Home ಬೆಂಗಳೂರು 140 ಕೋಟಿ ಜನರ ಹಿತಾಸಕ್ತಿ ಬಲಿಕೊಟ್ಟು ಒಂದು ದೇಶ ಮೆಚ್ಚಿಸುವುದು ವಿದೇಶಾಂಗ ನೀತಿ ಆಗಬಾರದು: ಪ್ರಧಾನಿ ಮೋದಿ ವಿರುದ್ಧ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ!
ಬೆಂಗಳೂರುದಾವಣಗೆರೆವಾಣಿಜ್ಯ

140 ಕೋಟಿ ಜನರ ಹಿತಾಸಕ್ತಿ ಬಲಿಕೊಟ್ಟು ಒಂದು ದೇಶ ಮೆಚ್ಚಿಸುವುದು ವಿದೇಶಾಂಗ ನೀತಿ ಆಗಬಾರದು: ಪ್ರಧಾನಿ ಮೋದಿ ವಿರುದ್ಧ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ!

Share
ದೇಶ
Share

ಬೆಂಗಳೂರು: ಭಾರತದ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳು ವಾಷಿಂಗ್ಟನ್‌ನ ಚೌಕಾಸಿಯ ದಾಳಗಳಾಗಲು ನಾವು ಅವಕಾಶ ನೀಡಬಾರದು. ರಷ್ಯಾದಿಂದ ಇಂಧನ ಖರೀದಿಸುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕದ ಅಧ್ಯಕ್ಷರಿಗೆ ಅಲ್ಲಿನ ಕಾನೂನು ನೀಡುತ್ತಿದೆ. 140 ಕೋಟಿ ಭಾರತೀಯರ ಹಿತಾಸಕ್ತಿಯನ್ನು ಬದಿಗಿಟ್ಟು, ಒಂದು ದೇಶವನ್ನು ಮೆಚ್ಚಿಸುವುದೇ ನಮ್ಮ ವಿದೇಶಾಂಗ ನೀತಿಯಾಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ರಷ್ಯಾದ ಕಚ್ಚಾ ತೈಲ ಭಾರತಕ್ಕೆ ಕೈಗೆಟಕುವ ದರದಲ್ಲಿ ಲಭ್ಯವಾಗುವುದಾದರೆ, ಅದನ್ನು ಖರೀದಿಸಬೇಕೋ ಬೇಡವೋ ಎಂಬ ನಿರ್ಧಾರ ಭಾರತದ ರಾಷ್ಟ್ರೀಯ ಹಿತಾಸಕ್ತಿಯ ಆಧಾರದಲ್ಲಿರಬೇಕೇ ಹೊರತು, ವಾಷಿಂಗ್ಟನ್‌ನ ನಿರ್ದೇಶನದ ಮೇರೆಗೆ ಅಲ್ಲ ಎಂದಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಭಾರತವನ್ನು ‘ವಿಶ್ವಗುರು’ ಎಂದು ಬಿಂಬಿಸುತ್ತಿದೆ. ಆದರೆ ಜಾಗತಿಕ ನಾಯಕತ್ವ ಕೇವಲ ಘೋಷಣೆಗಳಿಂದ ನಿರ್ಧಾರವಾಗುವುದಿಲ್ಲ, ಬದಲಾಗಿ ಸ್ವತಂತ್ರ ವಿದೇಶಾಂಗ ನೀತಿ, ಆರ್ಥಿಕ ಸ್ಥೈರ್ಯ ಮತ್ತು ಅಂತಾರಾಷ್ಟ್ರೀಯ
ಒತ್ತಡ ಎದುರಾದಾಗಲೂ ದೇಶದ ಹಿತಾಸಕ್ತಿಯನ್ನು ರಕ್ಷಿಸುವ ರಾಜಕೀಯ ಧೈರ್ಯದಿಂದ ಅದು ಗಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬಲಿಷ್ಠ ಸರ್ಕಾರವೆಂದರೆ ಜಾಗತಿಕ ಒತ್ತಡಕ್ಕೆ ಮಣಿದು ಅದನ್ನೇ ರಾಜತಾಂತ್ರಿಕತೆ ಎಂದು ಸಮರ್ಥಿಸಿಕೊಳ್ಳುವುದಲ್ಲ; ಯಾವುದೇ ಜಾಗತಿಕ ಶಕ್ತಿಯ ಎದುರು ಸಮಾನವಾಗಿ ನಿಂತು, ಭಾರತದ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ಮಾತುಕತೆ ನಡೆಸುವುದು.
ರಾಷ್ಟ್ರೀಯ ಹಿತಾಸಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಭಾರತದ ಸಾರ್ವಭೌಮತ್ವ ಚೌಕಾಸಿಯ ವಸ್ತುವೂ ಅಲ್ಲ ಎಂದು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles