ದಾವಣಗೆರೆ: ಇಂದಿನಿಂದ ಹತ್ತು ದಿನಗಳ ಕಾಲ ಭದ್ರಾ ಡ್ಯಾಂನಿಂದ ನೀರು ಹರಿಸಲಾಗುತ್ತಿದೆ. ದಾವಣಗೆರೆ ಮತ್ತು ಚನ್ನಗಿರಿ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಲುವಾಗಿ ನೀರು ಬಿಡಲಾಗುತ್ತಿದೆ.
ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳ ಅನುಕೂಲಕ್ಕಾಗಿ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಉದ್ದೇಶದಿಂದ ಭದ್ರಾ ಡ್ಯಾಂನಿಂದ ಭದ್ರಾ ಬಲದಂಡೆ ನಾಲೆಯಿಂದ ನೀರನ್ನು ಹರಿಸಲು ನಿರ್ಧರಿಸಲಾಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆ: ನೀರು ಹರಿಯುವ ಅವಧಿಯಲ್ಲಿ ಸಾರ್ವಜನಿಕರು ಕಾಲುವೆಯಲ್ಲಿ ತಿರುಗಾಡುವುದಾಗಲಿ ಅಥವಾ ದನ-ಕರುಗಳನ್ನು ಕಾಲುವೆಗೆ ಇಳಿಸುವುದಾಗಲಿ ಮಾಡಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕುಡಿಯುವ ನೀರಿನ ಅಭಾವ ತಪ್ಪಿಸಲು ಕೈಗೊಳ್ಳಲಾಗಿರುವ ಈ ಕ್ರಮಕ್ಕೆ ಸಾರ್ವಜನಿಕರು ಹಾಗೂ ರೈತಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ವಿನಂತಿಸಿದೆ.
- Bhadra Dam water release
- Bhadra Dam Water Release Kannada
- Bhadra Reservoir updates
- Bhadra Right Bank Canal
- Channagiri drinking water project
- Davangere local news
- Davangere News
- Karnataka water resources news
- today Davangere news
- ಕರ್ನಾಟಕ ಸುದ್ದಿ
- ಚನ್ನಗಿರಿ ಕುಡಿಯುವ ನೀರು
- ದಾವಣಗೆರೆ ಜಿಲ್ಲಾ ಸುದ್ದಿ
- ದಾವಣಗೆರೆ ಸುದ್ದಿ
- ಭದ್ರಾ ಜಲಾಶಯ ಇಂದಿನ ಮಟ್ಟ
- ಭದ್ರಾ ಡ್ಯಾಂ ನೀರು ಬಿಡುಗಡೆ
- ಭದ್ರಾ ಬಲದಂಡೆ ನಾಲಾ ನೀರು





Leave a comment