Home ದಾವಣಗೆರೆ ಮಹಿಳೆಯರು ಮನೆಯಲ್ಲೇ ಇರಬೇಕೆಂಬ ಮುಸ್ಲಿಂ ಧರ್ಮಗುರು ಹೇಳಿಕೆ ವಿರೋಧಿಸಿದ್ದ ಕೇರಳ ಸಿಎಂ ಸತೀಶನ್: ದ್ವಂದ್ವ ಯಾಕೆ ಮುಖ್ಯಮಂತ್ರಿಗಳೇ ಎಂದ ‘ಸುಪ್ರಭಾತಂ’!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಮಹಿಳೆಯರು ಮನೆಯಲ್ಲೇ ಇರಬೇಕೆಂಬ ಮುಸ್ಲಿಂ ಧರ್ಮಗುರು ಹೇಳಿಕೆ ವಿರೋಧಿಸಿದ್ದ ಕೇರಳ ಸಿಎಂ ಸತೀಶನ್: ದ್ವಂದ್ವ ಯಾಕೆ ಮುಖ್ಯಮಂತ್ರಿಗಳೇ ಎಂದ ‘ಸುಪ್ರಭಾತಂ’!

Share
ಕೇರಳ
Share

ತಿರುವನಂತಪುರಂ: ಮುಸ್ಲಿಂ ಧರ್ಮಗುರು ಕಾಂಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಮಹಿಳೆಯರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ್ದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿರುದ್ಧ ಸಮಸ್ತ ಇಕೆ ವಿಭಾಗದ ಮುಖವಾಣಿ ‘ಸುಪ್ರಭಾತಂ’ ತೀವ್ರ ವಾಗ್ದಾಳಿ ನಡೆಸಿದೆ. ಸಿಎಂ ಸತೀಶನ್ ಅವರ ನಿಲುವಿನಲ್ಲಿ ದ್ವಂದ್ವ ನೀತಿಯಿದೆ ಎಂದು ಸಂಪಾದಕೀಯದಲ್ಲಿ ಆರೋಪಿಸಲಾಗಿದೆ.

ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನದಲ್ಲಿ ಮಾತನಾಡಿದ್ದ ಕಾಂಪುರಂ, ಮಹಿಳೆಯರನ್ನು ಸಾರ್ವಜನಿಕ ವೇದಿಕೆಗಳಿಗೆ ತಂದರೆ ಅದು ದೊಡ್ಡ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸತೀಶನ್, ಇದು 21ನೇ ಶತಮಾನದಲ್ಲಿ 19ನೇ ಶತಮಾನದ ಹಿಮ್ಮುಖವಾದ ಆಲೋಚನೆ ಎಂದು ತೀವ್ರವಾಗಿ ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ “ಸಭ್ಯತೆಯಿಂದ ಮಾತನಾಡಿ” ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಸಿಎಂ ಸತೀಶನ್ ಅವರು ಮುಸ್ಲಿಮರ ಧಾರ್ಮಿಕ ದೃಷ್ಟಿಕೋನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಟೀಕೆ ಮಾಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಅಲ್ಲದೆ, ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಹಿಂದೆ ಸತೀಶನ್ ಹೊಂದಿದ್ದ ನಿಲುವಿಗೂ, ಈಗ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಅವರು ಮಾತನಾಡುವುದಕ್ಕೂ ವ್ಯತ್ಯಾಸವಿದ್ದು, ಇದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ‘ಸುಪ್ರಭಾತಂ’ ಕಿಡಿಕಾರಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles