Home ದಾವಣಗೆರೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, 10 ಕೌನ್ಸಿಲರ್‌ಗಳಿದ್ದರೂ ಬಿಜೆಪಿಗೆ ಸಿಕ್ಕಿದ್ದು ‘0’ ಮತ!ನಾಗೌರ್‌ನಲ್ಲಿ ಕಮಲಕ್ಕೆ ಶಾಕ್, ಕಾಂಗ್ರೆಸ್ ಬೆಂಬಲಿತ ಆರ್‌ಎಲ್‌ಪಿಗೆ ಪುರಸಭೆ ಅಧ್ಯಕ್ಷ ಗಾದಿ!
ದಾವಣಗೆರೆಬೆಂಗಳೂರು

ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, 10 ಕೌನ್ಸಿಲರ್‌ಗಳಿದ್ದರೂ ಬಿಜೆಪಿಗೆ ಸಿಕ್ಕಿದ್ದು ‘0’ ಮತ!ನಾಗೌರ್‌ನಲ್ಲಿ ಕಮಲಕ್ಕೆ ಶಾಕ್, ಕಾಂಗ್ರೆಸ್ ಬೆಂಬಲಿತ ಆರ್‌ಎಲ್‌ಪಿಗೆ ಪುರಸಭೆ ಅಧ್ಯಕ್ಷ ಗಾದಿ!

Share
ಬಿಜೆಪಿ
Share

ಜೈಪುರ/ನಾಗೌರ್: ರಾಜಸ್ಥಾನದ ನಾಗೌರ್ ಜಿಲ್ಲೆಯ ಮುಂಡ್ವಾ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆದಿದ್ದು, ಅತಿ ಹೆಚ್ಚು ಸ್ಥಾನ ಗಳಿಸಿದ್ದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಭಾರಿ ಹಿನ್ನಡೆ ಅನುಭವಿಸಿದೆ. 25 ವಾರ್ಡ್‌ಗಳಿರುವ ಪುರಸಭೆಯಲ್ಲಿ 10 ವಾರ್ಡ್‌ಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯ ಅಧಿಕೃತ ಅಧ್ಯಕ್ಷ ಅಭ್ಯರ್ಥಿ ಗೀತಾ ದೇವಿ ಅವರಿಗೆ ಚುನಾವಣೆಯಲ್ಲಿ ‘ಶೂನ್ಯ’  ಮತ ಬಿದ್ದಿವೆ.

ಕಾಂಗ್ರೆಸ್ ಬೆಂಬಲದೊಂದಿಗೆ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ (RLP) ಅಭ್ಯರ್ಥಿ ಅಲ್ಕಾ ದೇವಿ ಕಂಡೋಯ್ ಅವರು 13 ಮತಗಳನ್ನು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಸಮೀಪದ ಸ್ಪರ್ಧಿ, ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಘನಶ್ಯಾಮ್ ಸಾದಾವತ್ (ವಿಕ್ಕಿ) ವಿರುದ್ಧ ಕೇವಲ 1 ಮತದ ಅಂತರದಿಂದ ರೋಚಕ ಜಯ ಸಾಧಿಸಿದರು.

ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದ್ದು ಹೇಗೆ?

ಮುಂಡ್ವಾ ಪುರಸಭೆಯ ಒಟ್ಟು 25 ಸ್ಥಾನಗಳಲ್ಲಿ ಬಿಜೆಪಿ 10, ಆರ್‌ಎಲ್‌ಪಿ 7, ಕಾಂಗ್ರೆಸ್ 3 ಹಾಗೂ ಪಕ್ಷೇತರರು 5 ಸ್ಥಾನಗಳನ್ನು ಗೆದ್ದಿದ್ದರು. ಆಡಳಿತ ಹಿಡಿಯಲು 13 ಮತಗಳ ಅಗತ್ಯವಿತ್ತು.

  • ಕೈ-ಆರ್‌ಎಲ್‌ಪಿ ಮೈತ್ರಿ: 7 ಸ್ಥಾನ ಹೊಂದಿದ್ದ ಆರ್‌ಎಲ್‌ಪಿ ಮತ್ತು 3 ಸ್ಥಾನ ಹೊಂದಿದ್ದ ಕಾಂಗ್ರೆಸ್ ಒಂದಾಗಿ ಅಲ್ಕಾ ಕಂಡೋಯ್ ಅವರನ್ನು ಕಣಕ್ಕಿಳಿಸಿದವು. ಈ ಮೈತ್ರಿಗೆ ಒಟ್ಟು 10 ಮತಗಳ ಬಲವಿತ್ತಾದರೂ, ಚುನಾವಣೆಯಲ್ಲಿ ಅವರಿಗೆ 13 ಮತಗಳು ಬಿದ್ದವು.

  • ಬಿಜೆಪಿ ಅಭ್ಯರ್ಥಿಗೆ ನಿರಾಸೆ: ಬಿಜೆಪಿಗೆ 10 ಕೌನ್ಸಿಲರ್‌ಗಳ ಬಲವಿದ್ದರೂ, ಪಕ್ಷದ ಅಧಿಕೃತ ಅಭ್ಯರ್ಥಿ ಗೀತಾ ದೇವಿ ಅವರಿಗೆ ಬಿಜೆಪಿಯ ಕೌನ್ಸಿಲರ್‌ಗಳಿಂದ ಒಂದೇ ಒಂದು ಮತವೂ ಬೀಳಲಿಲ್ಲ.

  • ಬಂಡಾಯದ ಏಟು: ಬಿಜೆಪಿ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಘನಶ್ಯಾಮ್ ಸಾದಾವತ್ (ರಾಜಸ್ಥಾನ ಬಿಜೆಪಿ ಉಪಾಧ್ಯಕ್ಷೆ ಡಾ. ಜ್ಯೋತಿ ಮಿರ್ಧಾ ಅವರ ಮಾಜಿ ಸಲಹೆಗಾರ) ಬಿಜೆಪಿಯ ಎಲ್ಲಾ 10 ಕೌನ್ಸಿಲರ್‌ಗಳ ಮತ ಸೇರಿದಂತೆ ಒಟ್ಟು 12 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಸ್ವತಃ 10 ಕೌನ್ಸಿಲರ್‌ಗಳನ್ನು ಹೊಂದಿದ್ದರೂ ಪಕ್ಷದ ಅಧಿಕೃತ ಅಭ್ಯರ್ಥಿಗೆ ಶೂನ್ಯ ಮತ ಬಿದ್ದಿರುವುದು ರಾಜಸ್ಥಾನ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles