ಪೆದ್ದಪಲ್ಲಿ: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ತಾಂಡ್ರ ಅಕ್ಷಿತಾರಾಣಿ (20) ಸಾವು ಪ್ರಕರಣಕ್ಕೆ ತನಿಖೆಯಲ್ಲಿ ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ಆಕೆಗೆ ಪಾಠ ಮಾಡಬೇಕಿದ್ದ ಗುತ್ತಿಗೆ ಉಪನ್ಯಾಸಕನೇ ನಡೆಸಿದ ವ್ಯವಸ್ಥಿತ ಕೊಲೆ ಎಂಬ ಸತ್ಯ ಬಯಲಾಗಿದೆ.
ಪ್ರೇಮದ ಹೆಸರಿನಲ್ಲಿ ವಂಚನೆ:
ಸುಲ್ತಾನಾಬಾದ್ ಮಂಡಲದ ಗರ್ರೆಪಲ್ಲಿ ನಿವಾಸಿ ಜಟ್ಟಿ ನವೀನ್ (38) ನಸ್ಪೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುತ್ತಿಗೆ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಡಿಪ್ಲೊಮಾ ಓದುತ್ತಿದ್ದ ಅಕ್ಷಿತಾರಾಣಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದನು. ಡಿಪ್ಲೊಮಾ ಮುಗಿಸಿದ ನಂತರ ಅಕ್ಷಿತಾ ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ಸೇರಿ, ತರಬೇತಿಗಾಗಿ ಗೋದಾವರಿಖನಿಗೆ ಬಂದಿದ್ದಳು.
ಮೊಬೈಲ್‌ನಲ್ಲಿ ಸ್ಪೈ ಆ್ಯಪ್ ಕಣ್ಗಾವಲು:
ತರಬೇತಿಯ ಸಮಯದಲ್ಲಿ ಅಕ್ಷಿತಾಗೆ ಸಿಂಗರೇಣಿ ಗಣಿಯ ಓವರ್‌ಮ್ಯಾನ್ ರವಿಕುಮಾರ್ ಎಂಬಾತನ ಪರಿಚಯವಾಗಿತ್ತು. ಇದರಿಂದ ಅನುಮಾನಗೊಂಡ ನವೀನ್, ಅಕ್ಷಿತಾಗೆ ತಿಳಿಯದಂತೆ ಆಕೆಯ ಮೊಬೈಲ್‌ನಲ್ಲಿ ರಹಸ್ಯ ‘ಸ್ಪೈ ಆ್ಯಪ್’ (Spy App) ಅಳವಡಿಸಿದ್ದನು. ಆಕೆಯ ಮೆಸೇಜ್ ಹಾಗೂ ಚಾಟಿಂಗ್‌ಗಳನ್ನು ನಿರಂತರವಾಗಿ ಕದ್ದು ಗಮನಿಸುತ್ತಿದ್ದ ಆತ, ರವಿಕುಮಾರ್ ಜೊತೆ ಆಕೆ ಆತ್ಮೀಯವಾಗಿರುವುದನ್ನು ಸಹಿಸಲಾಗದೆ ರವಿಕುಮಾರ್ ವಿರುದ್ಧ ತೀವ್ರ ದ್ವೇಷ ಬೆಳೆಸಿಕೊಂಡಿದ್ದ.
ಕಳೆನಾಶಕ ಕುಡಿಸಿ, ಡೆತ್‌ನೋಟ್ ಬರೆಸಿದ ಕೊಲೆಗಾರ:
ಸೆಪ್ಟೆಂಬರ್ 12ರಂದು ರವಿಕುಮಾರ್‌ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ ನವೀನ್, ಕಳೆನಾಶಕ ವಿಷವನ್ನು ಖರೀದಿಸಿದ್ದ. ಬಳಿಕ ಅಕ್ಷಿತಾಳನ್ನು ರಾಮಗುಂಡಂನ ಎಫ್‌ಸಿಐ ಅಡ್ಡರಸ್ತೆಗೆ ಕರೆಸಿಕೊಂಡು ತನ್ನ ಕಾರಿನಲ್ಲಿ ಕೂರಿಸಿಕೊಂಡಿದ್ದ. “ಇದು ಕುಡಿದರೆ ಏನೂ ಆಗಲ್ಲ, ರವಿಕುಮಾರ್ ಮೇಲೆ ಗಂಭೀರ ಕೇಸ್ ಹಾಕಿ ಜೈಲಿಗೆ ಕಳಿಸಬಹುದು” ಎಂದು ಸುಳ್ಳು ನಂಬಿಸಿ ಆಕೆಗೆ ಕಳೆನಾಶಕ ಕುಡಿಸಿದ್ದಾನೆ.
ಅಷ್ಟಕ್ಕೇ ನಿಲ್ಲದೆ, “ರವಿಕುಮಾರ್ ಲೈಂಗಿಕ ಕಿರುಕುಳ ನೀಡಿದ್ದರಿಂದಲೇ ನಾನು ಸಾವಿಗೆ ಶರಣಾಗುತ್ತಿದ್ದೇನೆ” ಎಂದು ಅಕ್ಷಿತಾಳ ಕೈಯಲ್ಲೇ ಡೆತ್‌ನೋಟ್ ಬರೆಸಿ, ಅದನ್ನು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಪರಾರಿಯಾಗಿದ್ದ.
ತನಿಖೆಯಲ್ಲಿ ಸತ್ಯ ಬಯಲು:
ತೀವ್ರ ಅಸ್ವಸ್ಥಗೊಂಡ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ನಂತರ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಸಿಸಿಟಿವಿ ಫುಟೇಜ್, ಕಾಲ್ ಡೇಟಾ ಹಾಗೂ ತಾಂತ್ರಿಕ ಆಧಾರಗಳ ಮೂಲಕ ಪರಿಶೀಲಿಸಿದಾಗ ನವೀನ್ ಕಾರಿನಲ್ಲಿ ಯುವತಿ ತೆರಳಿರುವುದು ಸಾಬೀತಾಯಿತು. ಪೊಲೀಸರ ವಿಚಾರಣೆ ವೇಳೆ ಉಪನ್ಯಾಸಕ ನವೀನ್ ತಾನೇ ನಡೆಸಿದ ಕೊಲೆಯನ್ನು ಒಪ್ಪಿಕೊಂಡಿದ್ದು, ಸದ್ಯ ಪೊಲೀಸರು ಆರೋಪಿ ನವೀನ್ ಹಾಗೂ ರವಿಕುಮಾರ್ ಇಬ್ಬರನ್ನೂ ಬಂಧಿಸಿದ್ದಾರೆ
- Akshitha Rani Death Case
- FCI Crossroad Incident
- Godavarikhani Murder Case
- Jetti Naveen Kumar
- Lecturer Kills Student
- Peddapalli Crime News
- Spy App Murder Plot
- Telangana crime news
- ಅಕ್ಷಿತಾರಾಣಿ ಸಾವು
- ಉಪನ್ಯಾಸಕನಿಂದ ಕೊಲೆ
- ಕಳೆನಾಶಕ ವಿಷ ಪ್ರಾಶನ
- ಗೋದಾವರಿಖನಿ ಕೊಲೆ ಪ್ರಕರಣ
- ಜಟ್ಟಿ ನವೀನ್
- ತೆಲಂಗಾಣ ಅಪರಾಧ ಸುದ್ದಿ
- ಪೆದ್ದಪಲ್ಲಿ ಸುದ್ದಿ
- ಸ್ಪೈ ಆ್ಯಪ್ ಕೊಲೆ ಸಂಚು





Leave a comment