ಬೆಂಗಳೂರು: ಪಾರ್ಕ್ ಜಾಗಗಳ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಡಿ. ಕೆ. ಶಿವಕುಮಾರ್ ಅವರು, ಬಿಜೆಪಿ ಕಾಲದಲ್ಲಿ ಪಾರ್ಕ್ ಗಳನ್ನು ತಮ್ಮ ಸಂಘಗಳು ಹಾಗೂ ಪಕ್ಷದ ಕಾರ್ಯಕರ್ತರ ಚಟುವಟಿಕೆಗಳಿಗೆ ನೀಡಲಾಗಿತ್ತು. ನಾವು ಕೇವಲ ಶೇಕಡಾ 5ರಷ್ಟು ಮಾತ್ರ ಬಯಲು ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುತ್ತಿದ್ದೇವೆ. ಖಾಸಗಿಯವರಿಗೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅಕ್ರಮ ಒತ್ತುವರಿ ತಡೆಯಬೇಕು ಎಂದು ನಾವು ಮಸೂದೆ ತಂದಿದ್ದೇವೆ. ನನ್ನ ಅವಧಿಯಲ್ಲಿ ಲಾಲ್ ಬಾಗ್ ಮಾದರಿಯ 5 ವೃಕ್ಷೋದ್ಯಾನ ನಿರ್ಮಿಸಲು ಮುಂದಾಗಿದ್ದೇವೆ. ಅರಣ್ಯ ಇಲಾಖೆ ಜೊತೆಗೆ ಚರ್ಚಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ಈ ಯೋಜನೆ ಜಾರಿ ಮಾಡಿಯೇ ನಾನು ನಿಮ್ಮ ಮುಂದೆ ಬರುತ್ತೇನೆ ಎಂದು ತಿಳಿಸಿದರು.
ಪ್ರಧಾನಮಂತ್ರಿಗಳು ಹಾಗೂ ಹಣಕಾಸು ಸಚಿವರು ನಾಲ್ಕು ವರ್ಷಗಳ ಹಿಂದೆ ಈ ಯೋಜನೆಗೆ 5,400 ಕೋಟಿ ಘೋಷಿಸಿದರು. ಅದರ ಆಧಾರದ ಮೇಲೆ ಬೊಮ್ಮಯಿ ಅವರು ರಾಜ್ಯದ ಬಜೆಟ್ ನಲ್ಲಿ ಘೋಷಣೆ ಮಾಡಿದರು. ಇವರೆಗೂ ನಯಾಪೈಸೆ ನೀಡಿಲ್ಲ. ಇದೇ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾಡುತ್ತಿರುವ ತಾರತಮ್ಯವಾಗಿದೆ. ಜನ ಬಿಜೆಪಿಗೆ ಮತ ಹಾಕಿಲ್ಲ ಎಂದು ಈ ರೀತಿ ನಡೆಸಿಕೊಳ್ಳಬಾರದು. ಇದು ನ್ಯಾಯವೇ? ಎಂದು ಪ್ರಶ್ನಿಸಿದರು.
- 5 percent open space policy
- 5400 Crore Central Funds
- 5400 ಕೋಟಿ ಕೇಂದ್ರ ಅನುದಾನ
- Bengaluru Environment Projects
- Bengaluru Park Land Usage
- Congress vs BJP Karnataka
- DK Shivakumar
- Karnataka News
- Lalbagh Model Tree Parks
- ಅಕ್ರಮ ಒತ್ತುವರಿ ತಡೆ ಮಸೂದೆ
- ಕನ್ನಡಿಗರ ಹಕ್ಕು
- ಕರ್ನಾಟಕ ಕಾಂಗ್ರೆಸ್ ಸರ್ಕಾರ 50 ಸಾವಿರ ಕೋಟಿ.
- ಡಿ. ಕೆ. ಶಿವಕುಮಾರ್
- ಬೆಂಗಳೂರು ಪಾರ್ಕ್ ವಿವಾದ
- ಲಾಲ್ ಬಾಗ್ ಮಾದರಿ ವೃಕ್ಷೋದ್ಯಾನ





Leave a comment