ಮುಂಬೈ: ಪ್ರಸಿದ್ಧ ಗಾಂಧಿವಾದಿ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ (Anna Hazare) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಅವರನ್ನು ಮುಂಬೈನ ಪ್ರತಿಷ್ಠಿತ ಬಾಂಬೆ ಆಸ್ಪತ್ರೆಯ (Bombay Hospital) ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ.
ಮಹಾರಾಷ್ಟ್ರದ ಅಹಮದ್ಪುರ ಜಿಲ್ಲೆಯ ರಾಳೇಗಣ ಗ್ರಾಮದ ಬಳಿ ಇರುವ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ತೀವ್ರ ಸ್ವರೂಪದ ವೈರಲ್ ಸೋಂಕು ಹಾಗೂ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮುಂಬೈಗೆ ಕರೆತರಲಾಯಿತು.
ಪ್ರಸ್ತುತ ಖ್ಯಾತ ವೈದ್ಯ ಡಾ. ಗೌತಮ್ ಭನ್ಸಾಲಿ ಅವರ ನೇತೃತ್ವದ ವೈದ್ಯರ ತಂಡ ಅಣ್ಣಾ ಹಜಾರೆ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದು, ವಿವರವಾದ ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಹಂತದ ಚಿಕಿತ್ಸೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
- acute dehydration
- Anna Hazare
- Anna Hazare health update
- Anna Hazare hospitalised
- Dr Gautam Bhansali
- Maharashtra News
- Mumbai Bombay Hospital
- Ralegan Siddhi
- social activist Anna Hazare
- viral infection
- ಅಣ್ಣಾ ಹಜಾರೆ
- ಅಣ್ಣಾ ಹಜಾರೆ ಆರೋಗ್ಯ
- ನಿರ್ಜಲೀಕರಣ
- ಮಹಾರಾಷ್ಟ್ರ ಸುದ್ದಿ
- ಮುಂಬೈ ಬಾಂಬೆ ಆಸ್ಪತ್ರೆ
- ರಾಳೇಗಣ ಸಿِّದ್ಧಿ
- ವೈರಲ್ ಸೋಂಕು
- ಸಾಮಾಜಿಕ ಕಾರ್ಯಕರ್ತ





Leave a comment