Home ಕ್ರೈಂ ನ್ಯೂಸ್ “ಸಿಂಪಥಿ” ಗಿಟ್ಟಿಸಿಕೊಳ್ಳಲು “ಸುಬ್ಬಿ” ನಾಟಕ: ಪದೇ ಪದೇ ಕಣ್ಣೀರು ಹಾಕುತ್ತಿರುವುದ್ಯಾಕೆ ಪವಿತ್ರಾ ಗೌಡ?
ಕ್ರೈಂ ನ್ಯೂಸ್ಬೆಂಗಳೂರುಸಿನಿಮಾ

“ಸಿಂಪಥಿ” ಗಿಟ್ಟಿಸಿಕೊಳ್ಳಲು “ಸುಬ್ಬಿ” ನಾಟಕ: ಪದೇ ಪದೇ ಕಣ್ಣೀರು ಹಾಕುತ್ತಿರುವುದ್ಯಾಕೆ ಪವಿತ್ರಾ ಗೌಡ?

Share
ಪವಿತ್ರಾ ಗೌಡ
Share

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪವಿತ್ರಾ ಗೌಡ ಅವರ ಜೈಲು ಪರಿಸ್ಥಿತಿ ಇದೀಗ ನ್ಯಾಯಾಲಯದ ವಿಚಾರಣೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸದರಿ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ವೇಳೆ ಪವಿತ್ರಾ ಗೌಡ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿಯೊಂದನ್ನು ನೀಡಿದ್ದು, ಜೈಲಿನಲ್ಲಿ ಪವಿತ್ರಾ ಗೌಡ ಅವರಿಗೆ ಸಹ-ಕೈದಿಗಳಿಂದ ಕಿರುಕುಳ ಹಾಗೂ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ಸುಮಾರು 30ಕ್ಕೂ ಹೆಚ್ಚು ಕೈದಿಗಳಿರುವ ಬ್ಯಾರಕ್‌ನಲ್ಲಿ ಅವರನ್ನು ಇರಿಸಲಾಗಿದ್ದು, ಮಾನಸಿಕ ಒತ್ತಡ ಹಾಗೂ ಭಾಷಾ ಸಮಸ್ಯೆಯಿಂದಾಗಿ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ತಕ್ಷಣವೇ ಅವರನ್ನು ಪ್ರತ್ಯೇಕ ಬ್ಯಾರಕ್‌ಗೆ ಸ್ಥಳಾಂತರಿಸಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಕೀಲರ ವಾದದ ಪ್ರಕಾರ, ಇತ್ತೀಚೆಗೆ ತಮ್ಮನ್ನು ಭೇಟಿಯಾದಾಗ ಜೈಲಿನ ದುಸ್ಥಿತಿಯಿಂದ ಬೇಸತ್ತಿದ್ದ ಪವಿತ್ರಾ ಗೌಡ, “ತೊಟ್ಟು ವಿಷ ಕೊಡಿ” ಎಂದು ಅತ್ಯಂತ ನಿರಾಶೆಯಿಂದ ಹೇಳಿದ್ದರೆಂದು ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲೂ ಪವಿತ್ರಾ ಗೌಡ ಕಣ್ಣೀರು ಹಾಕಿ, ತಮಗೆ ಪ್ರತ್ಯೇಕ ಬ್ಯಾರಕ್ ವ್ಯವಸ್ಥೆ ಕಲ್ಪಿಸುವಂತೆ ಭಾವುಕರಾಗಿ ಮನವಿ ಮಾಡಿಕೊಂಡಿದ್ದಾರೆ.

ಈ ಎಲ್ಲಾ ಅಂಶಗಳನ್ನು ಆಲಿಸಿದ ನ್ಯಾಯಾಲಯವು, ಜೈಲಿನಲ್ಲಿರುವ ಸ್ಥಿತಿಗತಿ ಹಾಗೂ ಆರೋಪಿಯ ಸುರಕ್ಷತೆಯ ಕುರಿತು ತಕ್ಷಣವೇ ವರದಿ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜೈಲು ಆಡಳಿತ ಮಂಡಳಿಯಿಂದ ವರದಿ ಸ್ವೀಕರಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *