Home ದಾವಣಗೆರೆ ವಿಧಾನಸೌಧದಲ್ಲಿ ಅಪರೂಪದ ಕ್ಷಣ: ಪೌರಕಾರ್ಮಿಕರೊಂದಿಗೆ ಒಂದೇ ಸಾಲಿನಲ್ಲಿ ಕುಳಿತು ಊಟ ಸವಿದ ಕೆ.ಎಸ್. ಬಸವಂತಪ್ಪ!
ದಾವಣಗೆರೆಬೆಂಗಳೂರು

ವಿಧಾನಸೌಧದಲ್ಲಿ ಅಪರೂಪದ ಕ್ಷಣ: ಪೌರಕಾರ್ಮಿಕರೊಂದಿಗೆ ಒಂದೇ ಸಾಲಿನಲ್ಲಿ ಕುಳಿತು ಊಟ ಸವಿದ ಕೆ.ಎಸ್. ಬಸವಂತಪ್ಪ!

Share
ಪೌರಕಾರ್ಮಿಕ
Share

ದಾವಣಗೆರೆ: ಅಧಿಕಾರದ ಉನ್ನತ ಸ್ಥಾನದಲ್ಲಿದ್ದರೂ ಸಾಮಾನ್ಯರೊಂದಿಗೆ ಬೆರೆತು, ಅವರೊಂದಿಗೆ ಕುಳಿತು ಊಟ ಮಾಡುವ ಸರಳತೆ ರಾಜಕಾರಣದಲ್ಲಿ ಅಪರೂಪ. ಅಂತಹ ಅಪರೂಪದ ಕ್ಷಣಕ್ಕೆ ವಿಧಾನಸೌಧ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ‘ದೃಢ ಕರ್ನಾಟಕ ಸಂಕಲ್ಪ’ ಕಾರ್ಯಕ್ರಮದಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಅವರು ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಶ್ರಮಿಕರು, ಯುವಜನರು ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಹಪಂಕ್ತಿ ಭೋಜನ ಸವಿದರು.

ಸಚಿವರಾಗಿದ್ದರೂ ಯಾವುದೇ ಅಹಂ ಇಲ್ಲದೆ ವಿಧಾನಸೌಧದ ಕಾರ್ಮಿಕರೊಂದಿಗೆ ಒಂದೇ ಸಾಲಿನಲ್ಲಿ ಕುಳಿತು ಊಟ ಮಾಡಿದ ಬಸವಂತಪ್ಪ ಅವರ ನಡೆ ಗಮನ ಸೆಳೆಯಿತು. ‘ನಾನು ಕಾರ್ಮಿಕರ ಮಗ’ ಎಂಬ ತಮ್ಮ ಹಿನ್ನೆಲೆಯನ್ನು ಕೇವಲ ಮಾತಿನಲ್ಲಿ ಹೇಳುವುದಷ್ಟೇ ಅಲ್ಲ, ನಡೆ-ನುಡಿಯಲ್ಲೂ ತೋರಿಸಿಕೊಟ್ಟರು ಎಂಬ ಮೆಚ್ಚುಗೆ ವ್ಯಕ್ತವಾಯಿತು.

ಅಧಿಕಾರ–ಸಾಮಾನ್ಯರ ನಡುವಿನ ಅಂತರ ಅಳಿಸಿದ ಕ್ಷಣ:

ಆಡಳಿತ ವರ್ಗದವರು ಹಾಗೂ ಸಮಾಜದ ಕಟ್ಟಕಡೆಯ ಜನರು ಒಂದೇ ಪಂಕ್ತಿಯಲ್ಲಿ ಕುಳಿತು ಸಹಭೋಜನ ಮಾಡಿದ್ದು, ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯವನ್ನು ಅನಾವರಣಗೊಳಿಸಿತು. ಅಧಿಕಾರದ ಸ್ಥಾನಮಾನ, ಹುದ್ದೆ, ವರ್ಗದ ಭೇದಗಳನ್ನು ಬದಿಗೊತ್ತಿ ಜನರೊಂದಿಗೆ ಬೆರೆತ ಈ ಕ್ಷಣ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ನೀಡಿತು.

ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ವಿವಿಧ ವರ್ಗಗಳ ಜನರೊಂದಿಗೆ ಕುಳಿತು ಊಟ ಸವಿದ ಬಸವಂತಪ್ಪ, ಜನರ ನೋವು–ನಲಿವುಗಳನ್ನು ಅರ್ಥಮಾಡಿಕೊಂಡು ಅವರೊಂದಿಗೆ ಸಾಗುವ ಆಡಳಿತವೇ ನಿಜವಾದ ಜನಪರ ಆಡಳಿತ ಎಂಬ ಸಂದೇಶವನ್ನು ತಮ್ಮ ಸರಳ ನಡೆ ಮೂಲಕ ಸಾರಿದರು.

‘ನಾನು ಕಾರ್ಮಿಕರ ಮಗ’ ಎಂಬ ಮಾತಿಗೆ ನಡೆ-ನುಡಿಯ ಸಾಕ್ಷಿ ತಮ್ಮ ರಾಜಕೀಯ ಜೀವನದುದ್ದಕ್ಕೂ ‘ನಾನು ಶ್ರಮಿಕ ವರ್ಗ ಹಾಗೂ ಕಾರ್ಮಿಕ ಕುಟುಂಬದಿಂದ ಬಂದವನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬಸವಂತಪ್ಪ ಅವರು, ಆ ಮಾತನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ತಮ್ಮ ಆಚರಣೆಯಲ್ಲೂ ತೋರಿಸಿಕೊಟ್ಟರು. ಉನ್ನತ ಜವಾಬ್ದಾರಿಗಳಲ್ಲಿದ್ದರೂ ತಮ್ಮ ಮೂಲ ಹಿನ್ನೆಲೆಯನ್ನು ಮರೆತಿಲ್ಲ ಎಂಬುದಕ್ಕೆ ವಿಧಾನಸೌಧದ ಈ ಸಹಪಂಕ್ತಿ ಭೋಜನವೇ ಸಾಕ್ಷಿಯಾಯಿತು ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

“ಇಂತಹ ಕ್ಷಣಗಳು ಕೇವಲ ಹೊಟ್ಟೆಯನ್ನು ಮಾತ್ರವಲ್ಲ, ಮನಸ್ಸನ್ನೂ ತಣಿಸುತ್ತವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲೂ ಹೊಸ ಭರವಸೆ ಮೂಡಿಸಲು ಇಂತಹ ಸೌಹಾರ್ದಯುತ ಒಡನಾಟ ಅಗತ್ಯ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿ ಹಾಗೂ ಸದೃಢ ಕರ್ನಾಟಕ ನಿರ್ಮಾಣದ ಸಂಕಲ್ಪಕ್ಕೆ ಇದು ಹೊಸ ಶಕ್ತಿ ನೀಡಿದೆ.” — ಕೆ.ಎಸ್. ಬಸವಂತಪ್ಪ

‘ಹೊಟ್ಟೆ ಮಾತ್ರವಲ್ಲ, ಮನಸ್ಸನ್ನೂ ತುಂಬಿದ ಸಹಭೋಜನ’:

ಸಹಭೋಜನದ ಬಳಿಕ ಮಾತನಾಡಿದ ಸಚಿವ ಬಸವಂತಪ್ಪ, ಇಂತಹ ಕ್ಷಣಗಳು ಹೊಟ್ಟೆ ಮತ್ತು ಮನಸ್ಸನ್ನು ತಣಿಸುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲೂ ಭರವಸೆ ಮೂಡಿಸುತ್ತವೆ ಎಂಬ ಆಶಯ ವ್ಯಕ್ತಪಡಿಸಿದರು.

ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿ, ಸಮೃದ್ಧ ಹಾಗೂ ಸದೃಢ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದೆ. ಜನರೊಂದಿಗೆ, ಜನರಿಗಾಗಿ ಸಾಗುತ್ತಿರುವ ಜನಪರ ಆಡಳಿತದ ಪಯಣ ಮತ್ತಷ್ಟು ಯಶಸ್ವಿಯಾಗಲಿ ಎಂಬ ಆಶಯದೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡಿರುವುದಾಗಿ ಅವರು ಹೇಳಿದರು.
ಕಾರ್ಮಿಕ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಬಸವಂತಪ್ಪ ಅವರು ಸಚಿವ ಸ್ಥಾನದ ಎತ್ತರಕ್ಕೇರಿದರೂ ತಮ್ಮ ಮೂಲವನ್ನು ಮರೆತಿಲ್ಲ ಎಂಬುದಕ್ಕೆ ವಿಧಾನಸೌಧದ ಈ ಸಹಪಂಕ್ತಿ ಭೋಜನವೇ ಸಾಕ್ಷಿಯಾಯಿತು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles