Home ಕ್ರೈಂ ನ್ಯೂಸ್ “ಶಾಮನೂರು ಶಿವಶಂಕರಪ್ಪ ಥೇಟ್ ಅಮ್ಜಾದ್ ಖಾನ್ ರೀತಿ ಕಾಣ್ತಾರೆ, ಇಂಥವರ ಮಕ್ಕಳಿಂದ ಸಂಸ್ಕೃತಿ ಬರುತ್ತಾ?”: ಬಿ. ಪಿ. ಹರೀಶ್ ವಿವಾದಾತ್ಮಕ ಹೇಳಿಕೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ಶಾಮನೂರು ಶಿವಶಂಕರಪ್ಪ ಥೇಟ್ ಅಮ್ಜಾದ್ ಖಾನ್ ರೀತಿ ಕಾಣ್ತಾರೆ, ಇಂಥವರ ಮಕ್ಕಳಿಂದ ಸಂಸ್ಕೃತಿ ಬರುತ್ತಾ?”: ಬಿ. ಪಿ. ಹರೀಶ್ ವಿವಾದಾತ್ಮಕ ಹೇಳಿಕೆ!

Share
ಶಾಮನೂರು ಶಿವಶಂಕರಪ್ಪ
Share

ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕರಾಗಿದ್ದ ದಿವಗಂತ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರನ್ನು ಅಮ್ಜಾದ್ ಖಾನ್ ಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಾಮನೂರು ಶಿವಶಂಕರಪ್ಪರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ದಾವಣಗೆರೆ ರಾಜಕೀಯ ಅಂಗಳದಲ್ಲಿ ವೈಯಕ್ತಿಕ ಟೀಕೆಗಳು ಮತ್ತು ಮಾತಿನಮಂಟಪಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಇತ್ತೀಚೆಗೆ ನೀಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಅವರ ತಂದೆ, ದಿವಂಗತ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಗುರಿಯಾಗಿಸಿಕೊಂಡು ಕಟು ಪದಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ರಾಜಕೀಯ ಘಟನೆಗಳನ್ನು ಹಾಗೂ ಹಳೆಯ ನೆನಪುಗಳನ್ನು ಕೆದಕುತ್ತಾ ಶಾಸಕ ಹರೀಶ್ ನೀಡಿದ ಹೇಳಿಕೆಗಳು ವಿವಾದದ ಕಿಡಿ ಹೊತ್ತಿಸಿವೆ. ಶಾಮನೂರು ಕುಟುಂಬದ ರಾಜಕೀಯ ಹಿನ್ನೆಲೆ ಹಾಗೂ ಸಂಸ್ಕೃತಿಯ ಬಗ್ಗೆ ಪ್ರಶ್ನಿಸುವ ಭರದಲ್ಲಿ ಬಳಸಿದ ಪದಗಳು ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ. ಇದರೊಂದಿಗೆ ದಾವಣಗೆರೆ ಜಿಲ್ಲೆಯ ರಾಜಕೀಯ ವಾತಾವರಣ ಮತ್ತೊಮ್ಮೆ ಬಿಸಿಯೇರಿದ್ದು, ಉಭಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕುಟುಂಬಕ್ಕೆ ಆಶೀರ್ವಾದ ಏನಾದರೂ ಇದ್ದರೆ ಅದು ಹಾಜಿ ಮಸ್ತಾನ್ ಅವರಿಂದ. ನಾನು ಚಿಕ್ಕವನಿದ್ದಾಗಲೇ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಪ್ಪ ಶಾಮನೂರು ಶಿವಶಂಕರಪ್ಪರಿಗೆ ನೀವು ಅಮ್ಜಾದ್ ಖಾನ್ ರೀತಿ ಕಾಣುತ್ತೀರಾ ಎಂದು ಹೇಳುತ್ತಿದ್ದೆ. ಶಾಮನೂರು ಶಿವಶಂಕರಪ್ಪರನ್ನು ನೋಡಿದರೆ ಗೌರವ ಭಾವನೆ ಬರಲ್ಲ. ಸೇಮ್ ಅಮ್ಜಾನ್ ಖಾನ್ ರೀತಿ ಕಾಣುವಂಥವರ ಮಕ್ಕಳಿಗೆ ಎಲ್ಲಿಂದ ಸಂಸ್ಕೃತಿ ಬರುತ್ತೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ನನಗೆ ಬೂಟ್ ನಿಂದ ಹೊಡೆದರೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅವರಪ್ಪನಿಗೆ ಹುಟ್ಟಿದಂತೆ. ನನಗೆ ಬಕ್ಕೇಶ್, ಗಣೇಶ್ ಆತ್ಮೀಯರು. ನಾನು ದಾವಣಗೆರೆ ನಗರಸಭೆ ಸದಸ್ಯನಾಗಿದ್ದಾಗ ಎಸ್. ಎಸ್. ಮಲ್ಲಿಕಾರ್ಜುನ್ ಚಡ್ಡಿ ಹಾಕುತ್ತಿರಲಿಲ್ಲ. ನನ್ನ 43 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಇಂಥ ಗೊಡ್ಡು ಬೆದರಿಕೆಗೆ ಜಗ್ಗಲ್ಲ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *