Home ಕ್ರೀಡೆ ‘ಮನೆಯಲ್ಲೇ ಇದ್ದೇನೆ, ವೃದ್ಧಾಶ್ರಮದಲ್ಲಲ್ಲ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದ ವಿನೋದ್ ಕಾಂಬ್ಳಿ ವಿಡಿಯೋಗೆ ಸಿಕ್ಕಿತು ಸ್ಪಷ್ಟನೆ!
ಕ್ರೀಡೆನವದೆಹಲಿಬೆಂಗಳೂರು

‘ಮನೆಯಲ್ಲೇ ಇದ್ದೇನೆ, ವೃದ್ಧಾಶ್ರಮದಲ್ಲಲ್ಲ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದ ವಿನೋದ್ ಕಾಂಬ್ಳಿ ವಿಡಿಯೋಗೆ ಸಿಕ್ಕಿತು ಸ್ಪಷ್ಟನೆ!

Share
ವಿನೋದ್ ಕಾಂಬ್ಳಿ
Share

ಮುಂಬೈ: ಮೈದಾನದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಕಾಂಬ್ಳಿ ಅವರ ಪ್ರಸ್ತುತ ಸ್ಥಿತಿ ಕಂಡು ತೀವ್ರ ಕಳವಳ ಮತ್ತು ಭಾವುಕರಾಗಿದ್ದರು.

ಆದರೆ, ಈ ಕುರಿತು ಪರಿಶೀಲಿಸಿದಾಗ ವೈರಲ್ ಆಗುತ್ತಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂಬುದು ತಿಳಿದುಬಂದಿದೆ.

ವೈರಲ್ ವಿಡಿಯೋದ ಅಸಲಿ ಸತ್ಯವೇನು?

ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮದಲ್ಲಿ ವಾಸಿಸುತ್ತಿಲ್ಲ. ಅವರು ಇತ್ತೀಚೆಗೆ ‘ನಿಡಾನ್ ಸೆಂಟರ್/ವೃದ್ಧಾಶ್ರಮ’ಕ್ಕೆ ಕೇವಲ ವಿಜಿಟರ್ (ಅತಿಥಿ) ಆಗಿ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ನೈರ್ಮಲ್ಯ, ಹಿರಿಯರಿಗೆ ನೀಡಲಾಗುತ್ತಿರುವ ಸಿಬ್ಬಂದಿಗಳ ಆರೈಕೆ ಹಾಗೂ ಸೌಲಭ್ಯಗಳನ್ನು ಮೆಚ್ಚಿ ಮಾತನಾಡಿದ್ದರು. ಆ ವಿಡಿಯೋ ತುಣುಕನ್ನು ದುರ್ಬಳಕೆ ಮಾಡಿಕೊಂಡ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು “ಕಾಂಬ್ಳಿ ವೃದ್ಧಾಶ್ರಮ ಸೇರಿದ್ದಾರೆ” ಎಂದು ತಪ್ಪು ಸಂದೇಶದೊಂದಿಗೆ ಪೋಸ್ಟ್ ಮಾಡಿದ್ದರು.

ಆರೋಗ್ಯದ ಸಮಸ್ಯೆ ನಿಜ, ಆದರೆ ವೃದ್ಧಾಶ್ರಮದಲ್ಲಲ್ಲ:

90ರ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಅಂಗಳದಲ್ಲಿ ಮಿಂಚಿದ್ದ ಕಾಂಬ್ಳಿ, ಕಳೆದ ಕೆಲವು ವರ್ಷಗಳಿಂದ ಸಿರೋಸಿಸ್ ಹಾಗೂ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ನಿಜ. ಆದರೆ ಅವರು ತಮ್ಮ ಕುಟುಂಬದ ಜೊತೆಯಲ್ಲೇ ವಾಸಿಸುತ್ತಿದ್ದಾರೆ. ವೃದ್ಧಾಶ್ರಮಕ್ಕೆ ಅವರು ಭೇಟಿ ನೀಡಿದ್ದಾಗ ಆಡಿದ ಮಾತುಗಳನ್ನು ತಪ್ಪಾಗಿ ಬಿಂಬಿಸಲಾಗಿದ್ದು, ಅಭಿಮಾನಿಗಳು ಯಾವುದೇ ಗೊಂದಲಕ್ಕೆ ಒಳಗಾಗಬೇಕಿಲ್ಲ.

Share

Leave a comment

Leave a Reply

Your email address will not be published. Required fields are marked *