Home ಕ್ರೈಂ ನ್ಯೂಸ್ ಬಲೂಚಿಸ್ತಾನ ನಡೆಸಿದ ದಾಳಿಗೆ 25 ಪಾಕ್ ಸೈನಿಕರ ಸಾವು, ಸೇನಾ ಟ್ರಕ್‌ಗಳಿಗೆ ಬೆಂಕಿ: ಪಾಕಿಸ್ತಾನ ಸೇನೆಯಿಂದ 48 ಬಲೂಚ್ ಬಂಡುಕೋರರ ಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬಲೂಚಿಸ್ತಾನ ನಡೆಸಿದ ದಾಳಿಗೆ 25 ಪಾಕ್ ಸೈನಿಕರ ಸಾವು, ಸೇನಾ ಟ್ರಕ್‌ಗಳಿಗೆ ಬೆಂಕಿ: ಪಾಕಿಸ್ತಾನ ಸೇನೆಯಿಂದ 48 ಬಲೂಚ್ ಬಂಡುಕೋರರ ಹತ್ಯೆ!

Share
ಬಲೂಚಿಸ್ತಾನ
Share

ಇಸ್ಲಾಮಾಬಾದ್ / ನವದೆಹಲಿ: ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಶಸ್ತ್ರ ದಂಗೆಕೋರ ಪಡೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಹಾಗೂ ಪಾಕಿಸ್ತಾನಿ ಸೇನೆಯ ನಡುವಿನ ರಕ್ತಸಿಕ್ರ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ.

ಪಾಕಿಸ್ತಾನಿ ಸೇನಾ ತುಕಡಿಯ ಮೇಲೆ ಬಿಎಲ್‌ಎ ಭೀಕರ ದಾಳಿ ನಡೆಸಿ 25 ಯೋಧರನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ. ಈ ಭೀಕರ ದಾಳಿಯ ಬೆನ್ನಲ್ಲೇ ಕಂಗಾಲಾದ ಇಸ್ಲಾಮಾಬಾದ್ ಆಡಳಿತವು ಬಲೂಚಿಸ್ತಾನದಾದ್ಯಂತ ವ್ಯಾಪಕ ದಾಳಿ ನಡೆಸಿ, 48 ಬಲೂಚ್ ದಂಗೆಕೋರರನ್ನು ಹೊಡೆದುರುಳಿಸಿದೆ.

ಸಿನಿಮ್ಯಾಟಿಕ್ ಶೈಲಿಯ ವಿಡಿಯೋ ಬಿಡುಗಡೆ:

ದಾಳಿಯ ಬೆನ್ನಲ್ಲೇ ಬಿಎಲ್‌ಎ ತನ್ನ ಅಧಿಕೃತ ಮಾಧ್ಯಮ ‘ಹಕ್ಕಾಲ್’ ಮೂಲಕ ಭೀಕರ ಕಾರ್ಯಾಚರಣೆಯ ಸಿನಿಮ್ಯಾಟಿಕ್ ಶೈಲಿಯ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನಿ ಮಿಲಿಟರಿ ಟ್ರಕ್‌ಗಳು ಬೆಂಕಿಗಾಹುತಿಯಾಗಿರುವುದು, ಸ್ಫೋಟದ ದೃಶ್ಯಗಳು, ಸೈನಿಕರ ಮೃತದೇಹಗಳು ಬಿದ್ದಿರುವುದು ಹಾಗೂ ಬಿಎಲ್‌ಎ ಹೋರಾಟಗಾರರು ಪಾಕ್ ಸೇನೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ.

ಫತೇಹ್ ಸ್ಕ್ವಾಡ್ ಮತ್ತು ಎಸ್‌ಟಿಒಎಸ್ ದಾಳಿ:

  • ಝಿಯಾರತ್ ಕ್ರಾಸ್ ದಾಳಿ: ಜಿಯಾರತ್ ಕ್ರಾಸ್ ಬಳಿ ಸೇನಾ ಬೆಂಗಾವಲು ಪಡೆ ಹಾದುಹೋಗುತ್ತಿದ್ದಂತೆ ಬಿಎಲ್‌ಎನ ಪ್ರಮುಖ ‘ಫತೇಹ್ ಸ್ಕ್ವಾಡ್’ (Fateh Squad) ಸೈನಿಕರ ಮೇಲೆ ದಾಳಿ ನಡೆಸಿ, ಎರಡು ವಾಹನಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯಲ್ಲಿ ೧೮ ಯೋಧರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

  • ಸುರಾಬ್ ಭೀಕರ ಸ್ಫೋಟ: ಸುರಾಬ್‌ನ ಹಾಜಿಕಾ ಪ್ರದೇಶದಲ್ಲಿ ಬಿಎಲ್‌ಎನ ‘ಸ್ಪೆಷಲ್ ಟ್ಯಾಕ್ಟಿಕಲ್ ಆಪರೇಷನ್ಸ್ ಸ್ಕ್ವಾಡ್’ (STOS) ರಿಮೋಟ್ ಕಂಟ್ರೋಲ್ ಕಾರು ಬಾಂಬ್ ಸ್ಫೋಟಿಸಿ, ೭ ಪಾಕಿಸ್ತಾನಿ ಸೈನಿಕರನ್ನು ಕೊಂದುಹಾಕಿದೆ.

ಪಾಕಿಸ್ತಾನ ಸೇನೆಯ ಭೀಕರ ಪ್ರತಿಕಾರ:

ಈ ದಾಳಿಯಿಂದ ತೀವ್ರ ಮುಖಭಂಗಕ್ಕೊಳಗಾದ ಪಾಕಿಸ್ತಾನದ ಅಸಿಮ್ ಮುನೀರ್ ನೇತೃತ್ವದ ಸೇನೆಯು, ಮಸ್ತುಂಗ್, ಸಿಬಿ, ಕ್ವೆಟ್ಟಾ ಮತ್ತು ಕಲಾಟ್ ಜಿಲ್ಲೆಗಳ ಮೇಲೆ ತೀವ್ರ ಮಿಲಿಟರಿ ದಾಳಿ ನಡೆಸಿದೆ. ಬಿಎಲ್‌ಎ ಮತ್ತು ಟಿಟಿಪಿ (TTP) ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯಲ್ಲಿ ೪೮ಕ್ಕೂ ಹೆಚ್ಚು ದಂಗೆಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಹೇಳಿಕೊಂಡಿದೆ.

ಸ್ವಾತಂತ್ರ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಹೋರಾಡುತ್ತಿರುವ ಬಲೂಚ್ ದಂಗೆಕೋರರು ಹಾಗೂ ಪಾಕ್ ಸೇನೆಯ ನಡುವಿನ ಈ ರಕ್ತಪಾತವು ಇಡೀ ಪ್ರಾಂತ್ಯವನ್ನು ತೀವ್ರ ಭೀತಿಯಲ್ಲಿಡುವಂತೆ ಮಾಡಿದೆ.

Share

Leave a comment

Leave a Reply

Your email address will not be published. Required fields are marked *

Related Articles