Home ಕ್ರೈಂ ನ್ಯೂಸ್ ಯುವಜನರ ತಲುಪಲು ಕಾಂಗ್ರೆಸ್ ಮಾಸ್ಟರ್‌ಪ್ಲಾನ್: CJP ಶೈಲಿಯಲ್ಲೇ ರಾಹುಲ್ ಗಾಂಧಿ ರಣತಂತ್ರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಯುವಜನರ ತಲುಪಲು ಕಾಂಗ್ರೆಸ್ ಮಾಸ್ಟರ್‌ಪ್ಲಾನ್: CJP ಶೈಲಿಯಲ್ಲೇ ರಾಹುಲ್ ಗಾಂಧಿ ರಣತಂತ್ರ!

Share
ರಾಹುಲ್ ಗಾಂಧಿ
Share

ನವದೆಹಲಿ: ಯುವಜನರ ಮಧ್ಯೆ ತೀವ್ರ ಸಂಚಲನ ಮೂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಘಟನೆಯ ಏಳಿಗೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಹೊಸ ರಾಜಕೀಯ ತಂತ್ರ ರೂಪಿಸಿದೆ. ಹಾಗಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಯುವಸಮುದಾಯ ಸೆಳೆಯಲು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸತೊಡಗಿದ್ದಾರೆ.

CJP ಜೊತೆ ನೇರ ಸಂಘರ್ಷಕ್ಕಿಳಿಯದೇ, ಆ ಸಂಘಟನೆಯಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಅವರ ಯಶಸ್ವಿ ಸಂವಹನ ಶೈಲಿಯನ್ನು ಅಳವಡಿಸಿಕೊಂಡು ‘ಜನ್ ಝೀ’ (Gen Z) ಯುವಜನತೆಯನ್ನು ತಲುಪುವುದು ಕಾಂಗ್ರೆಸ್‌ನ ಪ್ರಮುಖ ಉದ್ದೇಶವಾಗಿದೆ.

‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದ ಮೂಲಕ ರಾಹುಲ್ ಗಾಂಧಿ ಯುವಜನರ, ಅದರಲ್ಲೂ ಮುಖ್ಯವಾಗಿ ಯುವತಿಯರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಇತ್ತೀಚೆಗೆ ಪುಣೆಯಲ್ಲಿ ನಡೆದ ಸಮಾವೇಶ ಹಾಗೂ ಇನ್‌ಸ್ಟಾಗ್ರಾಮ್ ‘ಆಸ್ಕ್ ಮಿ ಎನಿಥಿಂಗ್’ ಸಂವಾದಗಳು ಈ ತಂತ್ರದ ಭಾಗವಾಗಿವೆ.

ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಅವರ ಡಿಜಿಟಲ್ ಪ್ರಭಾವಕ್ಕೆ ಪ್ರತಿಯಾಗಿ, ಕಾಂಗ್ರೆಸ್ ತನ್ನ ಪಕ್ಷದ ಸಂಘಟನಾತ್ಮಕ ಬಲ, ವಿದ್ಯಾರ್ಥಿ ವಿಭಾಗ (NSUI) ಹಾಗೂ ತನ್ನಡಿಯಲ್ಲಿರುವ ರಾಜ್ಯ ಸರ್ಕಾರಗಳ ಮೂಲಕ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles