Home ಕ್ರೈಂ ನ್ಯೂಸ್ “ಪೈಪ್” ಉದ್ಯಮಿ ಜೊತೆ ಪ್ರಸಿದ್ಧ ಎಲ್‌ಎಕ್ಸ್  ಹೋಟೆಲ್ ಕೊಠಡಿಯಲ್ಲಿ 40 ನಿಮಿಷ ಕಳೆದ ಬ್ಯೂಟಿಷಿಯನ್ ಅನುಮಾನಾಸ್ಪದ ಸಾವು: ಆಸ್ಪತ್ರೆಗೆ ಸೇರಿಸುತ್ತಿದ್ದಂತೆ ಬ್ಯುಸಿನೆಸ್ ಮೆನ್ ಪರಾರಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಪೈಪ್” ಉದ್ಯಮಿ ಜೊತೆ ಪ್ರಸಿದ್ಧ ಎಲ್‌ಎಕ್ಸ್  ಹೋಟೆಲ್ ಕೊಠಡಿಯಲ್ಲಿ 40 ನಿಮಿಷ ಕಳೆದ ಬ್ಯೂಟಿಷಿಯನ್ ಅನುಮಾನಾಸ್ಪದ ಸಾವು: ಆಸ್ಪತ್ರೆಗೆ ಸೇರಿಸುತ್ತಿದ್ದಂತೆ ಬ್ಯುಸಿನೆಸ್ ಮೆನ್ ಪರಾರಿ!

Share
ಉದ್ಯಮಿ
Share

ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ಪ್ರಸಿದ್ಧ ಎಲ್‌ಎಕ್ಸ್  ಹೋಟೆಲ್‌ನ ಕೊಠಡಿ ಸಂಖ್ಯೆ 101ರಲ್ಲಿ 32 ವರ್ಷದ ಬ್ಯೂಟಿಷಿಯನ್ ಸೋನಿಲಾ ಶರ್ಮಾ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಕೆಯೊಂದಿಗೆ ಹೋಟೆಲ್‌ಗೆ ಆಗಮಿಸಿದ್ದ ಪೈಪ್ ಉದ್ಯಮಿ ದೀಪಕ್ ಖಂಡೇಲ್ವಾಲ್ ಎಂಬಾತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ: ಮಾಹಿತಿಯ ಪ್ರಕಾರ, ಸೋನಿಲಾ ಶರ್ಮಾ ಬುಧವಾರ ಮಧ್ಯಾಹ್ನ ಹೋಟೆಲ್‌ಗೆ ಆಗಮಿಸಿದ್ದರು. ಆಕೆ ಬಂದ ಸುಮಾರು ಒಂದು ಗಂಟೆಯ ನಂತರ ಉದ್ಯಮಿ ದೀಪಕ್ ಖಂಡೇಲ್ವಾಲ್ ಕೊಠಡಿ ಸಂಖ್ಯೆ 101ಕ್ಕೆ ತೆರಳಿದ್ದ. ಸುಮಾರು 40 ನಿಮಿಷಗಳ ಕಾಲ ಕೊಠಡಿಯಲ್ಲಿದ್ದ ದೀಪಕ್, ನಂತರ ಹೊರಬಂದು ಸೋನಿಲಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾನೆ.

ಕೂಡಲೇ ಹೋಟೆಲ್ ಸಿಬ್ಬಂದಿ ಆಕೆಯನ್ನು ಅಕ್ಷತ್ ಆಸ್ಪತ್ರೆಗೆ ದಾಖಲಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಸೋನಿಲಾ ಅವರನ್ನು ಆಸ್ಪತ್ರೆಗೆ ತಲುಪಿಸಿದ ಬೆನ್ನಲ್ಲೇ ದೀಪಕ್ ಖಂಡೇಲ್ವಾಲ್ ಸ್ಥಳದಿಂದ ಕಾಲ್ಕಿತ್ತಿದ್ದು, ಪ್ರಸ್ತುತ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಪೋಸ್ಟ್‌ಮಾರ್ಟಂ ಮತ್ತು ಸಿಸಿಟಿವಿ ತನಿಖೆ:

ಮೃತದೇಹದ ಪ್ರಾಥಮಿಕ ಪೋಸ್ಟ್‌ಮಾರ್ಟಂ ವರದಿಯ ಪ್ರಕಾರ, ಸಾವು ನೇಣು ಬಿಗಿದುಕೊಳ್ಳುವುದರಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಸಾವಿನ ನಿಖರ ಕಾರಣ ತಿಳಿಯಲು ಶಾರ್ಟ್ ಪೋಸ್ಟ್‌ಮಾರ್ಟಂ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಪೋಲೀಸರು ಹೋಟೆಲ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ದೀಪಕ್ ಖಂಡೇಲ್ವಾಲ್ ಚಲನವಲನಗಳನ್ನು ಪರಿಶೀಲಿಸುತ್ತಿದ್ದಾರೆ. ಸೋನಿಲಾ ಶರ್ಮಾ ಅವರ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆಕೆಯ ಕುಟುಂಬಸ್ಥರು ರಾಜಗಢಕ್ಕೆ ಕೊಂಡೊಯ್ದಿದ್ದಾರೆ. ದೀಪಕ್ ಸಿಕ್ಕಿಬಿದ್ದ ನಂತರವೇ ಪ್ರಕರಣದ ನಿಜವಾದ ಸತ್ಯಾಂಶ ಹೊರಬರಲಿದೆ.

Share

Leave a comment

Leave a Reply

Your email address will not be published. Required fields are marked *

Related Articles