ಮುಂಬೈ: ಬಾಲಿವುಡ್ ನಟಿ ತಾಪಸಿ ಪನ್ನು ಅಭಿನಯದ, ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ ‘ಗಾಂಧಾರಿ’ ಸಿನಿಮಾ ಇದೀಗ ಕಥೆಯ ಹಕ್ಕುಸ್ವಾಮ್ಯ (ಕಾಪಿರೈಟ್) ವಿವಾದದಲ್ಲಿ ಸಿಲುಕಿಕೊಂಡಿದೆ.
ಈ ಸಿನಿಮಾದ ಕಥೆ ಮತ್ತು ಶೀರ್ಷಿಕೆ ತಮ್ಮ 2019ರ ಮೂಲ ಕಲ್ಪನೆಯಿಂದ ಕದಿಯಲಾಗಿದೆ ಎಂದು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಹಾಗೂ ಸೆಂಟ್ರಲ್ ಜಿಎಸ್ಟಿ ಇನ್ಸ್ಪೆಕ್ಟರ್ ಕಲ್ಯಾಣ್ ಬಂಡಿ ಆರೋಪಿಸಿದ್ದಾರೆ.
ಕಲ್ಯಾಣ್ ಬಂಡಿ ಪ್ರಕಾರ, ಮಗುವಿನ ಮಾನವ ಸಾಗಣೆ ಜಾಲದ ವಿರುದ್ಧ ಹೋರಾಡುವ ತಾಯಿಯ ಕಥೆಯನ್ನು ಒಳಗೊಂಡ ‘ಗಾಂಧಾರಿ’ ಕಥೆಯನ್ನು 2019ರಲ್ಲೇ ಬರೆದು ಸ್ಕ್ರೀನ್ರೈಟರ್ಸ್ ಅಸೋಸಿಯೇಷನ್ನಲ್ಲಿ ನೋಂದಾಯಿಸಿದ್ದರು.
ಈ ಕಥೆಯನ್ನು ಪ್ರಸ್ತುತ ನೆಟ್ಫ್ಲಿಕ್ಸ್ ಉಪಾಧ್ಯಕ್ಷೆಯಾಗಿರುವ ಮೋನಿಕಾ ಶೇರ್ಗಿಲ್ ಅವರಿಗೆ 2019ರಲ್ಲೇ ಹಂಚಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಆದರೆ, ಈಗ ಅದೇ ಶೀರ್ಷಿಕೆ ಹಾಗೂ ಕಥೆಯೊಂದಿಗೆ ಕನಿಕಾ ಧಿಲ್ಲೋನ್ ಹೆಸರಿನಲ್ಲಿ ಸಿನಿಮಾ ಬರುತ್ತಿರುವುದು ಆಶ್ಚರ್ಯ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಕಥಾ ಪಿಕ್ಚರ್ಸ್ ಸ್ಪಷ್ಟನೆ:
ಈ ಆರೋಪಗಳನ್ನು ಕನಿಕಾ ಧಿಲ್ಲೋನ್ ಅವರ ನಿರ್ಮಾಣ ಸಂಸ್ಥೆ ‘ಕಥಾ ಪಿಕ್ಚರ್ಸ್’ ಖಂಡಿಸಿದೆ. ‘ಗಾಂಧಾರಿ’ ಸಂಪೂರ್ಣವಾಗಿ ಕನಿಕಾ ಧಿಲ್ಲೋನ್ ಅವರು ಸ್ವತಃ ಬರೆದ ಮೂಲ ಕಥೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ. ‘ಗಾಂಧಾರಿ’ ಸಿನಿಮಾ ಸೆಪ್ಟೆಂಬರ್ 3 ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ.





Leave a comment