Home ದಾವಣಗೆರೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ‘ಆಶೀರ್ವಾದ ದೀಪ’ ಅಭಿಯಾನ
ದಾವಣಗೆರೆಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ‘ಆಶೀರ್ವಾದ ದೀಪ’ ಅಭಿಯಾನ

Share
ನರೇಂದ್ರ ಮೋದಿ
Share

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಅತ್ಯಂತ ಶ್ರದ್ಧೆ ಹಾಗೂ ವಿಜೃಂಭಣೆಯಿಂದ ‘ಆಶೀರ್ವಾದ ದೀಪ’ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಅಭಿಯಾನದ ಭಾಗವಾಗಿ ದಕ್ಷಿಣ ಕ್ಷೇತ್ರದ ಪ್ರಮುಖ ವೃತ್ತಗಳು ಹಾಗೂ ಪವಿತ್ರ ದೇವಸ್ಥಾನಗಳ ಆವರಣದಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿತ್ತು.

ಅಭಿಯಾನವು ವಿಜಯಲಕ್ಷ್ಮಿ ರಸ್ತೆಯ ಐತಿಹಾಸಿಕ ಗಡಿಯಾರ ಕಂಬದ ಬಳಿ, ಶಿವಾಲಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ಆರ್ ಎಂಸಿ ರಸ್ತೆಯ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಡಗರದಿಂದ ನಡೆಯಿತು. ಈ ವೇಳೆ ಕ್ಷೇತ್ರದ ಬಿಜೆಪಿ ಮುಖಂಡರು, ಜಿಲ್ಲಾ ಮಟ್ಟದ ನಾಯಕರು ಹಾಗೂ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ನಿಸ್ವಾರ್ಥ ಕಾರ್ಯಕರ್ತರು ಒಗ್ಗೂಡಿ ದೀಪಗಳನ್ನು ಬೆಳಗಿಸಿದರು.

ಸೇವಾ ಮನೋಭಾವ, ರಾಷ್ಟ್ರ ನಿರ್ಮಾಣ ಹಾಗೂ ಸಾರ್ವಜನಿಕ ಕಲ್ಯಾಣದ ಸಂಕಲ್ಪದೊಂದಿಗೆ ನಗರಾಭಿವೃದ್ಧಿ ಮತ್ತು ದೇಶದ ಭದ್ರತೆಗೆ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಗೌರವ ಹಾಗೂ ಕೃತಜ್ಞತೆಯನ್ನು ಸಲ್ಲಿಸಲು ಈ ‘ಆಶೀರ್ವಾದ ದೀಪ’ಗಳನ್ನು ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಿಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಲಿ ಮತ್ತು ದೇಶಸೇವೆಯನ್ನು ಮತ್ತಷ್ಟು ಸಮರ್ಥವಾಗಿ ಮುನ್ನಡೆಸಲು ಪೂರ್ಣ ಶಕ್ತಿ ಕರುಣಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗರಾಜ್ ಮಳ್ಳೆಕಟ್ಟೆ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಮಹಾಪೌರರಾದ ಅಜಯಕುಮಾರ್,  ಎಸ್. ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಟ್ಟಿಕಲ್ ಕರಿಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್ ಮತ್ತು ಲಕ್ಷ್ಮಣ್ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾದ ಅಧ್ಯಕ್ಷೆ ಚೇತನಾ ಶಿವಕುಮಾರ್, ಪ್ರಮುಖ ಮುಖಂಡರಾದ ಜಯಮ್ಮ, ದೇವಿರಮ್ಮ, ಭಾಗ್ಯ ಪಿಸಾಳೆ, ರೇಣುಕಾ ಕೃಷ್ಣ, ಸುಶೀಲಮ್ಮ, ಸಂತೋಷ ಪೈಲ್ವಾನ್, ಅಕ್ಕಿ ಪ್ರಭಣ್ಣ, ಮಂಜುನಾಥ್ ಪೈ, ಗೌತಮ್ ಜೈನ್, ನಾಸಿರ್ ಅಹಮದ್, ಗುರುರಾಜ್ ಅಡಿವೆಪ್ಪ, ಶೇಖರ್ ಅರೇಮಲ್, ಅಕ್ಕಿ ಬಸವರಾಜ್, ಕೃಷ್ಣ ಕರಾಟೆ, ಉಮೇಶ್ ಹೋಟೆಲ್, ಮೋಹನ್, ಹರೀಶ್ ಹೊನ್ನೂರು ಹಾಗೂ ಇನ್ನುಳಿದ ಪ್ರಮುಖ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles