Home ಕ್ರೈಂ ನ್ಯೂಸ್ ಬೈ ಬೈ ಪಪ್ಪಾ: “ಇದು ನನ್ನ ಜೀವನ”: ತಂದೆಗೆ ಕರೆ ಮಾಡಿ ನದಿಗೆ ಹಾರಿದ 21 ವರ್ಷದ ಯುವತಿ, ಮುಂದೇನಾಯ್ತು?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬೈ ಬೈ ಪಪ್ಪಾ: “ಇದು ನನ್ನ ಜೀವನ”: ತಂದೆಗೆ ಕರೆ ಮಾಡಿ ನದಿಗೆ ಹಾರಿದ 21 ವರ್ಷದ ಯುವತಿ, ಮುಂದೇನಾಯ್ತು?

Share
ತಂದೆ
Share

ದೋಡಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 21 ವರ್ಷದ ಪಾಯಲ್ ದೇವಿ ಎಂಬ ಯುವತಿ, ತನ್ನ ತಂದೆಗೆ ಫೋನ್‌ನಲ್ಲಿ “ಬೈ ಬೈ ಪಪ್ಪಾ, ಇದು ನನ್ನ ಜೀವನ” ಎಂದು ಹೇಳಿ ಪ್ರೇಮ್ ನಗರದ ಶಿವ ದಾಲ್ ಸೇತುವೆಯಿಂದ ಚಿನಾಬ್ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಘಟನೆಯ ವಿವರ:

ಕೃಷ್ಣ ಲಾಲ್ ಅವರ ಪುತ್ರಿಯಾದ ಪಾಯಲ್ ದೇವಿ, ಸ್ಥಳೀಯ ಜಾತ್ರೆಗೆ (ಮೇಳ) ತೆರಳಿದ್ದರು. ವಾಪಸ್ ಬರುವಾಗ ತನಗೆ ಆರೋಗ್ಯ ಸರಿ ಇಲ್ಲ ಎಂದು ತಂದೆಗೆ ತಿಳಿಸಿ ವೈದ್ಯರನ್ನು ಭೇಟಿಯಾಗಲು ತೆರಳಿದ್ದರು. ಆದರೆ ವೈದ್ಯರು ಲಭ್ಯವಿಲ್ಲದ ಕಾರಣ, ಗ್ರಾಮದ ಪರಿಚಿತರೊಬ್ಬರ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು.

ಮಾರ್ಗಮಧ್ಯೆ ಸೇತುವೆಯ ಬಳಿ ಬೈಕ್ ನಿಲ್ಲಿಸಿದಾಗ, ಪಾಯಲ್ ದಿಢೀರನೆ ನದಿಯ ತಟದತ್ತ ಓಡಿದ್ದಾಳೆ. ಆಕೆಯ ಜೊತೆಗಿದ್ದ ವ್ಯಕ್ತಿ ತಕ್ಷಣ ಆಕೆಯ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ತಂದೆ ಫೋನ್‌ನಲ್ಲಿ ಆಕೆಯನ್ನು ಸಮಾಧಾನಪಡಿಸಲು ಮತ್ತು ಕೃತ್ಯದಿಂದ ತಡೆಯಲು ಪ್ರಯತ್ನಿಸಿದರೂ, “ನನ್ನ ಹತ್ತಿರ ಯಾರೂ ಬರಬೇಡಿ. ಇದು ನನ್ನ ಜೀವನ, ನನ್ನ ಮನಸ್ಸಿಗೆ ತೋಚಿದ್ದನ್ನು ನಾನು ಮಾಡುತ್ತಿದ್ದೇನೆ, ಬೈ ಬೈ ಪಪ್ಪಾ” ಎಂದು ಹೇಳಿ ಫೋನ್ ಕಟ್ ಮಾಡಿ ನದಿಗೆ ಜಿಗಿದಿದ್ದಾಳೆ.

ಗಮನ ಸೆಳೆದ ವೀಡಿಯೋ – ರಕ್ಷಣಾ ಕಾರ್ಯಾಚರಣೆ ಚುರುಕು:

ಸೇತುವೆಯಲ್ಲಿದ್ದ ಸಾರ್ವಜನಿಕರು ಆಕೆಗೆ ಜಿಗಿಯದಂತೆ ವಿನಂತಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದ ತಕ್ಷಣವೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಹಾಗೂ ಸ್ಥಳೀಯ ಈಜುಗಾರರು ಚಿನಾಬ್ ನದಿಯಲ್ಲಿ ಸುದೀರ್ಘ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನದಿಯ ರಭಸವಾದ ನೀರಿನ ಹರಿವಿನಿಂದಾಗಿ ಆಕೆಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles