Home ದಾವಣಗೆರೆ ಉನ್ನತ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಎದುರಾಗಿರುವ ಸವಾಲುಗಳು: ರಾಹುಲ್ ಗಾಂಧಿ ಎದುರು ಅಳಲು ತೋಡಿಕೊಂಡ ವಿದ್ಯಾರ್ಥಿನಿಯರು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಉನ್ನತ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಎದುರಾಗಿರುವ ಸವಾಲುಗಳು: ರಾಹುಲ್ ಗಾಂಧಿ ಎದುರು ಅಳಲು ತೋಡಿಕೊಂಡ ವಿದ್ಯಾರ್ಥಿನಿಯರು!

Share
ರಾಹುಲ್ ಗಾಂಧಿ
Share

ಪೂಣೆ: ದೇಶದಲ್ಲಿ ಮಹಿಳೆಯರ ಉನ್ನತ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಎದುರಾಗುತ್ತಿರುವ ಅಡೆತಡೆಗಳ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ‘ಛಾತ್ರನ್ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವಿದ್ಯಾರ್ಥಿನಿಯರು ಮುಕ್ತವಾಗಿ ಮಾತುಕತೆ ನಡೆಸಿದರು.

ಈ ಸಂವಾದದಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು, ಲೈಂಗಿಕ ಕಿರುಕುಳ, ವೈಯಕ್ತಿಕ ಸುರಕ್ಷತೆಯ ಕಾಳಜಿ, ಸಾರ್ವಜನಿಕ ಸಾರಿಗೆಯಲ್ಲಿನ ಅಸುರಕ್ಷತೆ ಹಾಗೂ ಆರ್ಥಿಕ ಮುಗ್ಗಟ್ಟುಗಳು ಮಹಿಳೆಯರ ಶಿಕ್ಷಣಕ್ಕೆ ದೊಡ್ಡ ತೊಡಕಾಗಿ ಪರಿಣಮಿಸಿವೆ ಎಂದು ಆರೋಪಿಸಿದರು. ದಿನನಿತ್ಯದ ಪ್ರಯಾಗದಿಂದ ಹಿಡಿದು ಉನ್ನತ ವ್ಯಾಸಂಗದವರೆಗೂ ಹೆಣ್ಣುಮಕ್ಕಳು ಹಲವು ಹಂತಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಪಾಲಘರ್‌ನ ಅರ್ಥಶಾಸ್ತ್ರ ವಿದ್ಯಾರ್ಥಿನಿ ಸುಚಿತ್ರಾ ಪಾಗಿ, ತಾನು ಶಾಲೆಯಿಂದ ಮನೆಗೆ ಮತ್ತು ಪ್ರಯಾಣಿಸುವಾಗ ಎದುರಿಸಿದ ಕಿರುಕುಳದ ಅನುಭವಗಳನ್ನು ಹಂಚಿಕೊಂಡರು. ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಕಾರಣಕ್ಕೆ ಪೋಷಕರು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಿಂಜರಿಯುತ್ತಾರೆ ಎಂದು ಪುಣೆಯ ಮನೋವಿಜ್ಞಾನ ವಿದ್ಯಾರ್ಥಿನಿ ಮೈತ್ರಿ ಅಭಿಪ್ರಾಯಪಟ್ಟರು.

ಸೈಬರ್ ಸೆಕ್ಯುರಿಟಿ ಮುಂತಾದ ವಿಶೇಷ ಕೋರ್ಸ್‌ಗಳ ಅಧಿಕ ಶುಲ್ಕದ ಬಗ್ಗೆ ಸೈಬರ್ ಮತ್ತು ಡಿಜಿಟಲ್ ಸೈನ್ಸ್ ವಿದ್ಯಾರ್ಥಿನಿ ಪ್ರಜ್ಞಾ ಗವಾಂಡೆ ಕಳವಳ ವ್ಯಕ್ತಪಡಿಸಿ, ಸರ್ಕಾರಿ ಕಾಲೇಜುಗಳಲ್ಲಿ ಇಂತಹ ಕೋರ್ಸ್‌ಗಳನ್ನು ವಿಸ್ತರಿಸಬೇಕು ಹಾಗೂ ವಿದ್ಯಾರ್ಥಿವೇತನ ನೀಡಬೇಕೆಂದು ಒತ್ತಾಯಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles