Home ದಾವಣಗೆರೆ “ಹಿಂದಿ ರಾಷ್ಟ್ರಭಾಷೆ” ಎಂದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್: ಭುಗಿಲೆದ್ದ ಆಕ್ರೋಶ, ಪರ, ವಿರೋಧ ಅಭಿಪ್ರಾಯ!
ದಾವಣಗೆರೆಬೆಂಗಳೂರುಸಿನಿಮಾ

“ಹಿಂದಿ ರಾಷ್ಟ್ರಭಾಷೆ” ಎಂದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್: ಭುಗಿಲೆದ್ದ ಆಕ್ರೋಶ, ಪರ, ವಿರೋಧ ಅಭಿಪ್ರಾಯ!

Share
ಶಿವರಾಜ್‌ಕುಮಾರ್
Share

ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ, ಹಿರಿಯ ನಟ ಶಿವರಾಜ್‌ಕುಮಾರ್ ಅವರು ತಮ್ಮ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ‘ಒರಿಜಿನಲ್ ಮಾನ್ಸ್‌ಟರ್’  ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಕುರಿತು ಆಡಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಮತ್ತು ವಿವಾದಕ್ಕೆ ಗ್ರಾಸವಾಗಿವೆ.

ಆರ್. ಚಂದ್ರು ನಿರ್ದೇಶನದ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾದ ಪೂಜಾ ಕಾರ್ಯಕ್ರಮದ ವೇಳೆ, ಹಿಂದಿ ಸಂಭಾಷಣೆಗಳ ಕುರಿತು ಪತ್ರಕರ್ತರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಿವರಾಜ್‌ಕುಮಾರ್, “ಹಿಂದಿ ನನ್ನ ಎರಡನೇ ಭಾಷೆ. ನನಗೆ ಮಾತನಾಡಲು ಬರುತ್ತದೆ. ಅದೊಂದು ಸುಲಭವಾದ ರಾಷ್ಟ್ರಭಾಷೆ. ನಮಗೆ ಹೇಗೆ ಗೊತ್ತಿರುವುದಿಲ್ಲ? ಚೆನ್ನಾಗಿ ಗೊತ್ತಿದೆ” ಎಂದು ಹೇಳಿದ್ದರು.

ವಿವಾದ ಮತ್ತು ಪರ-ವಿರೋಧ ಚರ್ಚೆ:

ಶಿವಣ್ಣ ಅವರ ಈ ಹೇಳಿಕೆ ಹೊರಬರುತ್ತಿದ್ದಂತೆ ಆನ್‌ಲೈನ್‌ನಲ್ಲಿ ಭಾರಿ ವಿವಾದ ಭುಗಿಲೆದ್ದಿತು. ಭಾರತದಲ್ಲಿ ಹಿಂದಿಯು ರಾಷ್ಟ್ರಭಾಷೆಯಲ್ಲ, ಸಂವಿಧಾನದ ಪ್ರಕಾರ ಅದೊಂದು ಅಧಿಕೃತ ಭಾಷೆ ಮಾತ್ರ ಎಂದು ಹಲವು ನೆಟಿಗರು ಮತ್ತು ಭಾಷಾ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರು.

ವರದಿಗಳ ಪ್ರಕಾರ, ವರನಟ ಡಾ. ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದ ಕೆಲವರು, ಶಿವಣ್ಣನ ಈ ಮಾತಿನಿಂದ ನಿರಾಸೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದರು.

ಮತ್ತೊಂದೆಡೆ, ನಟ ಶಿವರಾಜ್‌ಕುಮಾರ್ ಅವರ ಪರವಾಗಿ ನಿಂತಿರುವ ಅವರ ಅಸಂಖ್ಯಾತ ಅಭಿಮಾನಿಗಳು, ಶಿವಣ್ಣ ಯಾವ ದುರುದ್ದೇಶದಿಂದಲೂ ಆ ಮಾತು ಆಡಿಲ್ಲ. ದೇಶಾದ್ಯಂತ ಇರುವ ಪ್ರೇಕ್ಷಕರನ್ನು ತಲುಪುವ ಮತ್ತು ಎಲ್ಲರಿಗೂ ಅರ್ಥವಾಗುವ ಭಾಷೆಯ ಹಿನ್ನೆಲೆಯಲ್ಲಿ ಅವರು ಆ ರೀತಿಯಲ್ಲಿ ಮಾತನಾಡಿದ್ದಾರೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ:

ಇದೇ ವೇಳೆ, ‘ಒರಿಜಿನಲ್ ಮಾನ್ಸ್‌ಟರ್’ ಸಿನಿಮಾವು 1990 ರಿಂದ 2000ದ ದಶಕದ ಹಿನ್ನೆಲೆಯಲ್ಲಿ ಸಾಗುವ ಭರ್ಜರಿ ಆಕ್ಷನ್ ಡ್ರಾಮಾವಾಗಿದ್ದು, ಇದು ಶಿವಣ್ಣರ ಹಿಂದಿ ಚಿತ್ರರಂಗದ ಪದಾರ್ಪಣೆಯ ಚಿತ್ರವಾಗಿದೆ. ಇನ್ನು ಸಲ್ಮಾನ್ ಖಾನ್ ಅವರ ಮುಂಬರುವ ‘ಮಾನ್ಸ್‌ಟರ್’ ಚಿತ್ರದೊಂದಿಗೆ ಈ ಸಿನಿಮಾವನ್ನು ಹೋಲಿಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಾಜ್‌ಕುಮಾರ್, ಎರಡು ಚಿತ್ರಗಳ ಕಥೆಗಳು ಸಂಪೂರ್ಣ ಭಿನ್ನವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles