Home ದಾವಣಗೆರೆ ‘ಭಾರತ ಎಂದಿಗೂ ಬಡವರ ದೇಶವಾಗಿರಲಿಲ್ಲ, ಆದ್ರೆ ದೇಶ ಬಡವನ್ನಾಗಿಸಲಾಗಿದೆ’: ಅಮೆರಿಕದ ಮಹಿಳೆ ಹೇಳಿಕೆಗೆ ಭಾರೀ ಮೆಚ್ಚುಗೆ!
ದಾವಣಗೆರೆನವದೆಹಲಿಬೆಂಗಳೂರು

‘ಭಾರತ ಎಂದಿಗೂ ಬಡವರ ದೇಶವಾಗಿರಲಿಲ್ಲ, ಆದ್ರೆ ದೇಶ ಬಡವನ್ನಾಗಿಸಲಾಗಿದೆ’: ಅಮೆರಿಕದ ಮಹಿಳೆ ಹೇಳಿಕೆಗೆ ಭಾರೀ ಮೆಚ್ಚುಗೆ!

Share
ಭಾರತ
Share

ಜೈಪುರ: ಅಮೆರಿಕದ ನ್ಯೂಯಾರ್ಕ್ ಮೂಲದ ಟ್ಯಾಟೂ ಆರ್ಟಿಸ್ಟ್ ಜೆಮಾ ಫೆರರ್ ಸದ್ಯ ಭಾರತದ ರಾಜಸ್ಥಾನದ ಐತಿಹಾಸಿಕ ನಗರವಾದ ಜೈಪುರ ಪ್ರವಾಸದಲ್ಲಿದ್ದಾರೆ. ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳು ಈಗ ನೆಟ್ಟಿಗರ ಮನ ಗೆದ್ದಿವೆ ಹಾಗೂ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಪಶ್ಚಿಮ ದೇಶಗಳ ಧೋರಣೆ ಮತ್ತು ಭಾರತದ ಮೇಲಿನ ಗೌರವ:

ಭಾರತದ ಬಗ್ಗೆ ಪಶ್ಚಿಮ ದೇಶಗಳ ದೃಷ್ಟಿಕೋನದಲ್ಲಿ ದ್ವಿತೀಯ ಧೋರಣೆಯಿದೆ ಎಂದು ಜೆಮಾ ತಮ್ಮ ವಿಡಿಯೋದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ವಿದೇಶಿ ಸಿನಿಮಾಗಳು ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ಭಾರತವನ್ನು ಕೇವಲ ಬಡತನ, ಜನಸಂದಣಿ ಮತ್ತು ಕೊಳೆಗೇರಿಗಳ ದೇಶವಾಗಿ ಬಿಂಬಿಸಲಾಗುತ್ತದೆ. ಆದರೆ, ಯೋಗ, ಆಯುರ್ವೇದ, ಧ್ಯಾನ (Meditation) ಮತ್ತು ಜವಳಿ ಉದ್ಯಮದಂತಹ ಭಾರತೀಯ ಸಂಪ್ರದಾಯಗಳನ್ನು ಪಾಶ್ಚಾತ್ಯ ದೇಶಗಳು ಅಳವಡಿಸಿಕೊಂಡು ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಭಾರತೀಯರು ಆವಿಷ್ಕರಿಸಿದ ಈ ಸಂಸ್ಕೃತಿಯಿಂದ ವಿದೇಶಗಳು ವಾಣಿಜ್ಯ ಲಾಭ ಪಡೆದರೂ, ಸ್ಥಳೀಯರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಸತ್ಯವನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

‘ಭಾರತವನ್ನು ಬಡವನ್ನಾಗಿ ಮಾಡಲಾಯಿತು’:

ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಆರ್ಥಿಕತೆಯ ಮೇಲಾದ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದ ಜೆಮಾ, “ಭಾರತವು ಎಂದಿಗೂ ಸಹಜವಾಗಿ ಬಡ ರಾಷ್ಟ್ರವಾಗಿರಲಿಲ್ಲ, ಬದಲಿಗೆ ಬ್ರಿಟಿಷರ ನೀತಿಗಳಿಂದ ಇದನ್ನು ಬಡವನ್ನಾಗಿ ಮಾಡಲಾಯಿತು” ಎಂದಿದ್ದಾರೆ. ಭಾರತದ ಮಸ್ಲಿನ್ ಬಟ್ಟೆ, ಹತ್ತಿ ಮತ್ತು ರೇಷ್ಮೆ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು. ಆದರೆ ಬ್ರಿಟಿಷರ ವಸಾಹತುಶಾಹಿ ನೀತಿಗಳು ಭಾರತೀಯ ನೇಕಾರರು ಹಾಗೂ ಕುಶಲಕರ್ಮಿಗಳ ಬದುಕನ್ನು ಬೀದಿಪಾಲು ಮಾಡಿದವು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಅಹಿಂಸಾ ಮಾರ್ಗದ ಸ್ವಾತಂತ್ರ್ಯ ಹೋರಾಟಕ್ಕೆ ಮೆಚ್ಚುಗೆ:

ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಭಾರತವು ನಡೆಸಿದ ಸ್ವಾತಂತ್ರ್ಯ ಹೋರಾಟ ಮತ್ತು ಅಹಿಂಸಾ ಮಾರ್ಗವನ್ನು ಜೆಮಾ ಕೊಂಡಾಡಿದ್ದಾರೆ. ಯಾವುದೇ ಹಿಂಸಾಚಾರವಿಲ್ಲದೆ, ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸಿ ಸ್ವಾತಂತ್ರ್ಯ ಪಡೆದ ಭಾರತದ ಚರಿತ್ರೆ ಜಗತ್ತಿಗೆ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles