ಬಾಂಗ್ಲಾ: ಬಾಂಗ್ಲಾದೇಶದ ಖ್ಯಾತ ನಟಿ ಹಾಗೂ ನಿರ್ಮಾಪಕಿ ರೈಮಾ ಇಸ್ಲಾಂ ಶಿಮು ಅವರ ಕೊಲೆ ಪ್ರಕರಣವು ಕಲೆ ಮತ್ತು ಅಪರಾಧ ಲೋಕದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಶೂಟಿಂಗ್‌ಗೆಂದು ಮನೆಯಿಂದ ಹೊರಟಿದ್ದ ನಟಿ ಮರುದಿನ ಕಿರಾನಿಗಂಜ್‌ನ ಸೇತುವೆಯೊಂದರ ಬಳಿ ಮೂಟೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತಿಯೇ ಈ ಕೃತ್ಯದ ಮಾಸ್ಟರ್‌ಮೈಂಡ್ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ದಾಂಪತ್ಯ ಕಲಹ ಹಾಗೂ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಪತಿ ಶಖಾವತ್ ಅಲಿ ನೊಬೆಲ್ ತನ್ನ ಸ್ನೇಹಿತನ ಸಹಾಯದಿಂದ ನಟಿಯನ್ನು ಕೊಲೆ ಮಾಡಿ, ಶವವನ್ನು ತುಂಡರಿಸಿ ಬೋರೆಯಲ್ಲಿ ಕಟ್ಟಿ ಹೊರಗೆ ಎಸೆದಿದ್ದನು.
ಕಾರಿನಲ್ಲಿದ್ದ ನೈಲಾನ್ ಹಗ್ಗ ಹಾಗೂ ಬ್ಲೀಚ್ ವಾಸನೆಯ ಸುಳಿವಿನ ಮೂಲಕ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.





Leave a comment