ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಮನಕಲುಕುವ ಹಾಗೂ ಅತ್ಯಂತ ಕ್ರೂರವಾದ ಹತ್ಯೆಯೊಂದು ಬೆಳಕಿಗೆ ಬಂದಿತ್ತು. ಆದರೆ ಈ ಕೊಲೆ ಹಿಂದೆ ಪತ್ನಿಯ ಅನೈತಿಕ ಸಂಬಂಧವೇ ಪತಿ ಕೊಲ್ಲಲು ಕಾರಣ ಎಂಬ ಅಂಶ ತಿಳಿದು ಬಂದಿದೆ.
ಅನುಮಾನದ ಪಿಶಾಚಿಗೆ ಬಲಿಯಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ್ದು, ಬಳಿಕ ಮೃತಳ ತಲೆಯನ್ನು ಫ್ರಿಡ್ಜ್‌ನಲ್ಲಿ ಹಾಗೂ ಬೆರಳುಗಳನ್ನು ಕತ್ತರಿಸಿ ಬಚ್ಚಿಟ್ಟಿದ್ದ
ಪತಿಯ ಒಪ್ಪಿಗೆ ಮತ್ತು ಶರಣಾಗತಿ:
ಆರೋಪಿ ರಾಮಾನುಜ್ ಗೋಸ್ವಾಮಿ ತಾನಾಗಿಯೇ ಹತೀಗಾಂವ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ತಾನೇ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಕ್ರಮ ಸಂಬಂಧದ ಶಂಕೆ:
ವಿಚಾರಣೆ ವೇಳೆ, ತನ್ನ ಪತ್ನಿ ರಿಯಾಳ ಅಕ್ರಮ ಸಂಬಂಧದ ಅನುಮಾನದಿಂದಾಗಿ ಇಬ್ಬರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ಆರೋಪಿ ತಿಳಿಸಿದ್ದಾನೆ. ಸೆಪ್ಟೆಂಬರ್ 3 ರಂದು ಬೆಳಗಿನ ಜಾವದವರೆಗೆ ನಡೆದ ಗಲಾಟೆಯ ತೀವ್ರತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಆತ ಹರಿತವಾದ ಆಯುಧ ಮಚ್ಚಿನಿಂದ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕ್ರೂರ ಕೃತ್ಯದ ಎಳೆಗಳು:
ಕೇವಲ ತಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಡಲಾಗಿರಲಿಲ್ಲ, ಬದಲಿಗೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತಳ ಬೆರಳುಗಳನ್ನು ಸಹ ಕತ್ತರಿಸಲಾಗಿತ್ತು.
ನ್ಯಾಯಾಂಗ ಬಂಧನ ಹಾಗೂ ಕೋರ್ಟ್ ಹೇಳಿಕೆ:
ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ, “ನನಗೆ ಯಾವುದೇ ಪಶ್ಚಾತಾಪವಿಲ್ಲ, ಜೈಲು ಶಿಕ್ಷೆ ಮುಗಿಸಿಕೊಂಡು ಬಂದು ಆ ‘ಶುಗರ್ ಡ್ಯಾಡಿ’ಯನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕುವ ಮೂಲಕ ಮತ್ತೆ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
ಕುಟುಂಬದ ಪ್ರತಿಕ್ರಿಯೆ: ಆರೋಪಿ ರಾಮಾನುಜ್ ತಾಯಿ ಮಾಧ್ಯಮಗಳೊಂದಿಗೆ ಮಾತನಾ ಡುತ, ತಮ್ಮ ಮಗ ಇಂತಹ ಕ್ರೂರ ಕೃತ್ಯ ಎಸಗುವವನಲ್ಲ ಎಂದು ಹೇಳಿದ್ದು, ಇತರೆ ಸಮಸ್ಯೆಗಳ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.





Leave a comment