ನವದೆಹಲಿ: ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ತಮ್ಮ ಅನಾರೋಗ್ಯಪೀಡಿತ ಮಗುವಿಗೆ ತುರ್ತಾಗಿ ವೈದ್ಯರ ಭೇಟಿ ಸಿಗದೆ ಪರದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೃತಿ ಜೈಸ್ವಾಲ್ ಶ್ರೀವಾಸ್ತವ ಎಂಬುವವರ ಮಗು ಕಳೆದ 10 ದಿನಗಳಿಂದ ತೀವ್ರ ಕೆಮ್ಮಿನಿಂದ ಬಳಲುತ್ತಿತ್ತು.
ಗುರುವಾರ ಸ್ಥಳೀಯ ವೈದ್ಯಕೀಯ ಕೇಂದ್ರಕ್ಕೆ ಕರೆ ಮಾಡಿದಾಗ, ಮುಂದಿನ ಬುಧವಾರದವರೆಗೆ (ಒಂದು ವಾರ) ಯಾವುದೇ ಅಪಾಯಿಂಟ್‌ಮೆಂಟ್ ಖಾಲಿ ಇಲ್ಲ ಎಂದು ತಿಳಿಸಲಾಗಿದೆ. ಬಳಿಕ ತುರ್ತು ಕ್ಲಿನಿಕ್‌ಗೆ (After-hours clinic) ತೆರಳಿದರೂ, ಅಲ್ಲಿನ ವಿಪರೀತ ಜನದಟ್ಟಣೆಯಿಂದಾಗಿ ‘ಕ್ಲಿನಿಕ್ ಭರ್ತಿಯಾಗಿದೆ, ಇಂದು ಹೊಸ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಬೋರ್ಡ್ ಹಾಕಲಾಗಿತ್ತು.
ಈ ಅನುಭವದ ಕುರಿತು ಮಾತನಾಡಿರುವ ಅವರು, “ನ್ಯೂಜಿಲೆಂಡ್ ಅಭಿವೃದ್ಧಿ ಹೊಂದಿದ ದೇಶವಾಗಿದ್ದರೂ, ಮಕ್ಕಳ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಭಾರತದ ಆರೋಗ್ಯ ವ್ಯವಸ್ಥೆಯೇ ಅತ್ಯುತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿಯಾದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಕಾಣಬಹುದು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.





Leave a comment