ಸಹಾರನ್ಪುರ / ಕೈರಾನ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಸಹಾರನ್ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಅಕ್ರಮ ಮಸೀದಿಯನ್ನು ಶುಕ್ರವಾರ ಮಧ್ಯರಾತ್ರಿ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ.
ಈ ಘಟನೆಯ ಬೆನ್ನಲ್ಲೇ, ಸಮಾಜವಾದಿ ಪಾರ್ಟಿಯ ಕೈರಾನ ಲೋಕಸಭಾ ಕ್ಷೇತ್ರದ ಸಂಸದೆ ಇಕ್ರಾ ಹಸನ್ ಅವರನ್ನು ಅವರ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ.
ಅತಿಕ್ರಮಣ ಆರೋಪ:
ಭಜರಂಗದಳದ ಮಾಜಿ ಪ್ರಾಂತೀಯ ಸಂಚಾಲಕ ವಿಕಾಸ್ತ್ಯಾಗಿ ನೀಡಿದ ದೂರಿನ ಮೇರೆಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಿತ್ತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಾಗವು ಸರ್ಕಾರಿ ಆಸ್ತಿಯಾಗಿದ್ದು, ಅಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ (ಪೋಸ್ಟ್ ಆಫೀಸ್ ಹಾಗೂ ಬಾಡಿಗೆ ಕೊಠಡಿಗಳು) ಬಳಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ನ್ಯಾಯಾಲಯದ ಆದೇಶ: ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಟಿ ಮ್ಯಾಜಿಸ್ಟ್ರೇಟ್ ಕುಲದೀಪ್ ಸಿಂಗ್ ಅವರು ಕಟ್ಟಡ ತೆರವುಗೊಳಿಸಲು ಆದೇಶಿಸಿ, ಮಸೀದಿ ಕಮಿಟಿಗೆ ಅಂದಾಜು ₹6.41 ಕೋಟಿ ದಂಡ ವಿಧಿಸಿದ್ದರು. ನಂತರ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದ ನಂತರ ಶನಿವಾರ ಬೆಳಗಿನ ಜಾವ ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಸಂಸದೆ ಇಕ್ರಾ ಹಸನ್ ಗೃಹಬಂಧನ:
ಘಟನೆಯ ಬಗ್ಗೆ ಅಧಿಕಾರಿಗಳನ್ನು ಭೇಟಿ ಮಾಡಿ ಸಾರ್ವಜನಿಕರ ಕಾಳಜಿ ವ್ಯಕ್ತಪಡಿಸಲು ಸಹಾರನ್ಪುರಕ್ಕೆ ತೆರಳಲು ಸಜ್ಜಾಗಿದ್ದ 32 ವರ್ಷದ ಸಂಸದೆ ಇಕ್ರಾ ಹಸನ್ ಅವರ ಕೈರಾನ ನಿವಾಸದ ಹೊರಗೆ ಭಾರಿ ಪ್ರಮಾಣದ ಪೊಲೀಸ್ ಪಡೆ ನಿಯೋಜಿಸಿ ಅವರನ್ನು ಗೃಹಬಂಧನದಲ್ಲಿಡಲಾಯಿತು.
“ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿಯನ್ನು ಎತ್ತಲು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ನನ್ನನ್ನು ತಡೆಯುವ ಮೂಲಕ ಆ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ.”— ಇಕ್ರಾ ಹಸನ್, ಎಸ್ಪಿ ಸಂಸದೆ ರಾಜಕೀಯ ಕೆಸರೆರಚಾಟ:ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ತೀವ್ರವಾಗಿ ತುಕಡಿಸಿದ್ದು, ಸರ್ಕಾರವು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.





Leave a comment