ನಾಗರಕೋವಿಲ್ (ತಮಿಳುನಾಡು): ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮತ್ತು ವೀಡಿಯೊಗಳ ಮೂಲಕ ಚಿನ್ನಾಭರಣ ಹಾಗೂ ಹಣವನ್ನು ಪ್ರದರ್ಶಿಸುತ್ತಿದ್ದ ಪ್ರಸಿದ್ಧ ಯೂಟ್ಯೂಬರ್ ದಂಪತಿಯ ಮನೆಗೆ ಕಳ್ಳರು ಕನ್ನಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋವಿಲ್ ಬಳಿ ನಡೆದಿದೆ.
ಯೂಟ್ಯೂಬರ್ ವಿನೋದ್ ಕುಮಾರ್ ಮತ್ತು ಅವರ ಪತ್ನಿ ಮಧುಮಿತಾ ಅವರು ತಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಇರಿಸಲಾಗಿದ್ದ ಭಾರಿ ಪ್ರಮಾಣದ ಚಿನ್ನದ ಆಭರಣ ಹಾಗೂ ನಗದು ಹಣವನ್ನು ವೀಡಿಯೊದಲ್ಲಿ ತೋರಿಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ ಕೃತ್ಯ ನಡೆದಿದೆ.
ತಮ್ಮಾಟ್ಟುಕೋಣಂನ ವಿಐಪಿ ಗಾರ್ಡನ್‌ನಲ್ಲಿರುವ ಅವರ ನಿವಾಸಕ್ಕೆ ರಾತ್ರಿ ವೇಳೆಯಲ್ಲಿ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಸುಮಾರು 118 ಸವರನ್ (944 ಗ್ರಾಂ) ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರಾಜಕ್ಕಮಂಗಲಂ ಪೊಲೀಸರು ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಯೂಟ್ಯೂಬರ್ ದಂಪತಿ ಅಪ್‌ಲೋಡ್ ಮಾಡಿದ್ದ ವೀಡಿಯೊಗಳನ್ನು ನೋಡಿಯೇ ಕಳ್ಳರು ಮನೆಯ ಬಗ್ಗೆ ಮಾಹಿತಿ ಪಡೆದು ಪ್ಲಾನ್ ಮಾಡಿ ಕಳವು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.





Leave a comment