Home ಕ್ರೈಂ ನ್ಯೂಸ್ “ಕಲ್ಯಾಣಿ” ಕಥೆ ಮುಗಿಸಿದ ಮೊಹಮ್ಮದ್ ಶಫಿ: ದೇಹ 9 ತುಂಡು ಮಾಡಿ ಕಾಲುವೆಗೆ ಎಸೆದಿದ್ದ ಮಟನ್ ಅಂಗಡಿ ಮಾಲೀಕ ಬಂಧನ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಕಲ್ಯಾಣಿ” ಕಥೆ ಮುಗಿಸಿದ ಮೊಹಮ್ಮದ್ ಶಫಿ: ದೇಹ 9 ತುಂಡು ಮಾಡಿ ಕಾಲುವೆಗೆ ಎಸೆದಿದ್ದ ಮಟನ್ ಅಂಗಡಿ ಮಾಲೀಕ ಬಂಧನ!

Share
ಕಲ್ಯಾಣಿ
Share

ವಿಜಯವಾಡ / ಇಬ್ರಾಹಿಂಪಟ್ನಂ: ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಇಬ್ರಾಹಿಂಪಟ್ನಂ ಸಮೀಪ ನಡೆದ ಕಲ್ಯಾಣಿ ಎಂಬ ಮಹಿಳೆಯ ಭೀಕರ ಕೊಲೆ ಪ್ರಕರಣ ಸ್ಥಳೀಯವಾಗಿ ತೀವ್ರ ಆಕ್ರೋಶ ಮತ್ತು ಸಂಚಲನಕ್ಕೆ ಕಾರಣವಾಗಿದೆ. ಭವಾನಿಪುರಂನಲ್ಲಿ ಮಟನ್ ಅಂಗಡಿ ನಡೆಸುತ್ತಿದ್ದ ಮೊಹಮ್ಮದ್ ಶಫಿ ಎಂಬಾತ ತನ್ನೊಂದಿಗೆ ಸಂಪರ್ಕದಲ್ಲಿದ್ದ ಕಲ್ಯಾಣಿ ಎಂಬಾಕೆಯನ್ನು ಕೊಲೆ ಮಾಡಿ, ದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿದ್ದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಪ್ರಕರಣದ ಹಿನ್ನೆಲೆ:

ಮಂಗಳಗಿರಿಯ ನಿವಾಸಿಯಾಗಿದ್ದ ಕಲ್ಯಾಣಿ ಬಿರಿಯಾನಿ ಸೆಂಟರ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಪತಿಯಿಂದ ದೂರವಾಗಿದ್ದ ಆಕೆ ವಿಜಯವಾಡದ ವ್ಯಕ್ತಿಯೊಬ್ಬರ ಜೊತೆ ವಾಸವಾಗಿದ್ದರು. ಇದೇ ವೇಳೆ ಭವಾನಿಪುರಂನ ಮಟನ್ ಅಂಗಡಿ ಮಾಲೀಕ ಮೊಹಮ್ಮದ್ ಶಫಿ ಜೊತೆ ಪರಿಚಯವಾಗಿ, ಇಬ್ಬರ ನಡುವೆ ನಿಕಟ ಸಂಬಂಧ ಬೆಳೆದಿತ್ತು.

ಹಣದ ವಿಚಾರಕ್ಕೆ ಗಲಾಟೆ – ಭೀಕರ ಕೊಲೆ:

ಕಳೆದ ಸೆಪ್ಟೆಂಬರ್ 17 ರಿಂದ ಕಲ್ಯಾಣಿ ನಾಪತ್ತೆಯಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿ ಗಲಾಟೆ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಶಫಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ದೇಹ 9 ತುಂಡು ಮಾಡಿ ಕಾಲುವೆಗೆ ಎಸೆದಿದ್ದ ಆರೋಪಿ:

ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸುವ ಸಲುವಾಗಿ ಶಫಿ, ಮೃತದೇಹವನ್ನು 9 ಭಾಗಗಳಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿದ್ದನು. ನಂತರ ಎನ್‌ಟಿಟಿಪಿಎಸ್ ಥರ್ಮಲ್ ಪ್ಲಾಂಟ್‌ಗೆ ಸೇರಿದ ಗೊಲ್ಲಪುಡಿ ಕೂಲಿಂಗ್ ಕಾಲುವೆಯಲ್ಲಿ ಆ ಚೀಲಗಳನ್ನು ಎಸೆದಿದ್ದನು. ಕಾಲುವೆಯಲ್ಲಿ ಮಹಿಳೆಯ ದೇಹದ ತುಂಡುಗಳು ಪತ್ತೆಯಾಗುತ್ತಿದ್ದಂತೆ ಪೊಲೀಸರು ಎನ್‌ಡಿಆರ್‌ಎಫ್ ತಂಡದ ನೆರವಿನಿಂದ ತನಿಖೆ ಚುರುಕುಗೊಳಿಸಿದರು.

ಗುರುತು ಪತ್ತೆಗೆ ನೆರವಾದ ‘ಟ್ಯಾಟೂ’:

ಮೃತದೇಹದ ಗುರುತು ಪತ್ತೆಗಾಗಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಾಗೂ ಫೋಟೋ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸರ ಪೋಸ್ಟ್ ಗಮನಿಸಿದ ಕಲ್ಯಾಣಿಯ ಸಹೋದರ, ಮೃತದೇಹದ ಕೈಮೇಲಿದ್ದ ಹಚ್ಚೆ (ಟ್ಯಾಟೂ) ಆಧಾರದ ಮೇಲೆ ಅದು ತನ್ನ ಸಹೋದರಿಯೇ ಎಂದು ಗುರುತಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಇಬ್ರಾಹಿಂಪಟ್ನಂ ಪೊಲೀಸರು ಮುಖ್ಯ ಆರೋಪಿ ಮೊಹಮ್ಮದ್ ಶಫಿ ಹಾಗೂ ಆತನಿಗೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles