ದಾವಣಗೆರೆ: ಬಿಎನ್ಐ ಇಂಡಿಯಾ (BNI India) ಮತ್ತು ಬಿಎನ್ಐ ಫೌಂಡೇಶನ್ ಇಂಡಿಯಾದ ರಾಷ್ಟ್ರೀಯ ಉಪಕ್ರಮದಡಿ ‘ವಿಶ್ವ ಉದ್ಯಮಿಗಳ ದಿನಾಚರಣೆ’ಯ ಅಂಗವಾಗಿ, ಬಿಎನ್ಐ ಪೃಥ್ವಿ ದಾವಣಗೆರೆ ವತಿಯಿಂದ ಜಿಎಂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಫ್ಯೂಚರ್ ಲೀಡರ್ಸ್ ವೀಕ್ 2026’ (Future Leaders Week 2026) ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿಗಳ ಅನುಭವ ಅನಾವರಣದಿಂದ ಯುವ ಉದ್ಯಮಿಗಳಿಗೆ ಯಶಸ್ಸಿನ ಸೂತ್ರಗಳ ಆಶಾಕಿರಣವನ್ನು ನೀಡುವ ಸೂಕ್ತ ವೇದಿಕೆಯಾಯಿತು.
ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಡಾ. ಎಂ. ವೇಣುಗೋಪಾಲ ರಾವ್ ಮಾತನಾಡಿ, ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಉದ್ಯೋಗ ಆಧಾರಿತ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ ಬರಲಿದ್ದು, ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರಕ್ಕೆ ತಕ್ಕಂತೆ ಜಿಎಂ ವಿಶ್ವವಿದ್ಯಾಲಯವು ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಪೂರ್ಣ ಶಿಕ್ಷಣವನ್ನು ನೀಡಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್ ಮಾತನಾಡಿ, “ಜೀವನದಲ್ಲಿ ಸಂಸ್ಥೆ ಅಥವಾ ವ್ಯಕ್ತಿಯ ಯಶಸ್ಸಿಗೆ ಶಿಸ್ತು, ಮೂಲಭೂತ ಮೌಲ್ಯಗಳು ಅತ್ಯಂತ ಅಗತ್ಯ. ಸಮಯ ಪಾಲನೆ ಹಾಗೂ ಶಿಸ್ತುಬದ್ಧ ನಡೆ ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣ” ಎಂದು ತಿಳಿಸುತ್ತಾ, ಹಿಂದೆ ತಾವು ಜಿಎಮ್ಐಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಕಾಲಮಿತಿಯ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿದ್ದುದನ್ನು ನೆನಪಿಸಿಕೊಂಡರು.
2001ರಲ್ಲಿ ಆರಂಭವಾದ ಜಿಎಮ್ಐಟಿ, 2023ರ ಕರ್ನಾಟಕ ರಾಜ್ಯ ಅಧಿನಿಯಮದಡಿ ‘ಜಿಎಂ ವಿಶ್ವವಿದ್ಯಾಲಯ’ವಾಗಿ ರೂಪುಗೊಂಡಿದೆ. ವಿಶ್ವವಿದ್ಯಾಲಯವು ವಿಸ್ತರಣೆಗೊಳ್ಳುತ್ತಿದ್ದು, ಇತ್ತೀಚೆಗೆ ‘ಸ್ಕೂಲ್ ಆಫ್ ಹೆಲ್ತ್ ಅಂಡ್ ಅಲೈಡ್ ಸೈನ್ಸಸ್’ (ಫಿಜಿಯೋಥೆರಪಿ ಸೇರಿದಂತೆ) ವಿಭಾಗವನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಯಶಸ್ವಿ ಉದ್ಯಮಿಗಳು ಭಾಗವಹಿಸಿ, ತಮ್ಮ ಉದ್ಯಮ ಪಯಣದ ಅನುಭವಗಳು, ಯಶಸ್ಸಿನ ಸೂತ್ರಗಳು ಹಾಗೂ ಸವಾಲುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದಷ್ಟೇ ಅಲ್ಲದೆ, ಭಾವಿ ಉದ್ಯಮಿಗಳಾದ ವಿದ್ಯಾರ್ಥಿಗಳಿಂದ ಉದ್ಯಮ ಬೆಳವಣಿಗೆಗೆ ಸಂಬಂಧಿಸಿದ ಹೊಸ ಆಲೋಚನೆಗಳು ಮತ್ತು ನವೀನ ವಿಚಾರಗಳನ್ನು ಆಲಿಸಿ ಸ್ವೀಕರಿಸಿದರು.
ಉದ್ಯಮ ರಂಗಕ್ಕೆ ಸಜ್ಜಾಗುತ್ತಿರುವ ಯುವಜನರಿಗೆ ಅಗತ್ಯ ಪ್ರೇರಣೆ ನೀಡುವುದು ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು ಎಂದು ಎಸ್ಡಿಟಿಸಿಡಿ ನಿರ್ದೇಶಕರಾದ ಕೀರ್ತಿ ಪ್ರಸಾದ್ ಜಿ ತಿಳಿಸಿದರು.
ಉದ್ಯಮ ಕ್ಷೇತ್ರದ ವೈವಿಧ್ಯಮಯ ವಿಭಾಗಗಳಿಂದ ಬಂದಿದ್ದ ಐಟಿ ಹಾರ್ಡ್ವೇರ್, ಆಮ್ಸನ್ ಎಡುಟೆಕ್ ಸೊಲ್ಯೂಷನ್ಸ್ ನ ಸುನಿಲ್ ಹಿರೇಮಠ, ಎಲಿವೇಟ್ ಎಂಟರ್ಪ್ರೈಸಸ್ – ಎಕ್ಸಿಕ್ಯುಟಿವ್ ಡೈರೆಕ್ಟರ್ ರಮೇಶ್ ಹೆಗ್ಡೆ, ಸಿವಿಲ್ ಇಂಜಿನಿಯರ್, ಬ್ರಿಕ್ಬಿಲ್ಡ್ ಕನ್ಸ್ಟ್ರಕ್ಟರ್ ಪ್ರವೀಣ್ ಕುಮಾರ್ ಎಲ್, ಬಿಎನ್ಐ ಪೃಥ್ವಿ ನಾಯಕತ್ವ ತಂಡದ ಅಧ್ಯಕ್ಷ ಟಿ. ಎಸ್. ಎಸ್. ಸ್ವಾಮಿ, ಉಪಾಧ್ಯಕ್ಷ ಅನಿಲ್ ಎನ್. ಜೈನ್, ಕಾರ್ಯದರ್ಶಿ ಎಂ. ಮೊಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.
- BNI Prithvi
- DAVANAGERE
- Dr M Venugopal Rao
- Dr Sunil Kumar BS
- Entrepreneurship
- Future Leaders Week 2026
- GM University
- GMIT
- Keerthi Prasad G
- Skill Education
- T S S Swamy
- World Entrepreneurs Day
- ಉದ್ಯಮಶೀಲತೆ
- ಕೀರ್ತಿ ಪ್ರಸಾದ್ ಜಿ
- ಕೌಶಲ್ಯ ಶಿಕ್ಷಣ
- ಜಿಎಂ ವಿಶ್ವವಿದ್ಯಾಲಯ
- ಜಿಎಮ್ಐಟಿ
- ಜಿಎಮ್ಐಟಿದಾವಣಗೆರೆ
- ಟಿ ಎಸ್ ಎಸ್ ಸ್ವಾಮಿ
- ಡಾ ಎಂ ವೇಣುಗೋಪಾಲ ರಾವ್
- ಡಾ ಸುನಿಲ್ ಕುಮಾರ್ ಬಿಎಸ್
- ದಾವಣಗೆರೆ
- ಫ್ಯೂಚರ್ ಲೀಡರ್ಸ್ ವೀಕ್ 2026
- ಬಿಎನ್ಐ ಪೃಥ್ವಿ
- ವಿಶ್ವ ಉದ್ಯಮಿಗಳ ದಿನಾಚರಣೆ





Leave a comment