ನವದೆಹಲಿ: ಭಾರತ ದೇಶದ ಸಾರಿಗೆ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲು ದಿನಗಳು ಹತ್ತಿರವಾಗುತ್ತಿವೆ.
ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಿಸಲಾದ ಮೊತ್ತಮೊದಲ ಹೈ-ಸ್ಪೀಡ್ ಬುಲೆಟ್ ರೈಲಿನ ಬಾಡಿ ಫ್ರೇಮ್ ಈಗ ಪೂರ್ಣಗೊಳ್ಳುವ ಹಂತ ತಲುಪಿದ್ದು, ಮುಂದಿನ ವರ್ಷ ಅಂದರೆ 2027ರ ಮೇ ತಿಂಗಳಲ್ಲಿ ಅಧಿಕೃತ ಪರೀಕ್ಷೆಗಾಗಿ ಹಳಿಗಳ ಮೇಲೆ ಬರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತವಾಗಿ ಘೋಷಿಸಿದ್ದಾರೆ.
ಮುಂಬೈ-ಅಹಮದಾಬಾದ್ ಮಹತ್ವಾಕಾಂಕ್ಷೆಯ ಹೈ-ಸ್ಪೀಡ್ ರೈಲು ಕಾರಿಡಾರ್ಗಾಗಿ ಈ ಸ್ಥಳೀಯ ತಂತ್ರಜ್ಞಾನದ ರೈಲನ್ನು ಸಿದ್ಧಪಡಿಸಲಾಗುತ್ತಿದೆ. ಮೇಡ್ ಇನ್ ಇಂಡಿಯಾ ಕಲ್ಪನೆಯಡಿಯಲ್ಲಿ ಭಾರತೀಯ ರೈಲ್ವೆಯು ತನ್ನ ತಾಂತ್ರಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ವಿಶ್ವದರ್ಜೆಯ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಈ ರೈಲು ಭಾರತದ ರೈಲು ಪ್ರಯಾಣದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಲಿದೆ.
- Bullet Train
- Bullet Train Body Frame
- High Speed Rail
- India Made Bullet Train
- Indian Railways Testing
- Make in India
- May 2027 Bullet Train
- Mumbai Ahmedabad Corridor
- Railways Minister Ashwini Vaishnaw
- ಅಶ್ವಿನಿ ವೈಷ್ಣವ್
- ಬುಲೆಟ್ ರೈಲು
- ಭಾರತೀಯ ರೈಲ್ವೆ
- ಮುಂಬೈ ಅಹಮದಾಬಾದ್ ಕಾರಿಡಾರ್
- ಮೇಡ್ ಇನ್ ಇಂಡಿಯಾ
- ರೈಲು ಪರೀಕ್ಷೆ
- ರೈಲ್ವೆ ಸಚಿವಾಲಯ
- ಸ್ವದೇಶಿ ಬುಲೆಟ್ ರೈಲು
- ಹೈ-ಸ್ಪೀಡ್ ರೈಲು





Leave a comment