ನಿಗಮದ ಜಿಲ್ಲಾ ವ್ಯವಸ್ಥಾಪಕರು ನೀಡಿದ ಮಾಹಿತಿಯಂತೆ, ಹಿಂದುಳಿದ ವರ್ಗಗಳ ಪ್ರವರ್ಗ-3ಎ ಅಡಿಯಲ್ಲಿ ಬರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್, ಕುಂಚಿಟಿಗ, ನಾಮಧಾರಿ, ರೆಡ್ಡಿ, ಗೌಡ ಹಾಗೂ ಕಮ್ಮ ಸೇರಿದಂತೆ ವಿವಿಧ ಒಳಪಂಗಡಗಳ ಜನರು ಈ ಯೋಜನೆಗಳ ಪ್ರಯೋಜನ ಪಡೆಯಬಹುದು.
ಸ್ವಯಂ ಉದ್ಯೋಗ ನೇರ ಸಾಲ: ₹2 ಲಕ್ಷ ಘಟಕ ವೆಚ್ಚದಲ್ಲಿ ₹30,000 ಸಹಾಯಧನ ಹಾಗೂ ಉಳಿದ ಮೊತ್ತ ಶೇ. 4 ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
ಗಂಗಾ ಕಲ್ಯಾಣ ನೀರಾವರಿ ಯೋಜನೆ: ಸಣ್ಣ ಹಾಗೂ ಅತಿಸಣ್ಣ ರೈತರಿಗೆ ₹3.75 ಲಕ್ಷ ಘಟಕ ವೆಚ್ಚದಲ್ಲಿ ₹3.25 ಲಕ್ಷ ಸಹಾಯಧನ ಲಭ್ಯವಿದೆ.
ಸ್ವಾವಲಂಬಿ ಸಾರಥಿ ಯೋಜನೆ: 4-ಚಕ್ರ ವಾಹನ ಖರೀದಿಗೆ ಶೇ. 50 (ಗರಿಷ್ಠ ₹3 ಲಕ್ಷ) ಸಹಾಯಧನ ದೊರೆಯಲಿದೆ.
ಶೈಕ್ಷಣಿಕ ಹಾಗೂ ವಿದೇಶಿ ವ್ಯಾಸಂಗ ಸಾಲ: ವೃತ್ತಿಪರ ಕೋರ್ಸ್ಗಳಿಗೆ ಶೇ. 2ರ ಬಡ್ಡಿದರದಲ್ಲಿ ಹಾಗೂ ವಿದೇಶಿ ವಿವಿ ವ್ಯಾಸಂಗಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
ಕೌಶಲ್ಯಾಭಿವೃದ್ಧಿ ತರಬೇತಿ: ಐಟಿಐ, ಜಿಟಿಟಿಸಿ ಕೇಂದ್ರಗಳ ಮೂಲಕ ಉಚಿತ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಸೆಪ್ಟೆಂಬರ್ 30ರೊಳಗಾಗಿ ಸೇವಾ ಸಿಂಧು, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು. ಕೌಶಲ್ಯ ತರಬೇತಿಗಾಗಿ kaushalkar.com ಪೋರ್ಟಲ್ ಬಳಸಬೇಕು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ kvcdc.karnataka.gov.in ಅಥವಾ ದೂರವಾಣಿ ಸಂಖ್ಯೆ 08392-267038 ಅನ್ನು ಸಂಪರ್ಕಿಸಬಹುದು.
- Ballari news
- Category 3A Schemes
- Education Loan Karnataka
- Ganga Kalyana Scheme
- KVCDC Loan Schemes 2026
- Seva Sindhu Apply Online
- Swavalambi Saarathi
- Vokkaliga Development Corporation
- ಆನ್ಲೈನ್ ಅರ್ಜಿ.
- ಒಕ್ಕಲಿಗ ಅಭಿವೃದ್ಧಿ ನಿಗಮ
- ಕರ್ನಾಟಕ ಸರ್ಕಾರ ಯೋಜನೆಗಳು
- ಗಂಗಾ ಕಲ್ಯಾಣ ಯೋಜನೆ
- ಬಳ್ಳಾರಿ ಸುದ್ದಿ
- ಶೈಕ್ಷಣಿಕ ಸಾಲ
- ಸೇವಾ ಸಿಂಧು
- ಸ್ವಾವಲಂಬಿ ಸಾರಥಿ





Leave a comment