Home ಕ್ರೈಂ ನ್ಯೂಸ್ ಸಿನಿಮಾ ಮಾದರಿಯ ಚೇಸಿಂಗ್: ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಮೇಲ್ಸೇತುವೆಯಿಂದ ಬಿದ್ದ ಕ್ರಿಮಿನಲ್! ಮುಂದೇನಾಯ್ತು?
ಕ್ರೈಂ ನ್ಯೂಸ್ಬೆಂಗಳೂರು

ಸಿನಿಮಾ ಮಾದರಿಯ ಚೇಸಿಂಗ್: ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಮೇಲ್ಸೇತುವೆಯಿಂದ ಬಿದ್ದ ಕ್ರಿಮಿನಲ್! ಮುಂದೇನಾಯ್ತು?

Share
ಸಿನಿಮಾ
Share

ಸೋನಿಪತ್ (ಹರ್ಯಾಣ): ಹರ್ಯಾಣದ ಸೋನಿಪತ್‌ನಲ್ಲಿ ಸಿನಿಮಾ ಶೈಲಿಯನ್ನು ನೆನಪಿಸುವ ಘಟನೆಯೊಂದರಲ್ಲಿ, ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈಓವರ್‌ನಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಆರೋಪಿಯನ್ನು ಮನೋಜ್ ಉರ್ಫ್ ‘ಫಿಲ್ಮಿ’ ಎಂದು ಗುರುತಿಸಲಾಗಿದೆ. ಈತ ತನ್ನ ಸಹಚರ ಸಚಿನ್ ಜೊತೆ ಕಾರಿನಲ್ಲಿ ಪಾಣಿಪತ್‌ನಿಂದ ದೆಹಲಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಪ್ರಯಾಣಿಸುತ್ತಿದ್ದಾಗ, ಹರ್ಯಾಣ ವಿಶೇಷ ಕಾರ್ಯಪಡೆ  ಕಾರ್ಯಾಚರಣೆ ನಡೆಸಿ ಅವರನ್ನು ಸುತ್ತುವರಿದಿದೆ.

ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಮನೋಜ್ ತಕ್ಷಣ ಫ್ಲೈಓವರ್‌ನಿಂದ ಕೆಳಗೆ ಜಿಗಿದಿದ್ದಾನೆ. ಬಿದ್ದ ರಭಸಕ್ಕೆ ಆತನಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಆರೋಪಿ ಸಚಿನ್‌ನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಘಟನಾ ಸ್ಥಳದಿಂದ ಅಕ್ರಮ ಪಿಸ್ತೂಲ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ವರ್ಷದ ಜೂನ್ ತಿಂಗಳಲ್ಲಿ ಹಿಸಾರ್‌ನ ಟೋಲ್ ಪ್ಲಾಜಾ ಮ್ಯಾನೇಜರ್ ಸಂಜಯ್ ಶುಕ್ಲಾ ಎಂಬುವವರ ಮೇಲೆ ಕಾರು ಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಈ ಇಬ್ಬರೂ ಆರೋಪಿಗಳಾಗಿದ್ದು, ಅಂದಿನಿಂದ ತಲೆಮರೆಸಿಕೊಂಡಿದ್ದರು. ಪ್ರಸ್ತುತ ಇಬ್ಬರ ವಿರುದ್ಧದ ಹಳೆಯ ಅಪರಾಧ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles