
ಮುಂಬೈ / ನವದೆಹಲಿ: ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಟೈಗರ್ ಶ್ರಾಫ್, ಮುಂಬೈನಲ್ಲಿ ನಡೆದ ‘ಗ್ಲೋಬಲ್ ಪೀಸ್ ಹಾನರ್ಸ್ 2026’ ಕಾರ್ಯಕ್ರಮದಲ್ಲಿ ಅದ್ಭುತ ನೃತ್ಯ ಪ್ರದರ್ಶನ ನೀಡಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
Action Superstar Tiger Shroff Makes First Public Appearance After Firing Incident
Dances At Global Peace Honours 2026 pic.twitter.com/BsYuQMwxi8
— Jayprrakash Singh (@jayprakashindia) November 21, 2026
ಆದರೆ ಈ ಡ್ಯಾನ್ಸ್ ಕಾರ್ಯಕ್ರಮದ ಮಧ್ಯೆ ಹೋದಾಗ ಅನಿರೀಕ್ಷಿತವಾಗಿ ವೇದಿಕೆಗೆ ಬಂದ ನಾಯಿಯೊಂದು ನೆರೆದಿದ್ದವರ ಗಮನ ಸೆಳೆದಿದ್ದು, ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, 2012ರ ‘ಅಗ್ನಿಪತ್’ ಚಿತ್ರದ ಪ್ರಸಿದ್ಧ ‘ದೇವ್ ಶ್ರೀ ಗಣೇಶ’ ಹಾಡಿಗೆ ಟೈಗರ್ ಶ್ರಾಫ್ ಸಾಂಪ್ರದಾಯಿಕ ಉಡುಪಿನಲ್ಲಿ ಹೆಜ್ಜೆ ಹಾಕುತ್ತಿದ್ದರು. ಅದೇ ಸಮಯದಲ್ಲಿ ಎಲ್ಲಿಂದಲೋ ಬಂದ ನಾಯಿಯೊಂದು ನಿಧಾನವಾಗಿ ವೇದಿಕೆಗೆ ಏರಿ ಕೆಲಕಾಲ ಇತ್ತೀಚೆ ನಡೆದಾಡಿ, ಒಂದು ನಿಮಿಷದೊಳಗೆ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿದುಹೋಯಿತು.
ಪರಿಸ್ಥಿತಿಯನ್ನು ಅತ್ಯಂತ ವೃತ್ತಿಪರಯಾಗಿ ಹಾಗೂ ಸಲೀಸಾಗಿ ನಿರ್ವಹಿಸಿದ ಟೈಗರ್ ಶ್ರಾಫ್, ಯಾವುದೇ ವಿಘ್ನವಿಲ್ಲದೆ ತಮ್ಮ ನೃತ್ಯವನ್ನು ಮುಂದುವರಿಸಿದರು.
ಕಳೆದ ಅಕ್ಟೋಬರ್ 18ರಂದು ರಾತ್ರಿ ಫುಟ್‌ಬಾಲ್ ಮೈದಾನದಿಂದ ವಾಪಸ್ ಬರುವಾಗ ಟೈಗರ್ ಶ್ರಾಫ್ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಟ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೂ, ಅವರ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇದುವರೆಗೆ 13 ಜನರನ್ನು ಬಂಧಿಸಿದ್ದು, ದಾಳಿಯ ಬೆನ್ನಲ್ಲೇ ಬಿಗಿ ಭದ್ರತೆಯ ನಡುವೆ ಟೈಗರ್ ಶ್ರಾಫ್ ತಮ್ಮ ವೃತ್ತಿಪರ ಬದ್ಧತೆಯನ್ನು ಮುಂದುವರಿಸಿದ್ದಾರೆ.
ಬ್ಯಾಂಕರ್ ಹಾಗೂ ಸಮಾಜ ಸೇವಕಿ ಅಮೃತಾ ಫಡ್ನವಿಸ್ ಅವರ ‘ದಿವ್ಯಾಜ್ ಫೌಂಡೇಶನ್’ ವತಿಯಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ವಿಕ್ರಾಂತ್ ಮಸ್ಸಿ ಹಾಗೂ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವೇದಿಕೆಗೆ ಭವ್ಯ ಮರುಪ್ರವೇಶ: ಗುಂಡಿನ ದಾಳಿಯ ಭೀತಿಯ ಬಳಿಕ ಭದ್ರತೆಯೊಂದಿಗೆ ಸಾರ್ವಜನಿಕ ವೇದಿಕೆಗೆ ಮರಳಿರುವ ಟೈಗರ್ ಶ್ರಾಫ್, ‘ದೇವ್ ಶ್ರೀ ಗಣೇಶ’ ಹಾಡಿಗೆ ಅದ್ಭುತ ನೃತ್ಯ ಪ್ರದರ್ಶನ ನೀಡಿದರು.
ವೈರಲ್ ಆದ ಅನಿರೀಕ್ಷಿತ ಅತಿಥಿ: ಕಾರ್ಯಕ್ರಮದ ನಡುವೆ ಸ್ಟೇಜ್‌ಗೆ ನುಗ್ಗಿದ ನಾಯಿಯೊಂದು ಕೆಲಕಾಲ ಓಡಾಡಿ ತೆರಳಿದ್ದು, ನಟ ಅದನ್ನು ಗಮನಿಸಿಯೂ ನೃತ್ಯ ಮುಂದುವರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶೂಟೌಟ್ ತನಿಖೆ ಮತ್ತು ಭದ್ರತೆ: ಕಳೆದ ಅಕ್ಟೋಬರ್ 18ರಂದು ನಡೆದ ಕಾರಿನ ಮೇಲಿನ ಶೂಟೌಟ್ ಪ್ರಕರಣದಲ್ಲಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದ್ದು, ನಟನ ಸಿಬ್ಬಂದಿಗೆ ಕಟ್ಟುನಿಟ್ಟಿನ ಎನ್‌ಡಿಎ (NDA) ನಿಯಮಗಳನ್ನು ವಿಧಿಸಿ ಭದ್ರತೆ ಹೆಚ್ಚಿಸಲಾಗಿದೆ.




