ಫರೀದಾಬಾದ್: ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಪತಿಯನ್ನು ವಿಶೇಷ ಚೇತನ ಪತ್ನಿ ಹಾಗೂ ಆಕೆಯ ಪ್ರೇಮಿ ಸೇರಿ ಭೀಕರವಾಗಿ ಹತ್ಯೆ ಮಾಡಿ, ಶವವನ್ನು ಮನೆಯ ಸಮೀಪವೇ ಹೂತಿಟ್ಟಿರುವ ಘಟನೆ ಹರಿಯಾಣದ ಫರೀದಾಬಾದ್‌ನ ಮೊಜಾಬಾದ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತನನ್ನು ಶ್ಯಾಮ್‌ವೀರ್ (42) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಪೋಲಿಸರ ಮಾಹಿತಿಯಂತೆ, ಹರಿಯಾಣದ ಮೊಜಾಬಾದ್ ಗ್ರಾಮದಲ್ಲಿ ವಾಸಿಸುತ್ತಿದ್ದ ಶ್ಯಾಮ್‌ವೀರ್‌ಗೆ ಆತನ ಪತ್ನಿ ಕೇಶವ್ ಮತ್ತು ಮನೆಯಲ್ಲೇ ಉಳಿದುಕೊಂಡಿದ್ದ ಪ್ರೇಮಿ ಕಾಮತ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ತಿಳಿದುಬಂದಿತ್ತು. ಇದರಿಂದಾಗಿ ದಂಪತಿ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು.
ಆಗಸ್ಟ್ 16 ರಂದು ಕಾಮತ್ ಹಾಗೂ ಕೇಶವ್ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು. ಕಾಮತ್, ಶ್ಯಾಮ್‌ವೀರ್‌ಗೆ ಮದ್ಯ ಕುಡಿಸಿ, ಆತ ಪ್ರಜ್ಞೆ ತಪ್ಪಿದಾಗ ತಲೆಗೆ ಸಿಮೆಂಟ್ ಟೈಲ್ಸ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಈ ವೇಳೆ ಶಬ್ದ ಹೊರಗೆ ಕೇಳಿಸದಂತೆ ಪತ್ನಿ ಕೇಶವ್ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಳು. ಬಳಿಕ ಇಬ್ಬರೂ ಸೇರಿ ಶವವನ್ನು ಮನೆಯ ಹತ್ತಿರದ ಗುಂಡಿಯಲ್ಲಿ ಹೂತುಹಾಕಿದ್ದರು.
ಬೆಳಕಿಗೆ ಬಂದಿದ್ದು ಹೇಗೆ?
ಸುಮಾರು 8 ದಿನಗಳ ಕಾಲ ಶ್ಯಾಮ್‌ವೀರ್ ಪತ್ತೆಯಾಗದಿದ್ದಾಗ ಆತನ ಸಹೋದರ ಮತ್ತು ಕುಟುಂಬಸ್ಥರಿಗೆ ಅನುಮಾನ ವ್ಯಕ್ತವಾಯಿತು. ಕೇಶವ್ ನೀಡಿದ ಅಸಮಾಧಾನಕರ ಉತ್ತರದಿಂದ ಸಂಶಯಗೊಂಡ ಕುಟುಂಬಸ್ಥರು ಮನೆಯ ಪಕ್ಕದ ಪೊದೆಗಳಿದ್ದ ಜಾಗವನ್ನು ಅಗೆದಾಗ ಶ್ಯಾಮ್‌ವೀರ್ ಶವ ಪತ್ತೆಯಾಗಿದೆ.
ಆಗಸ್ಟ್ 24 ರಂದು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು, ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾದ 24 ಗಂಟೆಗಳ ಒಳಗೆ ಕ್ರೈಮ್ ಬ್ರಾಂಚ್ ಪೊಲೀಸರು ಆರೋಪಿಗಳಾದ ಕೇಶವ್ ಹಾಗೂ ಕಾಮತ್‌ರನ್ನು ಬಂಧಿಸಿದ್ದಾರೆ.





Leave a comment