Home ದಾವಣಗೆರೆ ಕೇಂದ್ರ ಸಚಿವರು, ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇಲ್ಲವೇ?: ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ!
ದಾವಣಗೆರೆಬೆಂಗಳೂರು

ಕೇಂದ್ರ ಸಚಿವರು, ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇಲ್ಲವೇ?: ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ!

Share
ಕೇಂದ್ರ
Share

ಬೆಂಗಳೂರು: ಕೇಂದ್ರ ಸಚಿವರು, ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇಲ್ಲವೇ?. ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕಳೆದ ಸರ್ಕಾರಗಳಲ್ಲಿ ಕಳಂಕಿತ ಸಚಿವರು ಇರಲಿಲ್ಲವೇ? ನಾಗೇಂದ್ರ ಅವರು ಕಳೆದ 2 ವರ್ಷಗಳಿಂದ ಸಂಪುಟದಿಂದ ಹೊರಗಿದ್ದರು. ಇಲಾಖೆ ಆಂತರಿಕ ತನಿಖೆಯಲ್ಲಿ ಪ್ರಕರಣದಲ್ಲಿ ನಾಗೇಂದ್ರ ಅವರ ಕೈವಾಡ ಇಲ್ಲ ಎಂದು ಬಂದಿದೆ. ಹೀಗಾಗಿ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿದ್ದೇವೆ. ಬಿ ರಿಪೋರ್ಟ್ ಬರೆಯುವ ಮುನ್ನ ಸಿಬಿಐ, ಇಡಿ ಮಧ್ಯಪ್ರವೇಶ ಮಾಡಿದೆ ಎಂದು ತಿಳಿಸಿದರು.

ಈ ಸಂಸ್ಥೆಗಳು ನಾಗೇಂದ್ರ ಮನೆಯಲ್ಲಿ ಒಂದು ರೂಪಾಯಿಯೂ ಪತ್ತೆ ಮಾಡಿಲ್ಲ. ಹಗರಣದಲ್ಲಿ ಲೂಟಿ ಮಾಡಿದ್ದ 95% ಹಣವನ್ನು ವಾಪಸ್ ಪಡೆಯಲಾಗಿದೆ. ನಾಗೇಂದ್ರ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷ ಹೇಳಿದಂತೆ ಕೇಳುತ್ತಾರೆ
ಎಂದು ತಿಳಿಸಿದರು.

ಯುವ ಪೀಳಿಗೆ ದೇಶದ ಧ್ವನಿ. ನಾವು ಬೇರೆ ಪೀಳಿಗೆಯಲ್ಲಿದ್ದೇವೆ. ಅವರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರೇ ಉದ್ಯೋಗ ಸೃಷ್ಟಿಸುವಂತೆ ಪ್ರೋತ್ಸಾಹಿಸಬೇಕು. ಯುವಕರಿಗೆ ಅವಕಾಶ ನೀಡದೆ ದೇಶದ ಪ್ರಗತಿ ಅಸಾಧ್ಯ ಎಂದು ಪ್ರತಿಪಾದಿಸಿದರು.

ಭಾರತ ಜೋಡೋ ಯುವ ಸಂಘದಡಿ ಯುವಕರಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಬೇಕು. ಯುವಕರು ಡ್ರಗ್ಸ್ ಹಾಗೂ ಇತರ ವ್ಯಸನದಿಂದ ದೂರ ಇಡಬೇಕು. ಯುವ ಸಮುದಾಯವನ್ನು ವಿವಿಧ ಚಟುವಟಿಕೆಯಲ್ಲಿ ನಿರತರಾಗುವಂತೆ ನೋಡಿಕೊಳ್ಳಬೇಕು. ಅವರಿಗೆ ಉದ್ಯೋಗ ನೀಡುವುದರ ಜೊತೆಗೆ ಸಂಜೆ ಮೇಲೆ ಬೇರೆ ವ್ಯಸನ ಸಿಲುಕದಂತೆ ನೋಡಿಕೊಳ್ಳಬೇಕು.ನಾವು ರಾಜ್ಯದೆಲ್ಲೆಡೆ 10 ಸಾವಿರ ಸಂಘ ರಚಿಸಲು ಮುಂದಾಗಿದ್ದೇವೆ. ನಾವು ಯುವ ನಾಯಕರನ್ನು ಬೆಳೆಸಬೇಕು. ಕೇವಲ ರಾಜಕೀಯವಾಗಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ರೂಪಿಸಬೇಕು ಎಂದು ಕರೆ ನೀಡಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles