Home ದಾವಣಗೆರೆ ಕಾಂಗ್ರೆಸ್ ಏಜೆಂಟ್ ಪೊಲೀಸ್ ದೌರ್ಜನ್ಯಕ್ಕೆ, ಎಸ್ಎಸ್ಎಂಗೆ ಧಿಕ್ಕಾರ.. ಧಿಕ್ಕಾರ.. ದಾವಣಗೆರೆ ಬಂದ್ ವೇಳೆ ಪ್ರತಿಭಟನೆ ಹತ್ತಿಕ್ಕಲು ಯತ್ನ: ಎಂ.ಪಿ. ರೇಣುಕಾಚಾರ್ಯ ಆಕ್ರೋಶ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಕಾಂಗ್ರೆಸ್ ಏಜೆಂಟ್ ಪೊಲೀಸ್ ದೌರ್ಜನ್ಯಕ್ಕೆ, ಎಸ್ಎಸ್ಎಂಗೆ ಧಿಕ್ಕಾರ.. ಧಿಕ್ಕಾರ.. ದಾವಣಗೆರೆ ಬಂದ್ ವೇಳೆ ಪ್ರತಿಭಟನೆ ಹತ್ತಿಕ್ಕಲು ಯತ್ನ: ಎಂ.ಪಿ. ರೇಣುಕಾಚಾರ್ಯ ಆಕ್ರೋಶ!

Share
ದಾವಣಗೆರೆ
Share

ದಾವಣಗೆರೆ: ರೈತರ ಹಿತಾಸಕ್ತಿ ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಬಂದ್ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಚೇತನಾ ಹೊಟೇಲ್ ಮುಂಭಾಗ ರೇಣುಕಾಚಾರ್ಯ ಸೇರಿದಂತೆ 40 ಮಂದಿಯನ್ನು ಪೊಲೀಸರು ಬಂಧಿಸಿದರು. 

ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಧ್ವನಿಯನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಡಿಎಆರ್ ಪೊಲೀಸ್ ಮೈದಾನದ ಬಳಿ ನಡೆದ ಈ ಘಟನೆಯಲ್ಲಿ, ರೈತರ ಹಕ್ಕು ಹಾಗೂ ಹೋರಾಟವನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ರೈತರ ಪರವಾದ ನಮ್ಮ ಈ ನ್ಯಾಯಯುತ ಹೋರಾಟವು ಮುಂದೆಯೂ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರೈತರ ಸಂಕಷ್ಟ ಹಾಗೂ ಧ್ವನಿಯನ್ನು ಸರ್ಕಾರ ಹಾಗೂ ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಮಿತ್ರರು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ರೇಣುಕಾಚಾರ್ಯ ಅವರು ಮನವಿ ಮಾಡಿದರು.

ಕಾಂಗ್ರೆಸ್ ಏಜೆಂಟ್ ಪೊಲೀಸ್ ದೌರ್ಜನ್ಯ ದಿಕ್ಕಾರ ಕೂಗಿದ ರೇಣುಕಾಚಾರ್ಯ ಅವರು ಅಯ್ಯಯ್ಯೋ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles