾಸ್ಟಿಕ್ ಗೋಡೌನ್‌ಗಳ ಮೇಲೆ ದಾವಣಗೆರೆ ಡಿಸಿ ದಾಳಿ, ಗೋದಾಮುಗಳು ಸೀಲ್, ಎಫ್‌ಐಆರ್‌ಗೆ ಸೂಚನೆ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

“ಸುಳ್ಳು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ”:ಅಕ್ರಮ ಪ್ಲಾಸ್ಟಿಕ್ ಗೋಡೌನ್‌ಗಳ ಮೇಲೆ ದಾವಣಗೆರೆ ಡಿಸಿ ದಾಳಿ, ಗೋದಾಮುಗಳು ಸೀಲ್, ಎಫ್‌ಐಆರ್‌ಗೆ ಸೂಚನೆ!

Share
ದಾವಣಗೆರೆ
Share

ದಾವಣಗೆರೆ: ನಗರದ ಹೃದಯಭಾಗದಲ್ಲಿರುವ ಮಂಡಿಪೇಟೆಯ ಪ್ರಮುಖ ವ್ಯಾಪಾರ ಪ್ರದೇಶದಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ಸಂಗ್ರಹಿಸಿಡಲಾಗಿದ್ದ ಗೋದಾಮುಗಳ ಮೇಲೆ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು ದಿಢೀರ್ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಹೇಳಲು ಯತ್ನಿಸಿದ ಸಿಬ್ಬಂದಿಗೆ ಖಡಕ್ ಎಚ್ಚರಿಕೆ:

ತಪಾಸಣೆಯ ವೇಳೆ ಗೋಡೌನ್ ಆಸ್ತಿಯ ಬೋರ್ಡ್‌ಗಳು ಎಲ್ಲಿವೆ ಹಾಗೂ ಈ ದಾಸ್ತಾನು ಯಾರಿಗೆ ಸೇರಿದ್ದು ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದಾಗ, ಸ್ಥಳದಲ್ಲಿದ್ದ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ವಿಷಯ ಮುಚ್ಚಿಡಲು ಮತ್ತು ಸುಳ್ಳು ಹೇಳಲು ಯತ್ನಿಸಿದರು. ಇದರಿಂದ ಕೆರಳಿದ ಜಿಲ್ಲಾಧಿಕಾರಿಗಳು, “ನನ್ನ ಬಳಿ ನೇರವಾಗಿ ಉತ್ತರ ಹೇಳಿ, ವಿಷಯ ಮುಚ್ಚಿಡಲು ನೋಡಿದರೆ ನಿಮ್ಮ ಮೇಲೆಯೇ ನೇರ ಪರಿಣಾಮ ಬೀರುತ್ತದೆ” ಎಂದು ಸ್ಥಳದಲ್ಲೇ ಅಧಿಕಾರಿಗಳ ಮತ್ತು ವ್ಯಾಪಾರಿಗಳ ಸಮ್ಮುಖದಲ್ಲಿ ಖಡಕ್ ಎಚ್ಚರಿಕೆ ನೀಡಿದರು.

ಸೀಲ್ ಮಾಡಲು ಹಾಗೂ ಎಫ್‌ಐಆರ್ (FIR) ದಾಖಲಿಸಲು ಆದೇಶ:

ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ನಿಯಮಾವಳಿಗಳ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅವರು, ಎಲ್ಲಾ ಅಕ್ರಮ ಗೋಡೌನ್‌ಗಳನ್ನು ತಕ್ಷಣವೇ ಜಪ್ತಿ ಮಾಡಿ ಲಾಕ್ ಹಾಗೂ ಸೀಲ್ ಮಾಡುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಜೊತೆಗೆ, ನಿಯಮ ಬಾಹಿರವಾಗಿ ಪ್ಲಾಸ್ಟಿಕ್ ದಾಸ್ತಾನು ಇರಿಸಿದ್ದ ಮಾಲೀಕರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಎಫ್‌ಐಆರ್ (FIR) ಹಾಕುವಂತೆ ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ ಅವರಿಗೆ ಸೂಚನೆ ನೀಡಿದರು.

ಈ ದಿಢೀರ್ ಕಾರ್ಯಾಚರಣೆ ವೇಳೆ ಮಹಾನಗರ ಪಾಲಿಕೆಯ ವಿವಿಧ ಹಿರಿಯ ಅಧಿಕಾರಿಗಳು ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles