ಜೋಗುಳಾಂಬ ಗದ್ವಾಲ್ (ತೆಲಂಗಾಣ): ಅಂತರ್ಜಾತಿ ಪ್ರೇಮ ವಿವಾಹವಾದ ಮರುದಿನವೇ ದಲಿತ ಯುವಕನ ಮನೆಯೊಂದನ್ನು ಯುವತಿಯ ಕಡೆಯ ಸಂಬಂಧಿಕರು ಟ್ರಾಕ್ಟರ್ ಮತ್ತು ಜೇಸಿಬಿ ಬಳಸಿ ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ತೆಲಂಗಾಣದ ಜೋಗುಳಾಂಬ ಗದ್ವಾಲ್ ಜಿಲ್ಲೆಯ ರೇಪಲ್ಲೆ ಗ್ರಾಮದಲ್ಲಿ ನಡೆದಿದೆ.
ರೇಪಲ್ಲೆ ಗ್ರಾಮದ ದಲಿತ (SC) ಸಮುದಾಯದ ರಂಗಮುನಿ ಎಂಬ ಯುವಕ ಮತ್ತು ಬಿಸಿ (BC) ಸಮುದಾಯದ ಮಹೇಶ್ವರಿ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಹೈದರಾಬಾದ್ನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಯುವತಿ ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ಪ್ರೀತಿ ಹಾಗೂ ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9 ರಂದು ಇಬ್ಬರೂ ಹೈದರಾಬಾದ್ನಲ್ಲಿ ವಿವಾಹವಾಗಿದ್ದರು.
ಮದುವೆಯ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಯುವತಿಯ ಕಡೆಯ ಸಂಬಂಧಿಕರು ಗುರುವಾರ ಸಂಜೆ ರೇಪಲ್ಲೆ ಗ್ರಾಮದಲ್ಲಿದ್ದ ರಂಗಮುನಿ ಅವರ ಮನೆಗೆ ಟ್ರಾಕ್ಟರ್ ಹಾಗೂ ಜೆಸಿಬಿ ಸಮೇತ ದಾಳಿ ನಡೆಸಿ ಮನೆಯ ಭಾಗವನ್ನು ನೆಲಸಮ ಮಾಡಿದ್ದಾರೆ. ಘಟನೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಧ್ವಂಸಕ್ಕೆ ಬಳಸಿದ್ದ ಟ್ರಾಕ್ಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗದ್ವಾಲ್ ಪೊಲೀಸರು ತಿಳಿಸಿದ್ದಾರೆ.
- crime news
- Dalit man house demolished
- Inter-caste marriage
- Jogulamba Gadwal
- Love marriage violence
- Repally village
- SC ST Atrocities Act
- Telangana news
- Telangana police case
- Tractor demolition
- ಅಂತರ್ಜಾತಿ ವಿವಾಹ
- ಜೇಸಿಬಿ ಧ್ವಂಸ
- ಜೋಗುಳಾಂಬ ಗದ್ವಾಲ್
- ತೆಲಂಗಾಣ ಅಪರಾಧ ಸುದ್ದಿ
- ತೆಲಂಗಾಣ ಸುದ್ದಿ
- ದಲಿತ ದೌರ್ಜನ್ಯ
- ದಲಿತ ಯುವಕನ ಮನೆ ಧ್ವಂಸ
- ಪೊಲೀಸ್ ದೂರು
- ಪ್ರೇಮ ವಿವಾಹ
- ರೇಪಲ್ಲೆ ಗ್ರಾಮ





Leave a comment