Home ಉದ್ಯೋಗ ವಾರ್ತೆ KEA Group C Recruitment 2026: 210 ಗ್ರೂಪ್‌-ಸಿ ಹುದ್ದೆಗಳ ನೇಮಕಾತಿ; ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

KEA Group C Recruitment 2026: 210 ಗ್ರೂಪ್‌-ಸಿ ಹುದ್ದೆಗಳ ನೇಮಕಾತಿ; ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನ

Share
ಹುದ್ದೆ
Share

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಗರಾಡಳಿತ ನಿರ್ದೇಶನಾಲಯದ ಅಡಿಯಲ್ಲಿ ಬರುವ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 210 ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ:

  • ಸಹಾಯಕ ನೀರು ಸರಬರಾಜು ಆಪರೇಟರ್: 122 ಹುದ್ದೆಗಳು (ವೇತನ: ₹34,100 – ₹67,600)

  • ನೀರು ಸರಬರಾಜು ಆಪರೇಟರ್: 80 ಹುದ್ದೆಗಳು (ವೇತನ: ₹37,500 – ₹76,100)

  • ಎಲೆಕ್ಟ್ರಿಷಿಯನ್ ಗ್ರೇಡ್-2: 05 ಹುದ್ದೆಗಳು (ವೇತನ: ₹34,100 – ₹67,600)

  • ಎಲೆಕ್ಟ್ರಿಷಿಯನ್ ಗ್ರೇಡ್-1: 03 ಹುದ್ದೆಗಳು (ವೇತನ: ₹37,500 – ₹76,100)

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರಬೇಕು ಹಾಗೂ ಸಂಬಂಧಿತ ಟ್ರೇಡ್‌ನಲ್ಲಿ (Electrical / Fitter) 2 ವರ್ಷಗಳ ITI ಕೋರ್ಸ್ (NTC) ಮುಗಿಸಿರಬೇಕು. ಕೆಲ ಹುದ್ದೆಗಳಿಗೆ 1 ವರ್ಷದ ಅಪ್ರೆಂಟಿಸ್‌ಶಿಪ್ (NAC) ಕಡ್ಡಾಯವಾಗಿದೆ.

ವಯೋಮಿತಿ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು.

  • ಸಾಮಾನ್ಯ ವರ್ಗ (GM): ಗರಿಷ್ಠ 40 ವರ್ಷ

  • ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷ

  • SC / ST / ಪ್ರವರ್ಗ-1: ಗರಿಷ್ಠ 45 ವರ್ಷ

ಮುಖ್ಯ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಆರಂಭದ ದಿನಾಂಕ: 16-ಸೆಪ್ಟೆಂಬರ್-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ಸೆಪ್ಟೆಂಬರ್-2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 01-ಅಕ್ಟೋಬರ್-2026

  • ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: ನವೆಂಬರ್ 2026

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಬಹುದು.

Share

Leave a comment

Leave a Reply

Your email address will not be published. Required fields are marked *

Related Articles