Home ಬೆಂಗಳೂರು ದಾವಣಗೆರೆ ಜಿಲ್ಲಾಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆ: ಸಿದ್ಧಗಂಗಾ ಶಾಲಾ ಮಕ್ಕಳಿಗೆ 15 ಬಹುಮಾನಗಳ ಅಭೂತಪೂರ್ವ ಯಶಸ್ಸು
ಬೆಂಗಳೂರುದಾವಣಗೆರೆ

ದಾವಣಗೆರೆ ಜಿಲ್ಲಾಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆ: ಸಿದ್ಧಗಂಗಾ ಶಾಲಾ ಮಕ್ಕಳಿಗೆ 15 ಬಹುಮಾನಗಳ ಅಭೂತಪೂರ್ವ ಯಶಸ್ಸು

Share
ದಾವಣಗೆರೆ
Share

ದಾವಣಗೆರೆ: ಮಕ್ಕಳಲ್ಲಿ ಪುಸ್ತಕ ಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 8ನೇ ತರಗತಿ ಮಕ್ಕಳು ಭಾಗವಹಿಸಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಕುವೆಂಪುರವರ “ಶೂದ್ರತಪಸ್ವಿ”, ಎಪಿಜೆ ಅಬ್ದುಲ್‌ ಕಲಾಂರವರ “ವಿಂಗ್ಸ್‌ ಆಫ್‌ ಫೈಯರ್‌”, ಸುಮತೀಂದ್ರ ನಾಡಿಗರ “ತ್ಯಾಗಮಯಿ” ಪುಸ್ತಕಗಳನ್ನು ವಿಮರ್ಶಾತ್ಮಕ ದೃಷ್ಠಿಯಿಂದ ವೀಕ್ಷಕ ಮತ್ತು ತೀರ್ಪುಗಾರರೆದುರು ಮಂಡಿಸಿ ಹೇಗೆ ಈ ಪುಸ್ತಕಗಳು ತಮಗೆ ನೆಚ್ಚಿನ ಪುಸ್ತಕಗಳಾಗಿವೆ ಎಂಬುದನ್ನು ಪ್ರತಿಪಾದಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದ ಅಪೂರ್ವ ಕಾರ್ಯಕ್ರಮಕ್ಕೆ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಮಂಟಪದ ವೇದಿಕೆ ಭಾನುವಾರ ಸಾಕ್ಷಿಯಾಯಿತು.

ಸಿದ್ಧಗಂಗಾ ಸಂಸ್ಥೆಯ ಬಾಲಕ – ಬಾಲಕಿಯರು ಪ್ರಸ್ತುತ ಪಡಿಸಿದ ಅವರ ನೆಚ್ಚಿನ ಪುಸ್ತಕಗಳಾದ “ರಿಫ್ರೆಶ್‌ ಯುವರ್‌ ಮೈಂಡ್‌”, “ಡ್ರಾಗನ್‌ ಇನ್‌ ದಿ ಟನಲ್‌”, “ಚಾಣಕ್ಯ ನೀತಿ”, “ಮಂಕುತಿಮ್ಮನ ಕಗ್ಗ”, “ಸೋತವನ ಸಾವಿರ ಕಥೆಗಳು”, “ಅಣ್ಣನ ನೆನಪು”, “ದಿ ಅಲ್ಕೆಮಿಸ್ಟ್‌” ಹೀಗೆ ಹಲವಾರು ಪುಸ್ತಕಗಳ ವಿಮರ್ಶೆ ಮಾಡಿ ವಿವಿಧ ವಿಭಾಗಗಳಿಗೆ ಮೀಸಲಾದ 15 ಬಹುಮಾನಗಳನ್ನು ಪಡೆದಿದ್ದಾರೆ. ಮನಾಲ್‌ ಜಾನ್‌, ದೀಕ್ಷಾ ಜೆ. ಗಿರೀಶ್‌ ಎಸ್. ಪುಸ್ತಕ ಪ್ರೇಮಿ ಪುರಸ್ಕಾರ ಪಡೆದರೆ, ಗ್ರೀಷ್ಮಾ ಎಸ್.‌ ಚೇತನ್‌ ರೆಡ್ಡಿ ಕಥಾಜನಕರೆನಿಸಿಕೊಂಡರು. ಧಾನ್ವಿ, ಅಕ್ಷತ ಪವಾರ್‌, “ಸೂಕ್ಷ್ಮ ದೃಷ್ಠಿಯ ಓದುಗರು” ಎಂದು ಕರೆಸಿಕೊಂಡರು. ಗೌತಮಿ “ದಿ ಸ್ಟೋರಿ ಆಫ್‌ ಮೈ ಲೈಫ್‌” ಶ್ರೀವತ್ಸ “ರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್‌” ಪುಸ್ತಕಗಳನ್ನು ತಮ್ಮ ಮೆಚ್ಚಿನ ಪುಸ್ತಕಗಳೆಂದು
ಬಿಂಬಿಸಿದರು.

ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ
ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

Share

Leave a comment

Leave a Reply

Your email address will not be published. Required fields are marked *