Home ಲಿಪ್ ಟು ಲಿಪ್ ಕಿಸ್: ಯೂಟ್ಯೂಬರ್ ಅಪೂರ್ವ ಮುಖೀಜಾ ಮತ್ತು ಡಿಜೆ ಅಮಿನ್ ಜಾಜ್ ಕಿಸ್ಸಿಂಗ್ ನೆಟ್ಟಿಗರ ಚರ್ಚೆಗೆ ಆಯ್ತು “ಆಹಾರ”!
Homeದಾವಣಗೆರೆಬೆಂಗಳೂರುಸಿನಿಮಾ

ಲಿಪ್ ಟು ಲಿಪ್ ಕಿಸ್: ಯೂಟ್ಯೂಬರ್ ಅಪೂರ್ವ ಮುಖೀಜಾ ಮತ್ತು ಡಿಜೆ ಅಮಿನ್ ಜಾಜ್ ಕಿಸ್ಸಿಂಗ್ ನೆಟ್ಟಿಗರ ಚರ್ಚೆಗೆ ಆಯ್ತು “ಆಹಾರ”!

Share
ಅಪೂರ್ವ
Share

ನವದೆಹಲಿಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಅಪೂರ್ವ ಮುಖೀಜಾ, ಅಲಿಯಾಸ್ ‘ದಿ ರೆಬೆಲ್ ಕಿಡ್’ ಮತ್ತೊಮ್ಮೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ಪಾಡ್‌ಕಾಸ್ಟ್ ಹೋಸ್ಟ್ ಹಾಗೂ ಡಿಜೆ ಅಮಿನ್ ಜಾಜ್ ಜೊತೆಗಿನ ಅವರ ಇಂಟಿಮೇಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ಆಗಿರುವ ಆ ವಿಡಿಯೋದಲ್ಲಿ ಅಪೂರ್ವ ಮುಖೀಜಾ ಮತ್ತು ಅಮಿನ್ ಜಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಕನ್ಸೋಲ್ ಬಳಿ ಇಬ್ಬರೂ ಪರಸ್ಪರ ಕಿಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಹೊರಬರುತ್ತಿದ್ದಂತೆ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂಟಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಇದನ್ನು ಅಭಿಮಾನಿಗಳು ‘ಹಾರ್ಡ್ ಲಾಂಗ್’  ಎಂದು ಕರೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ವಿಡಿಯೋ ವೀಕ್ಷಿಸಿ: 

ಕೆಲ ದಿನಗಳ ಹಿಂದೆ ಅಪೂರ್ವ ಮುಖೀಜಾ ತಾನು ನ್ಯೂಯಾರ್ಕ್‌ನಿಂದ ಟರ್ಕಿಗೆ ತನ್ನ ಬಾಯ್‌ಫ್ರೆಂಡ್ ಭೇಟಿ ಮಾಡಲು ಹೋಗಿದ್ದಾಗಿ ಹೇಳಿಕೊಂಡಿದ್ದರು. ಆದರೆ ಆ ವ್ಯಕ್ತಿ ಯಾರೆಂಬುದನ್ನು ಅವರು ಬಹಿರಂಗಪಡಿಸಿರಲಿಲ್ಲ. ಈಗ ಟರ್ಕಿಯಲ್ಲಿ ಇವರಿಬ್ಬರು ಒಟ್ಟಿಗೆ ಇರುವ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಪೂರ್ವ ಮಾತನಾಡಿದ ಆ ರಹಸ್ಯ ಬಾಯ್‌ಫ್ರೆಂಡ್ ಅಮಿನ್ ಜಾಜ್‌ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಅಪೂರ್ವ ಮುಖೀಜಾ ಮತ್ತು ಅಮಿನ್ ಜಾಜ್ ಈ ಹಿಂದೆ ಅಮಿನ್ ಅವರ ‘ಅನ್‌ಟ್ರಿಗರ್ಡ್’ ಪಾಡ್‌ಕಾಸ್ಟ್‌ನಲ್ಲೂ  ಒಟ್ಟಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಈ ಜೋಡಿ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ

Share

Leave a comment

Leave a Reply

Your email address will not be published. Required fields are marked *