ದಾವಣಗೆರೆ: ವಿಶ್ವ ಹೃದಯ ದಿನದ ಅಂಗವಾಗಿ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ನಗರದಲ್ಲಿ ಉಚಿತ ವಿಶೇಷ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ 630ಕ್ಕೂ ಅಧಿಕ ಜನರು ಪಾಲ್ಗೊಂಡು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ತಪಾಸಣೆಗಳನ್ನು ಉಚಿತವಾಗಿ ಮಾಡಿಸಿಕೊಂಡರು. ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಹಾಗೂ ಹೃದಯ ಕಾಯಿಲೆಗಳ ಅಪಾಯದ ಅಂಶಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿತ್ತು.
ಹೃದಯ ಕಾಯಿಲೆಗಳಿಗೆ ಸಂಬಂಧಿಸಿದ ಅಪಾಯದ ಅಂಶಗಳನ್ನು ನಿರ್ಲಕ್ಷಿಸದೆ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಜ್ಞರು ಸಾರ್ವಜನಿಕರಿಗೆ ಸಲಹೆ ನೀಡಿದರು. ಆರೋಗ್ಯಕರ ಜೀವನಶೈಲಿ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಸಮತೋಲಿತ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವನ್ನೂ ಒತ್ತಿಹೇಳಲಾಯಿತು.
ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದರು.
ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಂಡಾರಿಗಲ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡ ಈ ಶಿಬಿರದಲ್ಲಿ ಹೃದಯರೋಗ ತಜ್ಞರಾದ ಡಾ. ಶ್ರೀನಿವಾಸ ಬಿ, ಡಾ ಧನಂಜಯ ಆರ್ ಎಸ್, ಹೃದಯ ಶಸ್ತ್ರಚಿಕಿತ್ಸಕ ಡಾ. ಗೌತಮ್ ಎ, ಮಕ್ಕಳ ಹೃದಯರೋಗ ತಜ್ಞ ಡಾ.ಅನಿಲ್ ಕುಮಾರ್ ಜೆ ಎಸ್ ಅವರು ಶಿಬಿರದಲ್ಲಿ ಭಾಗವಹಿಸಿದವರ ಅರೋಗ್ಯ ತಪಾಸಣೆ ನಡೆಸಿ ಉಚಿತ ಮಾರ್ಗದರ್ಶನ, ಹಾಗೂ ಸಲಹೆ ನೀಡಿದರು.
- Cardiac health camp Davangere
- Davangere News
- Dr Sreenivasa B
- Free ECG camp Davangere.
- Free heart checkup camp
- Heart care awareness Davangere
- SS Narayana Health Davangere
- World Heart Day
- ಉಚಿತ ಹೃದಯ ತಪಾಸಣಾ ಶಿಬಿರ
- ಎಸ್.ಎಸ್. ನಾರಾಯಣ ಹೆಲ್ತ್
- ಡಾ ಶ್ರೀನಿವಾಸ ಬಿ
- ದಾವಣಗೆರೆ ಆರೋಗ್ಯ ಸುದ್ದಿ
- ದಾವಣಗೆರೆ ಸುದ್ದಿ
- ವಿಶ್ವ ಹೃದಯ ದಿನ
- ಸುನಿಲ್ ಭಂಡಾರಿಗಲ್
- ಹೃದಯ ಕಾಯಿಲೆ ಜಾಗೃತಿ.





Leave a comment