Home ‘ಅವರು ಮುಸ್ಲಿಮರೆಂದು ನಾವು ತಾರತಮ್ಯ ಮಾಡಲಿಲ್ಲ’: ವಿಮಾನ ಅಪಘಾತದ ರಕ್ಷಣಾ ಕಾರ್ಯದ ಬಗ್ಗೆ ಮೋಹನ್ ಭಾಗವತ್ ಹೇಳಿಕೆ
Homeದಾವಣಗೆರೆನವದೆಹಲಿಬೆಂಗಳೂರು

‘ಅವರು ಮುಸ್ಲಿಮರೆಂದು ನಾವು ತಾರತಮ್ಯ ಮಾಡಲಿಲ್ಲ’: ವಿಮಾನ ಅಪಘಾತದ ರಕ್ಷಣಾ ಕಾರ್ಯದ ಬಗ್ಗೆ ಮೋಹನ್ ಭಾಗವತ್ ಹೇಳಿಕೆ

Share
ಮೋಹನ್ ಭಾಗವತ್
Share

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು 1996ರಲ್ಲಿ ಹರಿಯಾಣದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ವೇಳೆ ಆರ್‌ಎಸ್‌ಎಸ್ ಸ್ವಯಂಸೇವಕರು ಮಾಡಿದ ರಕ್ಷಣಾ ಕಾರ್ಯಾಚರಣೆಯನ್ನು ಸ್ಮರಿಸಿದ್ದಾರೆ.

ವಿಡಿಯೋ ವೀಕ್ಷಿಸಿ: 

ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ (One World, One Humanity) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,  ಸಂಕಷ್ಟದ ಸಮಯದಲ್ಲಿ ಧರ್ಮ ಅಥವಾ ಜಾತಿ ನೋಡದೆ ಕೇವಲ ಮಾನವೀಯತೆಯ ಆಧಾರದ ಮೇಲೆ ಸೇವೆ ಸಲ್ಲಿಸುವುದು ಸಂಘದ ತತ್ವವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆಯ ಹಿನ್ನೆಲೆ

ನವೆಂಬರ್ 12, 1996ರಂದು ಹರಿಯಾಣದ ಚರಖಿ ದಾದ್ರಿ ಬಳಿ ಆಕಾಶದಲ್ಲಿ ಸೌದಿ ಅರೇಬಿಯನ್ ಏರ್‌ಲೈನ್ಸ್ ಮತ್ತು ಕಝಾಕಿಸ್ತಾನ್ ಏರ್‌ಲೈನ್ಸ್ ವಿಮಾನಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿತ್ತು. ಇತಿಹಾಸದ ಅತ್ಯಂತ ಭೀಕರ ವೈಮಾನಿಕ ದುರಂತಗಳಲ್ಲಿ ಒಂದಾದ ಇದರಲ್ಲಿ 349 ಜನ ಪ್ರಾಣ ಕಳೆದುಕೊಂಡಿದ್ದರು. ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಭಾರತೀಯ ಮುಸ್ಲಿಂ ಕಾರ್ಮಿಕರಾಗಿದ್ದರು.

ಮೋಹನ್ ಭಾಗವತ್ ಅವರ ಹೇಳಿಕೆ

ಈ ಘಟನೆಯಲ್ಲಿ ಸಂಘದ ಕಾರ್ಯಕರ್ತರು ವಹಿಸಿದ ಪಾತ್ರವನ್ನು ನೆನಪಿಸಿಕೊಂಡ ಮೋಹನ್ ಭಾಗವತ್, “ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಬಹುಪಾಲು ಪ್ರಯಾಣಿಕರು ಮುಸ್ಲಿಮರಾಗಿದ್ದರು. ದುರಂತದ ಮಾಹಿತಿ ತಿಳಿದ ತಕ್ಷಣ ನಮ್ಮ ಸ್ವಯಂಸೇವಕರು ಮೊದಲು ಅಲ್ಲಿಗೆ ಧಾವಿಸಿದರು. ಅವರು ಗಾಯಗೊಂಡವರಿಗೆ ಚಿಕಿತ್ಸೆ ನೀಡಿದರು, ಮೃತದೇಹಗಳನ್ನು ಹೊರತೆಗೆದರು ಮತ್ತು ಅಂತಿಮ ವಿಧಿವಿಧಾನಗಳಿಗೆ ವ್ಯವಸ್ಥೆ ಮಾಡಿದರು. ಮೃತರ ಸಂಬಂಧಿಕರು ಬಂದಾಗ ಗುರುತು ಹಿಡಿಯಲು ಸಹಾಯ ಮಾಡಿದರು. ಈ ರಕ್ಷಣಾ ಕಾರ್ಯ ಮಾಡುವಾಗ ಇವರು ಮುಸ್ಲಿಮರು ಎಂಬ ಯಾವುದೇ ತಾರತಮ್ಯದ ಆಲೋಚನೆ ನಮ್ಮ ಮನಸ್ಸಿನಲ್ಲಿ ಬರಲಿಲ್ಲ” ಎಂದು ಹೇಳಿದ್ದಾರೆ.

ಮಾನವೀಯತೆಯ ಆಧಾರದ ಮೇಲೆ ಆರ್‌ಎಸ್‌ಎಸ್ ಕಾರ್ಯಕರ್ತರು ಯಾವುದೇ ತಾರತಮ್ಯವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ಈ ಐತಿಹಾಸಿಕ ಘಟನೆಯ ಮೂಲಕ ಭಾಗವತ್ ವಿವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *